Kannada NewsLatest

ಶಂಕರಗೌಡ ಪಾಟೀಲ  ಅಧಿಕಾರ ಸ್ವೀಕಾರ; ಕಾಲಮಿತಿಯಲ್ಲಿ ಬಾಕಿ ಪ್ರಸ್ತಾವನೆಗಳ ವಿಲೇವಾರಿ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಕಗೊಂಡಿರುವ ಶಂಕರಗೌಡ ಪಾಟೀಲ್  ಅವರು  ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ದೆಹಲಿ ಕರ್ನಾಟಕ ಭವನದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.   ಸಭೆಯಲ್ಲಿ ಕೇಂದ್ರ ಸರ್ಕಾರದ ಹಾಗೂ ದೆಹಲಿ‌ ಕಚೇರಿಗಳಲ್ಲಿ ಕರ್ನಾಟಕ ಸರ್ಕಾರದ ಬಾಕಿ ಇರುವ ಯೋಜನೆಗಳಿಗೆ ಅನುಮೋದನೆ ದೊರಕಿಸಿ ಕೊಡುವ  ನಿಟ್ಟಿನಲ್ಲಿ ಉತ್ತಮ ಸಮನ್ವಯದೊಂದಿಗೆ  ಕಾರ್ಯ ನಿರ್ವಹಣೆ ಮಾಡುವತ್ತ ಕಾರ್ಯೋನ್ಮುಖರಾಗುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದರು.
ಬಾಕಿ ಇರುವ ಪ್ರಸ್ತಾವನೆಗಳ ಸಮಗ್ರ ಮಾಹಿತಿಯನ್ನು ಒದಗಿಸುವಂತೆ ಸೂಚಿಸದ ಅವರು, ಕಾಲಮಿತಿಯಲ್ಲಿ ಎಲ್ಲವುಗಳನ್ನು ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ದೆಹಲಿ ಕರ್ನಾಟಕ ಭವನದ ವಿಶೇಷ ನಿವಾಸಿ ಆಯುಕ್ತ ವಿಜಯ ರಂಜನ್ ಸಿಂಗ್, ಅಪರ ನಿವಾಸಿ ಆಯುಕ್ತ ಗುರುನೀತ್ ತೇಜ್, ಉಪ ನಿವಾಸಿ ಆಯುಕ್ತ ಹೆಚ್.  ಪ್ರಸನ್ನ  ಮತ್ತು ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

 

 ಪ್ರಣಬ್ ಮುಖರ್ಜಿಗೆ ಅಂತಿಮ ನಮನ

ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್  ರಾಜ್ಯದ ಮುಖ್ಯಮಂತ್ರಿಗಳ ಪರವಾಗಿ ಇಂದು ನವದೆಹಲಿಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪಾರ್ಥಿವ ಶರೀರಕ್ಕೆ  ಅಂತಿನ ನಮನ ಸಲ್ಲಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button