ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಬಿಇಒ ಸೇರಿದಂತೆ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ 7 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನೂ ಕೆಲವರ ಪರೀಕ್ಷಾ ವರದಿ ಬರಬೇಕಿದೆ.
ಈ ಹಿನ್ನೆಲೆಯಲ್ಲಿ ಸೋಮವಾರ ಬಿಇಒ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಸೆನಿಟೈಸ್ ಮಾಡಿ, ಬ್ಯಾನರ್ ಅಳವಡಿಸಲಾಗಿದೆ.
ಖಾನಾಪುರ ಬಿಇಒ ಯಕ್ಕುಂಡಿ ಕ್ರಿಯಾಶೀಲರಾಗಿದ್ದು, ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇಲಾಖೆಯ ಸೂಚನೆಯಂತೆ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ತಾಲೂಕಿನಲ್ಲಿ ಶಿಕ್ಷಣ ಇಲಾಖೆ ಕ್ರಿಯಾಶೀಲವಾಗಿರುವಂತೆ ನೋಡಿಕೊಂಡಿದ್ದರು. ಅನೇಕ ಸಭೆಗಳನ್ನು ನಡೆಸಿ ಅಧೀನ ಸಿಬ್ಬಂದಿಗೆ ನಿರ್ದೇಶನಗಳನ್ನು ನೀಡುತ್ತಿದ್ದರು. ಎಸ್ಎಸ್ಎಲ್ ಸಿ ಪರೀಕ್ಷೆ ವೇಳೆ ಕೂಡ ನಿರಂತರ ತಪಾಸಣೆ ನಡೆಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಿದ್ದರು.
ಆದರೆ ಇದೀಗ ಅವರಿಗೇ ಕೊರೋನಾ ಬಂದಿದ್ದು, ಅವರ ವಾಹನ ಚಾಲಕ ಮತ್ತು ಬಿಇಒ ಕಚೇರಿಯ 5 ಜನ ವಿಷಯ ಪರೀಕ್ಷಕರಿಗೂ ಸೋಂಕು ಪತ್ತೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