ಆಡದೇ ಮಾಡುವವ ರೂಢಿಯೊಳಗುತ್ತಮನು, ಆಡಿ ಮಾಡವನು ಮಧ್ಯಮನು, ಅಧಮ ತಾನಾಡಿಯೂ ಮಾಡದವ ಸರ್ವಜ್ಞ – ವ್ಯಕ್ತಿಯೊಬ್ಬನು ಆಡುವ ಮಾತು ಮತ್ತು ಮಾಡುವ ಕೆಲಸದ ರೀತಿಯು ಅವನ ವ್ಯಕ್ತಿತ್ವವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ. ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ್ ಮೊದಲ ವರ್ಗಕ್ಕೆ ಸೇರಿದವರು. ಒಂದು ರೀತಿಯಲ್ಲಿ ಸೈಲೆಂಟ್ ವರ್ಕರ್. ಹೆಚ್ಚು ಗದ್ದಲವಿಲ್ಲದೆ ಕೆಲಸ ಮಾಡುವವರು ಅವರು. ಮಹಾಂತೇಶ ದೊಡ್ಡಗೌಡರ ಅವರ ಜನ್ಮದಿನ (ಬುಧವಾರ)ದ ನಿಮಿತ್ತ ಈ ಲೇಖನ
ಶೇಖರ ಕಲ್ಲೂರ, ಚನ್ನಮ್ಮನ ಕಿತ್ತೂರು: ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರನ್ನು ಕ್ಷೇತ್ರಾದ್ಯಂತ ಜನ ಪ್ರೀತಿಯಿಂದ, ಅಭಿಮಾನದಿಂದ ‘ಮಹಾಂತೇಶ ಅಣ್ಣಾ’ ಎಂದೇ ಕರೆಯುತ್ತಾರೆ.
ಹಾಗೆ ಕರೆಯುವುದಕ್ಕೆ ಕಾರಣವೂ ಇದೆ. ಅವರು ಸಾಮಾನ್ಯವಾಗಿ ಇತರ ಶಾಸಕರಂತೆ ಮತದಾರರಿಂದ ದೂರ ನಿಲ್ಲುವವರಲ್ಲ. ತಮ್ಮದೇ ಸಹೋದರ ಎನ್ನುವ ರೀತಿಯಲ್ಲಿ ಮತದಾರರು ಅವರನ್ನು ಪರಿಗಣಿಸುವ ರೀತಿಯಲ್ಲಿ ಅವರ ನಡೆ ನುಡಿ ಇರುವುದು. ಹಾಗಾಗಿಯೇ ಅವರನ್ನು ಸಾಹುಕಾರ್ ಎಂದಾಗಲಿ, ಧಣಿ ಎಂದಾಗಲಿ, ಸಾಹೇಬರು ಎಂದಾಗಲಿ ಹೇಳುವುದಿಲ್ಲ. ಬದಲಾಗಿ ಪ್ರೀತಿಯಿಂದ ಅಣ್ಣ ಎನ್ನುತ್ತಾರೆ.
ಮೊದಲನೇ ಬಾರಿ ಕಿತ್ತೂರು ಮತ ಕ್ಷೇತ್ರದ ಶಾಸಕರಾಗಿ ಐತಿಹಾಸಿಕ ಗೆಲವು ಸಾಧಿಸಿದ ಇವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
ಸಹಕಾರಿ ರಂಗದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಮೂಲಕ ರೈತರ ಮನದಲ್ಲಿ ನೆಲೆಸಿರುವ ಅವರ ಸಹನೆ ಸಮುದ್ರ, ವಿನಯ ಫಲಭರಿತ ವೃಕ್ಷದಂತೆ. ಮೆಲುಮಾತು, ಸ್ಪಷ್ಟ ವಿಚಾರಗಳೇ ಇವರಿಗೆ ಆಭರಣ. ಸಹಕಾರಿ ರಂಗದಲ್ಲಿ ದೊಡ್ಡ ಹೆಸರು ಮಾಡಿದ ಕಾಲು ಶತಮಾನದ ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಿ ಕಿತ್ತೂರು ವಿಧಾನಸಭೆ ಚುನಾವಣೆ ಕಣಕ್ಕಿಳಿದರು. ಮೊದಲ ಯತ್ನದಲ್ಲೇ ಅಧಿಕ ಮತಗಳಿಂದ ವಿಜೇತರಾಗಿ ಹೊಸ ಇತಿಹಾಸವನ್ನೇ ಬರೆದರು.
