Kannada NewsKarnataka NewsLatest

ಅನ್ ಲಾಕ್ 4 – ಬಹುತೇಕ ಎಲ್ಲವೂ ಸಡಿಲಿಕೆ; ಕೆಲವು ಷರತ್ತು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ರಾಜ್ಯ ಸರಕಾರದ ಅನ್ ಲಾಕ್ 4 ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಇದರನ್ವಯ ಮಂಗಳವಾರದಿಂದಲೇ ಬಾರ್, ರೆಸ್ಟೋರೆಂಟ್ ಗಳು ತೆರೆಯಲಿವೆ. ಬಸ್ ಗಳಲ್ಲಿ ಸಾಮಾಜಿಕ ಅಂತರ ಇನ್ನು ಇರುವುದಿಲ್ಲ. ಎಲ್ಲ ಸೀಟ್ ಗಳನ್ನೂ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಶಾಲೆ ಕಾಲೇಜುಗಳು ಸೆಪ್ಟಂಬರ್ 30ರವರೆಗೆ ತೆರೆಯುವುದಿಲ್ಲ. ಆದಾಗ್ಯೂ ಕೆಲವು ಸಡಿಲಿಕೆ ಮಾಡಲಾಗಿದೆ.

ಸಂಪೂರ್ಣ ವಿವರ ಇಲ್ಲಿದೆ  – unlock 4 ರಾಜ್ಯ ಸರ್ಕಾರದ ಮಾರ್ಗಸೂಚಿ

ಯಲ್ಲಮ್ಮ, ಮಾಯಕ್ಕ ದರ್ಶನವಿಲ್ಲ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಿಯ ದರ್ಶನ ಭಾಗ್ಯ ಇನ್ನೂ ಒಂದು ತಿಂಗಳು ಇರುವುದಿಲ್ಲ.

ಸೆಪ್ಟಂಬರ್ 30ರವರೆಗೂ ದೇವಾಲಯಗಳು ಸಾರ್ವಜನಿಕರಿಗೆ ತೆರೆಯುವುದಿಲ್ಲ. ದೇವಸ್ಥಾನ ಸಿಬ್ಬಂದಿ ಎಂದಿನ ಪೂಜಾ ವಿಧಿ ವಿಧಾನ ಮುಂದುವರಿಸಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button