ಎರಡು ತುಂಡಾದ ಏರ್ ಇಂಡಿಯಾ ವಿಮಾನ (Updated)

ಪ್ರಗತಿವಾಹಿನ ಸುದ್ದಿ, ಕ್ಯಾಲಿಕೆಟ್ – ದುಬೈ ನಿಂದ ಕ್ಯಾಲಿಕೆಟ್ ಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾಗಿದೆ.  ರನ್ ವೇ ನಲ್ಲಿ ಜಾರಿ 2 ತುಂಡಾಗಿ ಬಿದ್ದ ವಿಮಾನದಲ್ಲಿ ಸಿಬ್ಬಂದಿ ಸೇರಿ 190 ಪ್ರಯಾಣಿಕರಿದ್ದರು.

ಶುಕ್ರವಾರ ರಾತ್ರಿ 7.45ರ ವೇಳೆಗೆ ಈ ಘಟನೆ ನಡೆದಿದೆ. 5 ವರ್ಷದೊಳಗಿನ 28, 10 ವರ್ಷದೊಳಗಿನ 41 ಮಕ್ಕಳು ವಿಮಾನದಲ್ಲಿದ್ದರು.

Home add -Advt

ಒಂದೇ ಭಾರತ ಮಿಷನ್ ಅಡಿಯಲ್ಲಿ ಈ ವಿಮಾನ ದುಬೈನಿಂದ ಆಗಮಿಸಿತ್ತು.

ಪೈಲಟ್ ಸೇರಿ 20ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದ್ದು, 16 ಜನರ ಸಾವು ಖಚಿತವಾಗಿದೆ. ಎಲ್ಲ 190 ಜನರಿಗೂ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. 25 ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿವೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.

ಪೈಲಟ್ ದೀಪಕ್ ಸಾಠೆ ಮತ್ತು ಕೋ ಪೈಲಟ್ ಕೂಡ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವಿಮಾನದ ಮುಂದಿನ ಭಾಗದಲ್ಲಿ ಕುಳಿತಿದ್ದ ಬಹುತೇಕರು ಸಾವಿಗೀಡಾಗಿದ್ದಾರೆ. ಮಧ್ಯಭಾಗದಲ್ಲಿದ್ದವರು ಗಂಭೀರ ಗಾಯಗೊಂಡಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದವರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

Related Articles

Back to top button