ಜಯ ಅವರಲ್ಲಿ ಜಂಭ ತರಲಿಲ್ಲ. ಹೆಚ್ಚು ವಿನಯವನ್ನು ತಂದಿದೆ. ಕ್ಷೇತ್ರದ ಜನರ ನೋವು, ಸಮಸ್ಯೆ, ಅನಾನುಕೂಲತೆಗಳಿಗೆ ಸ್ಪಂದಿಸುವ ಗುಣ ಸಾಧಕ ಮಹಾಂತೇಶ ಅವರದು.
ಭರವಸೆ ಇದ್ದರೆ ಭವ್ಯ ಭವಿಷ್ಯದ ದಾರಿ ಕಾಣುತ್ತದೆ, ಉತ್ಸಾಹವಿದ್ದರೆ ಕನಸು ನನಸು ಮಾಡುವ ಬಾಗಿಲು ತಾನಾಗೇ ತೆರೆಯುತ್ತದಂತೆ. ಭರವಸೆ ನಾಯಕರಾಗಿದ್ದರಿಂದಲೇ ಕಿತ್ತೂರು ಕ್ಷೇತ್ರದಲ್ಲಿ ಹೊಸ, ಹೊಸ ಯೋಜನೆಗಳ ಕನಸುಗಳನ್ನು ನನಸು ಮಾಡಿ ಮಾದರಿ ಕ್ಷೇತ್ರವಾಗಿ ರೂಪಿಸುವ ಆಲೋಚನೆ ಅವರದಾಗಿದೆ. ಯುವಕರ ಕೈಗಳಿಗೆ ಉದ್ಯೋಗ ಸಿಗಬೇಕು. ರೈತರಿಗೆ ಉತ್ತಮ ರೀತಿ ಬಿತ್ತನೆ ಬೀಜಗಳು ದೊರೆಯಬೇಕು. ರಸಗೊಬ್ಬರಕ್ಕಾಗಿ ಅವರು ಪರದಾಡುವಂತಾಗಬಾರದು. ಎಷ್ಟೆಲ್ಲ ಕಷ್ಟಪಟ್ಟು ಭೂಮಿಗೆ ಬೆವರು ಸುರಿಸಿ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಧಾರಣಿ ಸಿಗಬೇಕು ಎಂಬ ಬಗ್ಗೆ ಚಿಂತನೆ ನಡೆಸಿರುವ ಅವರು, ಕ್ಷೇತ್ರದ ವಿವಿಧೆಡೆ ಕೋಲ್ಡ್ ಸ್ಟೋರೇಜ್ ಗೋದಾಮುಗಳಾದರೆ ಅನ್ನದಾತನಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ.
ಯೋಜನೆಗಳಿಗೆ ಸ್ಥಾನ ಅಗ್ರ: ಅಭಿವೃದ್ಧಿಯೂ ಸಮಗ್ರ
ಮಿನಿ ವಿಧಾನಸೌಧ ನಿರ್ಮಾಣ, ಬಸ್ ಡಿಪೋ ಮಂಜೂರು, 100 ಹಾಸಿಗೆ ಆಸ್ಪತ್ರೆ, ಕೃಷಿ ಸಹಾಯಕ ನಿರ್ದೇಶಕ ಕಚೇರಿ ಮತ್ತು ಕಟ್ಟಡ, ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕಾಮಗಾರಿ… ಹೀಗೆ ಹಲವಾರು ಮಹಾನ್ ಕನಸುಗಳನ್ನು ಹೊತ್ತುಕೊಂಡು ನನಸು ಮಾಡಿದ ಶಾಸಕ ಮಹಾಂತೇಶ ದೊಡ್ಡಗೌಡರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ ಸಾಧಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ.
