Kannada NewsKarnataka NewsLatest

804.13 ಕೋಟಿ ರೂ ವೆಚ್ಚದ ಯೋಜನೆ ಮರುಮಂಜೂರು ಮಾಡಿಸುವಲ್ಲಿ ಶಾಸಕ ಅಭಯ ಪಾಟೀಲ ಯಶಸ್ವಿ

ಕೈಬಿಟ್ಟು ಹೋಗಿದ್ದ ಯೋಜನೆ ಮತ್ತೆ ಮಂಜೂರು; ಬೆಳಗಾವಿ ಮಹಾನಗರದ ಮನೆ, ಮನೆಗೆ ನೀರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಿಂದ ಕೈಬಿಟ್ಟು ಹೋಗಿದ್ದ ನಿರಂತರ ನೀರು 24/7 ಮಹತ್ವದ ನೀರಿನ ಯೋಜನೆಗೆ ಮಂಜೂರಾತಿ ಪಡೆದು ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ಹಂತಕ್ಕೆ ತರುವಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಯಶಸ್ವಿಯಾಗಿದ್ದಾರೆ.
ಹಲವಾರು ವರ್ಷಗಳ ಹಿಂದೆಯೇ ಬೆಳಗಾವಿ ಮಹಾನಗರಕ್ಕೆ 24/7 ಕುಡಿಯುವ ನೀರಿನ ಯೋಜನೆ ಮಂಜೂರಾಗಿತ್ತು. ಕಾರಣಾಂತರಗಳಿಂದ ಈ ಯೋಜನೆ ರದ್ದಾಗಿ ಅನುದಾನವೂ ವಾಪಸ್ ಹೋಗಿತ್ತು.  ಶಾಸಕ ಅಭಯ ಪಾಟೀಲ ಅಂದಿನ ಕೇಂದ್ರ ಸಚಿವ ಅನಂತಕುಮಾರ್ ಅವರನ್ನು ಭೇಟಿಯಾಗಿ ಅವರ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದರು.
ಎರಡು ವರ್ಷಗಳಿಂದ ವಿಶ್ವಬ್ಯಾಂಕ್ ಅಧಿಕಾರಿಗಳ ಜೊತೆ ಸರ್ಕಾರದ 13 ಇಲಾಖೆಗಳ ಕಾರ್ಯದರ್ಶಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ, ಕ್ಯಾಬಿನೆಟ್ ಮೀಟೀಂಗ್ ನಲ್ಲಿಯೂ ಈ ಯೋಜನೆಗೆ ಅನುಮೋದನೆ ಪಡೆಯುವಲ್ಲಿ ಶಾಸಕ ಅಭಯ ಪಾಟೀಲ್ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಮಹಾನಗರದ ಅತೀ ದೊಡ್ಡ, ನಗರ ನಿವಾಸಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಈ ಯೋಜನೆಯ ಕಾಮಗಾರಿಯನ್ನು ವಿಡಿಯೋ ಕಾನಫರೆನ್ಸ್ ಮೂಲಕ ಉದ್ಘಾಟಿಸುವಂತೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು ಅವರು ಸಮ್ಮತಿಯ ಬಳಿಕ ಯೋಜನೆಯ ಕಾಮಗಾರಿಯನ್ನು ಶುಭಾರಂಭ ಮಾಡುತ್ತೇವೆ
-ಶಾಸಕ ಅಭಯ ಪಾಟೀಲ  
571.35 ಕೋಟಿ ರೂ ವೆಚ್ಚದ ಯೋಜನೆ ಇದಾಗಿದೆ. 13 ವರ್ಷಗಳ ದುರಸ್ಥಿ ಮತ್ತು ನಿರ್ವಹಣೆ ಸೇರಿದಂತೆ ಒಟ್ಟು 804.13 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು ಈ ಯೋಜನೆಯ ಮೂಲಕ ಬೆಳಗಾವಿ ಮಹಾನಗರದ 85 ಸಾವಿರಕ್ಕಿಂತಲೂ ಹೆಚ್ವು ಮನೆಗಳಿಗೆ ನಿರಂತರವಾಗಿ 24/7 ನೀರು ತಲುಪಲಿದೆ.
ಈ ಯೋಜನೆಯ ಗುತ್ತಿಗೆಯನ್ನು ಲಾರ್ಸನ್ ಆ್ಯಂಡ್ ಟರ್ಬೋ ಕಂಪನಿ ಪಡೆದುಕೊಂಡಿದೆ. ನಾಳೆಯಿಂದ ಯೋಜನೆಯ ಸರ್ವೇ ಕಾಮಗಾರಿ ಆರಂಭಿಸುವಂತೆ ಇಂದು ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗು ಕಾಮಗಾರಿಯ ಗುತ್ತಿಗೆ ಪಡೆದಿರುವ ಕಂಪನಿಯ ಪ್ರತಿನಿಧಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರದ ನಿರಂತರ ನೀರು ಯೋಜನೆಯ ಸರ್ವೇ ಕಾರ್ಯ ಆರು ತಿಂಗಳ ಕಾಲ ನಡೆಯುತ್ತದೆ. 900 ಕಿ ಮೀಟರ್ ಪೈಪಲೈನ್, ಪಂಪಿಂಗ್ ಟ್ಯಾಂಕ್ ಗಳನ್ನು ನಿರ್ಮಿಸಲಾಗುತ್ತದೆ. ಒಂದು ವರ್ಷದಲ್ಲಿ 20 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಒಗದಗಿಸುವ ಜೊತೆಗೆ ನಾಲ್ಕು ವರ್ಷದಲ್ಲಿ ಬೆಳಗಾವಿ ಮಹಾನಗರದ 85 ಸಾವಿರಕ್ಕೂ ಹೆಚ್ಚು ಮನೆಗಳಿಗೆ 24/7 ನೀರಿನ ಸಂಪರ್ಕ ಒದಗಿಸುವ ಸಂಕಲ್ಪ ಮಾಡಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿ ಮಹಾನಗರದ ಅತೀ ದೊಡ್ಡ, ನಗರ ನಿವಾಸಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಈ ಯೋಜನೆಯ ಕಾಮಗಾರಿಯನ್ನು ವಿಡಿಯೋ ಕಾನಫರೆನ್ಸ್ ಮೂಲಕ ಉದ್ಘಾಟಿಸುವಂತೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದ್ದು ಅವರು ಸಮ್ಮತಿಯ ಬಳಿಕ ಯೋಜನೆಯ ಕಾಮಗಾರಿಯನ್ನು ಶುಭಾರಂಭ ಮಾಡುತ್ತೇವೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ಈ ಯೋಜನೆಯ ಪುನರ್ ಮಂಜೂರಾತಿಗೆ ವಿಶೇಷ ಮುತವರ್ಜಿ ವಹಿಸಿದ್ದ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರನ್ನು ಸ್ಮರಿಸಿರುವ ಅಭಯ ಪಾಟೀಲ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗು ವಿವಿಧ ಇಲಾಖೆಗಳ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button