ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಶಾಸಕ ಅಭಯ ಪಾಟೀಲ ಕೆಲ ವರ್ಷಗಳ ಹಿಂದೆ ಕಲಿತ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ನಡೆಸಿ ರಾಜ್ಯದ ಗಮನ ಸೆಳೆದಿದ್ದರು. ಈಗ ಅವರು ಕಲಿತ ಶಾಲೆ ಈ ವರ್ಷ ಶತಮಾನೋತ್ಸವದ ಸಂಭ್ರಮದಲ್ಲಿದ್ದು ಈ ಸಂದರ್ಭದಲ್ಲಿ ವಿಶೇಷ ಕೊಡುಗೆ ನೀಡಲು ಮುಂದಾಗಿದ್ದಾರೆ.
ಬೆಳಗಾವಿಯ ಶಹಾಪುರ ಪ್ರದೇಶದ ಮೀರಾಪೂರ ಗಲ್ಲಿಯ ಚಿಂತಾಮಣರಾವ ಶಾಲೆಯಲ್ಲಿ ಶಾಸಕ ಅಭಯ ಪಾಟೀಲ ಕಲಿತಿದ್ದಾರೆ. ಈ ಶಾಲೆಯ ಅಭಿವೃದ್ಧಿಗೆ ಎರಡುವರೆ ಕೋಟಿ ರೂ ಅನುದಾನ ಖರ್ಚು ಮಾಡಿದ್ದು ಈ ಶಾಲೆ ಇದೇ ವರ್ಷ ಶತಮಾನೋತ್ಸವದ ಆಚರಿಸಿಕೊಳ್ಳುತ್ತಿದೆ. ಈ ಕಾರ್ಯಕ್ರಮವನ್ನು ಅರ್ಥಪೂರ್ಣ ಗೊಳಿಸಲು ಶಾಸಕ ಅಭಯ ಪಾಟೀಲ ಕೈಜೋಡಿಸಿದ್ದಾರೆ.
ಇಂದು ಶಾಲೆಗೆ ಭೇಟಿ ನೀಡಿದ ಶಾಸಕ ಅಭಯ ಪಾಟೀಲ ಶಾಲೆಯ ಗುರುಗಳ ಜೊತೆ ಶತಮಾನೋತ್ಸವದ ಕಾರ್ಯಕ್ರಮಗಳ ಕುರಿತು ಚರ್ಚೆ ಮಾಡಿ, ಶತಮಾನೋತ್ಸವದ ಅಂಗವಾಗಿ ಶಾಲೆಯ ಸಭಾಗೃಹದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರು. 1.25 ಕೋಟಿ ರೂ ಅನುದಾನದಲ್ಲಿ ಸಭಾಗೃಹದ ನೂತನಿಕರಣ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.
ಚಿಂತಾಮಣರಾವ ಶಾಲೆ ಸರ್ಕಾರಿ ಶಾಲೆಯಾಗಿದ್ದು 1920 ರಲ್ಲಿ ಸ್ಥಾಪಿತವಾಗಿತ್ತು ಈ ಶಾಲೆಯ ಸಭಾಗೃಹಕ್ಕೆ ಹೆಚ್.ಹೆಚ್ ರಾಜಲಕ್ಷ್ಮಿ ರಾಜೆ, ವಿಜಯಸಿಂಹ ರಾಜೆ ಪಟವರ್ದನ್ ಸಭಾಗೃಹ ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