2013ರಲ್ಲಿಯೇ ಕಿತ್ತೂರು ಅಧಿಕೃತ ತಾಲೂಕಾಗಿ ಗೆಜೆಟ್ ಅಧಿಸೂಚನೆ ಹೊರಟರೂ ಕಚೇರಿ ಅನುಷ್ಠಾನ ಕನ್ನಡಿಯೊಳಗಿನ ಗಂಟಾಗಿತ್ತು. ಇಲ್ಲಿಯ ಜನರ ಒತ್ತಾಯದ ಮೇರೆಗೆ ಹಿಂದಿನ ಸರ್ಕಾರದ ಕೊನೇ ಅವಧಿಯಲ್ಲಿ ಅನುಷ್ಠಾನಕ್ಕೆ ಬಂತು. ತಾಲೂಕು ಅನುಷ್ಠಾನಕ್ಕೆ ಬಂದನಂತರ ಎಲ್ಲ ಕಚೇರಿಗಳು ಒಂದೇ ಸೂರಿನಡಿ ಬರುವ ಅಗತ್ಯವೂ ಇತ್ತು. ಶಾಸಕ ಮಹಾಂತೇಶ ಅವರ ಕಾಲಕ್ಕೆ ಹೆಚ್ಚಿನ ವೇಗವೂ ಈ ಕಾರ್ಯಕ್ಕೆ ದೊರೆಯಿತು. ಸೌಧದ ಕಾಮಗಾರಿಗಳು ಈಗ ಅಂತಿಮ ರೂಪು ಪಡೆದುಕೊಂಡಿವೆ. ಕೊರೊನಾದಿಂದಾಗಿ ಸ್ವಲ್ಪ ವಿಳಂಬವಾಗುವ ಲಕ್ಷಣಗಳು ಗೋಚರಿಸಿವೆ. ಇಲ್ಲದಿದ್ದರೆ ಆ. 23ಕ್ಕೆ ಉದ್ಘಾಟನೆ ಭಾಗ್ಯ ದೊರಕುತ್ತಿತ್ತು ಎನ್ನುತ್ತಾರೆ ಶಾಸಕರು.
ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದು ಭರ್ಜರಿ ಗೆಲವು ಸಾಧಿಸುವ ಮೂಲಕ ಕಿತ್ತೂರು ವಿಧಾನ ಸಭಾ ಮತಕ್ಷೇತ್ರಕ್ಕೆ ಅತ್ಯಧಿಕ ಮತಗಳಿಂದ ಆಯ್ಕೆಯಾದ ಮಹಾಂತೇಶ ದೊಡ್ಡಗೌಡರ ಕಿತ್ತೂರು ತಾಲೂಕಿನ ಎಲ್ಲ ಪರಿಸ್ಥಿತಿಯ ಅವಲೋಕನ ನಡೆಸಲಾರಂಭಿಸಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜೊತೆಗೂಡಿ ಉನ್ನತ ಸಭೆಗಳನ್ನು ನಡೆಸಿ ತಾಲೂಕಿಗೆ ಅವಶ್ಯವಿರುವ ಕಚೇರಿಗಳು ಹಾಗೂ ಕಟ್ಟಡಗಳ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಆಗ ತಾಲೂಕಿಗೆ ಅವಶ್ಯವಿರುವ ಹಾಗೂ ತಟಸ್ಥಗೊಂಡಿರುವ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಸರ್ಕಾರದ ಯಾವ ಹಂತದಲ್ಲಿ ಕೆಲಸಗಳು ನಿಂತಿವೆ ಎಂದು ಅವಲೋಕಿಸಿದರು. ಆಪ್ತರ ಹಾಗೂ ಹಿರಿಯ ಶಾಸಕರ ಮತ್ತು ಸಚಿವರ ವಿಶ್ವಾಸಗಳಿಸಿ ಸ್ಥಗಿತಗೊಂಡಿರುವ ಕಾರ್ಯಗಳ ಪುನಾರಂಭಕ್ಕಕೆ ಜೀವ ತುಂಬಲಾರಂಭಿಸಿದರು. ಅವಶ್ಯವಿರುವ ಹಣಕಾಸಿನ ಸಹಾಯವನ್ನು ಸರ್ಕಾರದಿಂದ ಪಡೆದು ಆಮೆಗತಿಯಲ್ಲಿ ಸಾಗುತ್ತಿರುವ ಕಾರ್ಯಗಳಿಗೆ ಚುರುಕು ಮುಟ್ಟಿಸಿದರು. ನೂತನ ತಾಲೂಕಿನ ಹಿರಿಮೆಯಾಗಿ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣವಾಗಿ ನಿಂತಿದೆ. ಅಂತಿಮ ಹಂತದ ಕೆಲಸಗಳು ಸಾಗಿವೆ. ಶೀಘ್ರ ಉದ್ಘಾಟನೆಯ ಭಾಗ್ಯವೂ ಇದಕ್ಕೆ ಸಿಗಲಿದೆ.
