ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳಕರ ಪತ್ರಿಕಾಗೋಷ್ಠಿ ಆಯೋಜಿಸಿ ತಮ್ಮ ಶಾಸಕತ್ವದ ಅವಧಿಯಲ್ಲಿ ಮಂಜೂರಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮಾಹಿತಿ ನೀಡಿದರು.
ವಿವರ ಹೀಗಿದೆ:
ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಬೋರ್ಡ್ ವತಿಯಿಂದ ಪಟ್ಟಣದ ಡೋರಗಲ್ಲಿ, ಹರಿಜನ ಗಲ್ಲಿ, ನಾಯ್ಕ ಗಲ್ಲಿ, ಶಾಹುನಗರದ ಡೊಂಬರ ಕಾಲೋನಿಯಲ್ಲಿ ೪೬೯ ಮನೆಗಳ ನಿರ್ಮಾಣಕ್ಕೆ ೨೮ ಕೋಟಿ ೭೧ ಲಕ್ಷ ರೂ ಗಳು ಮಂಜೂರಾಗಿದ್ದು, ಪ್ರತಿ ೩೬೦ ಚ.ಮೀ.ಮನೆಗೆ ೬.೮೦ ಲಕ್ಷ ರೂ.ಗಳ ಹಣ ವ್ಯಯವಾಗುವುದು.
ನಬಾರ್ಡ ಯೋಜನೆಯಡಿ ಮಂಜೂರಾದ ೧೫ ಕೋಟಿ ೧೨ ಲಕ್ಷ ರೂ.ಗಳಲ್ಲಿ ೨೦೧೯ ರ ವರೆಗೆ ಸುರಿದ ಮಳೆಗೆ ಹಾನಿಗೊಳಗಾದ ತಾಲೂಕಿನಲ್ಲಿ ೧೮೧ ವರ್ಗಕೋಣೆಗಳ ಪೈಕಿ ೭೨ ಶಾಲೆಗಳ ೧೩೯ ಕೋಣೆಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಈ ಸಲ ೫೭ ಶಾಲೆಗಳ ೯೦ ಕೋಣೆಗಳ ನಿರ್ಮಾಣಕ್ಕೆ ಪ್ರಸ್ತಾವನೆ ಇಡಲಾಗಿದೆ. ಎಸ್ಎಚ್ಡಿಪಿ ಅಡಿ ಪಾರಿಶ್ವಾಡ-ಖಾನಾಪುರ ರಸ್ತೆ ಅಭಿವೃದ್ಧಿಗೆ ೨೦ ಕೋಟಿ ರೂ.ಗಳು ಮಂಜೂರಾಗಿದೆ.
ಪಿ.ಎಂ.ಜಿ.ಎಸ್.ವೈ ವತಿಯಿಂದ ೧೮.೦೪ ಕೋಟಿ ರೂ.ಗಳ ಮಂಜೂರಾದ ಹಣದಲ್ಲಿ ಕರಂಬಳ-ಚಾಪಗಾವ ರೋಡ್ ಗೆ೫೨೩ ಲಕ್ಷ,ಜಾಂಬೋಟಿ-ಚಾಪೋಲಿ ರೋಡ್ ಗೆ ೫೬೯ ಲಕ್ಷ,ಹತ್ತರಗುಂಜಿ-ಡುಕ್ಕರವಾಡಿ-ಮುಂಡೇವಾಡಿ ಹಾಗೂ ಕಾಟಗಾಳಿ ವಾಯಾ ಮೋದೆಕೊಪ್ಪ ರೋಡ್ ಗೆ ೭೧೨ ಲಕ್ಷ ರೂ.ಗಳ ಖರ್ಚಿನಲ್ಲಿ ಅಭಿವೃದ್ಧಿ ಮಾಡಲಾಗುವುದು.
ಪ್ರಧಾನಮಂತ್ರಿ ಆದರ್ಶಗ್ರಾಮ ಯೋಜನೆ ವತಿಯಿಂದ ಕರೀಕಟ್ಟಿ ಗ್ರಾಮದಲ್ಲಿ ರೂ.೨೩ ಲಕ್ಷ ಹಣದಲ್ಲಿ ಶಾಲೆ ಮತ್ತು ಅಂಗನವಾಡಿ ಕಟ್ಟಡ ನಿರ್ಮಾಣ, ಒಳರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ೫.೧೧ ಲಕ್ಷ, ಗಟಾರ ನಿರ್ಮಾಣಕ್ಕೆ ೬.೮೯ ಲಕ್ಷ, ಬೀದಿದೀಪ ಸೇರಿ ವಿದ್ಯುತ್ ಗೆ ೫ ಲಕ್ಷ ಒಟ್ಟು ೪೦ ಲಕ್ಷ ರೂ.ಗಳ ಹಣ ಮಂಜೂರಾಗಿದೆ. ಮನೆಮನೆಗೆ ಗಂಗೆ ಯೋಜನೆಯಡಿ ಜಲಜೀವನ ಮಿಶನ್ ದಿಂದ ೫೮ ಗ್ರಾಮಗಳಿಗೆ ಅಂದಾಜು ೧೧ ಕೋಟಿ ರೂ.ಗಳು ಹಣ ಮಂಜೂರಾಗಿದ್ದು ಸರ್ವೆ ಮತ್ತು ಅಂದಾಜು ವೆಚ್ಚ ೨೫ ಕೋಟಿ ರೂ.ಗಳ ವರೆಗೆ ವರ್ಧಿಸಬಹುದಾಗಿದೆ.
