ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಹವಾಮಾನ ವೈಪರೀತ್ಯದಿಂದ ವಿಮಾನವೊಂದು ಒಂದೂವರೆ ಗಂಟೆ ಕಾಲ ಆಗಸದಲ್ಲೇ ಸುತ್ತಾಡಿ ಆತಂಕ ಸೃಷ್ಟಿಸಿತ್ತು.
ಕೇಂದ್ರದ ಮಾಜಿ ಸಚಿವ, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 49 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಇಂದು ಬೆಳಗ್ಗೆ 8.55ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ದಟ್ಟ ಮೊಡ ಮತ್ತು ಮಳೆಯಿಂದಾಗಿ ಸಿಗ್ನಲ್ ಸಿಗಲೇ ಇಲ್ಲ. ಹಾಗಾಗಿ ವಿಮಾನ ಆಗಸದಲ್ಲೇ ಸುತ್ತಾಡಿತು.
ನಂತರ ಗೋವಾ ಅಥವಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸುವ ಕುರಿತು ಯೋಚಿಸಲಾಗಿತ್ತು. ಆದರೆ 10.25ರ ವೇಳೆಗೆ ಸಿಗ್ನಲ್ ಸಿಕ್ಕಿದ ಕಾರಣ ವಿಮಾನವನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಯೇ ಸುರಕ್ಷಿತವಾಗಿ ಇಳಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