ಸೂರು ಒಂದು; ಕಚೇರಿ ಹಲವು
ಈಗಾಗಲೇ ಕಿತ್ತೂರು ತಾಲೂಕಾಗಿದ್ದರೂ ಸಹ ಸೂಕ್ತ ಹಾಗೂ ಭದ್ರವಾದ ಕಟ್ಟಡ ದೊರೆಯದ ಹಿನ್ನಲ್ಲೆಯಲ್ಲಿ ತಾಲೂಕಿನ ವಿವಿಧ ಕಚೇರಿಗಳು ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಶಾಸಕ ಮಹಾಂತೇಶ ದೊಡಗೌಡರ ಅವರ ಅವಿರತ ಶ್ರಮದಿಂದ ಹೆದ್ದಾರಿ ಪಕ್ಕದಲ್ಲಿ ತಲೆ ಎತ್ತಿರುವ ಮಿನಿ ವಿಧಾನಸೌಧ ಕಟ್ಟಡದಲ್ಲಿ ತಹಶೀಲ್ದಾರ ಕಚೇರಿ, ಉಪನೋಂದಣಿ ಕಚೇರಿ, ಭೂ ಮಾಪನ ಕಚೇರಿ, ದಾಖಲೆಗಳ ಕಚೇರಿ, ಅಬಕಾರಿ ಕಚೇರಿ, ಮಹಿಳಾ ಮತ್ತು ಕಲ್ಯಾಣ ಇಲಾಖೆ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸೇರಿದಂತೆ ಗ್ರಾಮೀಣರಿಗೆ ಅನುಕೂಲವಾಗುವ ಕಚೇರಿಗಳು ಮಿನಿ ವಿಧಾನಸೌಧದಲ್ಲಿಯೇ ಕಾರ್ಯರಂಭ ಮಾಡಲಿವೆ.
ದಶಕದ ಡಿಪೋ ಬೇಡಿಕೆಗೆ ಮಾನ್ಯತೆ
ಕಿತ್ತೂರು ನಾಡಿನ ಜನರ ಬಹುದಿನಗಳ ಬೇಡಿಕೆಯಾದ ಬಸ್ ಡಿಪೋ ಈ ಹಿಂದೆ ಅನೇಕ ಶಾಸಕರಿಗೆ ನಾಡಿನ ಜನತೆ ಆಗ್ರಹ ಮಾಡುವ ಮೂಲಕ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕಾರ್ಯಗತಗೊಂಡಿರಲಿಲ್ಲ. ಕಿತ್ತೂರು ಕ್ಷೇತ್ರಕ್ಕೆ ನೂತನ ಸಾರಥಿಯಾಗಿ ಶಾಸಕ ಮಹಾಂತೇಶ ದೊಡಗೌಡರ ಆಯ್ಕೆಯಾಗುವ ಜೊತೆ ಜೊತೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣೆ ಹಿಡಿಯಿತು. ಆಗ ಕಿತ್ತೂರಿಗರ ಅದೃಷ್ಠ ಎಂಬಂತೆ ಶಾಸಕರ ರಾಜಕೀಯ ಗುರುಗಳಾದ ಲಕ್ಷ್ಮಣ ಸವದಿ ಅವರು ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಸಾರಿಗೆ ಸಚಿವರೂ ಆದರು, ಆಗ ಶಾಸಕ ಮಹಾಂತೇಶ ದೊಡ್ಡಗೌಡರ ಕಿತ್ತೂರು