ಇಟಗಿಯ ಏತ ನೀರಾವರಿ ಯೋಜನೆಗೆ ರೂ.೭.೨೨ ಕೋಟಿ, ಮಂಗೇನಕೊಪ್ಪ ರೂ.೨.೬೦ ಕೋಟಿ, ಕರಂಬಳ ೩.೭೭ ಕೋಟಿ, ಮುಗಳಿಹಾಳ ೨.೧೨ ಕೋಟಿ ರೂ.ಗಳು ರಾಜ್ಯ ಸರಕಾರ ಅಂದಾಜಿಸಿದ್ದು, ವಿಜಯಪುರದ ಸಣ್ಣ ನೀರಾವರಿಯ ಚೀಫ್ ಇಂಜನಿಯರ್ ಅವರ ತಾಂತ್ರಿಕ ಒಪ್ಪಿಗೆಗೆ ರವಾನಿಸಲಾಗಿ ೪ ಯೋಜನೆಗಳ ರೂ.೧೫.೭೧ ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ದೊರೆತಿದೆ. ಹಿರೇಮುನವಳ್ಳಿಯ ೫.೩೫ ಕೋಟಿ ಮತ್ತು ಕುಪ್ಪಟಗಿರಿಯ ೬.೭೨ ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ಸಿಗಬೇಕಿದೆ.
ಖಾನಾಪುರ ಪಟ್ಟಣದ ಬಸ್ ಟರ್ಮಿನಲ್ ನಿರ್ಮಾಣಕ್ಕೆ ೭ ಕೋಟಿ ರೂ.ಗಳಲ್ಲಿ ರಾಜ್ಯ ಪಟ್ಟಣ ಸಾರಿಗೆ ಮತ್ತು ವಾಯವ್ಯ ಸಾರಿಗೆ ಸಮನಾದ ಫಂಡ ಒದಗಿಸುತ್ತವೆ.ನಬಾರ್ಡ ಯೋಜನೆಯಡಿಯಲ್ಲಿ ೧೬ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ೨.೭೨ ಕೋಟಿ ರೂ.ಗಳು ಮಂಜೂರಾಗಿವೆ.
ಹೆಸ್ಕಾಂ ಯೋಜನೆಗಳ ಪ್ರಕಾರ ಕೊಡಚವಾಡದ ೧೧೦ ಕೆವಿಎ ದ ಸಬ್ ಸ್ಟೇಶನ್ ಗೆ ೧೦ ಕೋಟಿ ರೂ.ಗಳು ಕೆಪಿಟಿಸಿಎಲ್ ದಿಂದ, ಹಲಸಿ ೩೩ ಕೆವಿಎ ಗೆ ೪ ಕೋಟಿ ಮತ್ತು ಬೈಲೂರ ೩೩ಕೆವಿಎ ಗೆ ೪ ಕೋಟಿ ರೂ.ಗಳು ಹೆಸ್ಕಾಂ ದಿಂದ ಮಂಜೂರಾಗಿವೆ.
ಮಲೆನಾಡು ಕ್ಷೇತ್ರ ಅಭಿವೃದ್ಧಿ ಬೋರ್ಡ್ ದಿಂದ ೧ ಕೋಟಿ ರೂ.ಗಳು ಅವರೊಳ್ಳಿ ಮತ್ತು ಬೇಡರಹಟ್ಟಿ ಗ್ರಾಮಗಳಿಗೆ,ಘೋಸೆ ಗ್ರಾಮದ ಸಿಸಿ ಸಂಪರ್ಕ ರಸ್ತೆಗೆ ೧೦ ಲಕ್ಷ,ಚಿಗುಳೆಯ ಸಂಪರ್ಕ ರಸ್ತೆಗೆ ೭೩ ಲಕ್ಷ ರೂ.ಗಳ ಹಣ ಮಂಜೂರಾಗಿದ್ದು, ಎಲ್ಲ ಕಾಮಗಾರಿಗಳು ಮಳೆಗಾಲದ ನಂತರ ಪ್ರಾರಂಭವಾಗುತ್ತವೆ ಎಂದು ವಿವರ ಮಾಹಿತಿ ಒದಗಿಸಿದರು.
ಪಟ್ಟಣದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ, ಪಟ್ಟಣದಲ್ಲಿ ಒಳಚರಂಡಿ ಯೋಜನೆ, ೨೪*೭ ಕುಡಿವ ನೀರು ಸರಬರಾಜು, ನಂದಗಡ, ಮೋದೆಕೊಪ್ಪ, ಬೀಡಿ ಮತ್ತು ಹಲಸಿಯ ಬಹುಗ್ರಾಮ ನೀರು ಸರಬರಾಜು ಮುಂತಾದ ಯೋಜನೆಗಳು ಮುಂಬರುವ ದಿನಗಳಲ್ಲಿ ನನಸಾಗುತ್ತವೆ ಎಂದರು.
(ವರದಿ:ಈಶ್ವರ ಜಿ.ಸಂಪಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