Latest

ಬೆಂಗಳೂರು ಗಲಭೆ ಪ್ರಕರಣದ ಆರೋಪಿಗೆ ಐಸಿಸ್ ನಂಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣದ ಆರೋಪಿ ಓರ್ವನಿಗೆ ಐಸಿಸ್ ನಂಟಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕ್ರಿಯೆ ನೀಡಿರುವ ಮುತಾಲಿಕ್, ಬೆಂಗಳೂರು ಗಲಭೆಯಂತಹ ಸಾಕಷ್ಟು ಪ್ರಕ್ರಿಯೆಗಳು ನಮ್ಮ ರಾಜ್ಯದಲ್ಲಿ ನಡೆದಿದೆ. ಗಲಭೆ ಪ್ರಕರಣದ ಆರೋಪಿಯೊಬ್ಬನಿಗೆ ಐಸಿಸ್ ನಂಟು ಇದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆಯಾಗಬೇಕಿದೆ ಎಂದರು.

Home add -Advt

ಬೆಂಗಳೂರಿನಲ್ಲಿ ಗಲಾಟೆಗಳು ನಡೆದ ಬಳಿಕ ಮಾತ್ರವೇ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಜಾಗೃತ ಆಗುತ್ತದೆ. ಆದರೆ ನಿತ್ಯ 24 ಗಂಟೆಯೂ ಸರ್ಕಾರ, ಪೊಲೀಸರು ಮತ್ತು ಗುಪ್ತಚರ ಇಲಾಖೆ ಕಣ್ಣು, ಕಿವಿ ತೆರೆದು ಕೆಲಸ ಮಾಡಬೇಕಿದೆ. ಇಂಥಹ ಧಂಗೆಕೋರರನ್ನು ಹದ್ದುಬಸ್ತಿನಲ್ಲಿಡಬೇಕಿದೆಎಂದು ಹೇಳಿದರು.

Related Articles

Back to top button