ನಾಡಿನ ಜನರ ಧ್ವನಿಯಾಗಿ ಇವರ ಮೇಲೆ ವಿಶೇಷ ಒತ್ತಡ ಹಾಕಿ ಅವರನ್ನು ಕಿತ್ತೂರಿಗೆ ಕರೆಯಿಸಿ ಇಲ್ಲಿ ಶಾಲಾ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಾರಿಗೆಯ ಅವ್ಯವಸ್ಥೆಯ ಕುರಿತು ಮನವರಿಕೆ ಮಾಡಿಕೊಟ್ಟರು. ಪರಿಣಾಮ ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಿತ್ತೂರು ಪಟ್ಟಣಕ್ಕೆ ಬಸ್ ಡಿಪೋ ಮಂಜೂರಾತಿಗೆ ಅಂಕಿತ ಹಾಕಿದರು ಜೊತೆಯಲ್ಲಿ ಡಿಪೋ ನಿರ್ಮಾಣಕ್ಕಾಗಿ ರೂ. 5 ಕೋಟಿ ರೂ ಅನುದಾನವನ್ನು ನೀಡಿದ್ದು ಶ್ಲಾಘನೀಯ ಸಂಗತಿಯಾಗಿದೆ. ಬಸ್ ಡಿಪೋ ನಿರ್ಮಾಣಕ್ಕಾಗಿ ಸರ್ಕಾರದ 4 ಎಕರೆ ಜಾಗೆಯನ್ನು ಮಂಜೂರಾತಿ ಮಾಡಿಸಿದ್ದು ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ತುರ್ತು ಸಂದರ್ಭಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವಂತೆ ಅಗ್ನಿ ಶಾಮಕ ದಳದ ಘಟಕಕ್ಕೂ ನಿವೇಶನ ಮಂಜೂರಾತಿ ಮಾಡಿಸಿದ ಪರಿಣಾಮ ಠಾಣೆಯ ನಿರ್ಮಾಣ ಕಾರ್ಯ ಕೂಡ ಪ್ರಗತಿಯಲ್ಲಿದೆ.
ನ್ಯಾಯಾಂಗ ವ್ಯವಸ್ಥೆಗಾಗಿ ನ್ಯಾಯಾಲಯ ಕಟ್ಟಡ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಸೇರಿದಂತೆ ಇತರೆ ಇಲಾಖೆಯ ಕಟ್ಟಡ ನಿರ್ಮಾಣಕ್ಕೂ ನಿವೇಶನ ಮಂಜೂರಾತಿ ಮಾಡಿದ್ದು ಮುಂಬರುವ ದಿನಗಳಲ್ಲಿ ಕಲವು ಕಚೇರಿಗಳು ಇಲ್ಲಿ ಕಾರ್ಯಾರಂಭ ಮಾಡಲಿವೆ. ವಿಧಾನ ಸೌಧ ಕಟ್ಟಡ ನಿರ್ಮಾಣ ಗೊಂಡಿದ್ದರು ಇಲ್ಲಿ ಹೆಚ್ಚಿನ ಸೌಲಭ್ಯವನ್ನು ದೊರೆಕಿಸುವ ನಿಟ್ಟಿನಲ್ಲಿ ಹೆಚ್ಚುವರಿಗಾಗಿ ರೂ. 5 ಕೋಟಿ ಅನುದಾನಕ್ಕೂ ಮನವಿ ಸಲ್ಲಿಸಿದ್ದಾರೆ ಶಾಸಕರು.
100 ಬೆಡ್ ಆಸ್ಪತ್ರೆ ಯೋಜನೆ :
ಕಿತ್ತೂರಿನಿಂದ ಕೂಗಳತೆಯ ದೂರದಲ್ಲಿರುವ ಗಿರಿಯಾಲ ಗ್ರಾಮದಲ್ಲಿ 5 ಎಕರೆ ವಿಸ್ತಿರ್ಣದಲ್ಲಿ 100 ಹಾಸಿಗೆಯ ವ್ಯವಸ್ಥೆಯುಳ್ಳ ತಾಲೂಕು ಮಟ್ಟದ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ರೂ. 15 ಕೋಟಿ ಬಿಡುಗಡೆಗೊಳಿಸುವ ಪ್ರಾಮಾಣಿಕ ಪ್ರಯತ್ನದ ಫಲವಾಗಿ 100 ಹಾಸಿಗೆಗಳ ಆಸ್ಪತ್ರೆಯೊಂದು ತಲೆ ಎತ್ತಲಿದೆ. ಅಲ್ಲದೆ ಮತ್ತೆ 5 ಎಕರೆ ವಿಸ್ತಿರ್ಣದಲ್ಲಿ ತಾಲೂಕು ಮಟ್ಟದ ಕ್ರಿಡಾಗಂಣ ನಿರ್ಮಾಣದ ಕನಸು ಶಾಸಕರದ್ದಾಗಿದೆ.
ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ರಾಣಿ ಚನ್ನಮ್ಮಾ ವಸತಿ ಶಾಲೆ ಹಾಗೂ ಹಿಂದುಳಿದ ವರ್ಗದ ಹಾಸ್ಟೆಲ್‍ಗೂ ಸಹ ಇಲ್ಲಿ ನಿವೇಶನ ಮಂಜೂರಾತಿ ಪಡೆದಿದ್ದು ಅದುವೇ ಕೆಲವೇ ದಿನಗಳಲ್ಲಿ ಕಟ್ಟಡದ ಕಾಮಗಾರಿ ಆರಂಭಗೊಳ್ಳಲಿದೆ.
ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕ:
ಐತಿಹಾಸಿಕ ಕಿತ್ತೂರಿಗೆ ನಿತ್ಯ ನೂರಾರು ಪ್ರಯಾಣಿಕರು ಬರುತ್ತಾರೆ ಅವರ ಆರೋಗ್ಯದ ದೃಷ್ಟಿಯಿಂದ ಶಾಸಕರ ಅನುದಾನದಲ್ಲಿ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕದ ಕೆಲಸವು ಪ್ರಗತಿಯಲ್ಲಿದೆ.
ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿ
ಕಿತ್ತೂರು ತಾಲೂಕಾಗಿ 7 ವರ್ಷಗಳು ಕಳೆದರೂ ಇಲ್ಲಿ ತಾಲೂಕು ಮಟ್ಟದ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿಗಳ ಕಾರ್ಯಾಲಯ ಸ್ವಂತ ಕಟ್ಟಡವಿರಲಿಲ್ಲ ಹಳೆಯ ಕಟ್ಟಡದಲ್ಲಿ ಕೆಲಸ ನಿರ್ವಹಿಸುವಂತಾಗಿತ್ತು. ಮತ್ತು ರೈತರಿಗೆ ಸರಕಾರದಿಂದ ಕೃಷಿ ಚಟುವಟಿಕೆಗಳಿಗೆ ಯಾವದೇ ಸಹಾಯ ಬಂದರೆ ಬೈಲಹೊಂಗಲ ತಾಲೂಕಿಗೆ ಬರುತ್ತಿತ್ತು ದೊಡ್ಡ ತಾಲೂಕಾಗಿದ್ದರಿಂದ ಬಂದ ಅನುದಾನ ಹರಿದು ಹಂಚಿ ಹೊಗುತ್ತಿತ್ತು. ಇದನ್ನ ಮನಗೊಂಡ ಶಾಸಕ ಮಹಾಂತೇಶ ದೊಡಗೌಡರ ತಾಲೂಕು ಮಟ್ಟದ ಕೃಷಿ ಇಲಾಖೆಯನ್ನು ಮಂಜೂರು ಮಾಡಿಸಿ ಕೃಷಿ ಉತ್ಪನ್ನ್ ಮಾರುಕಟ್ಟೆಯ ನಿವೇಶನದಲ್ಲಿ ಕಟ್ಟಡ ಕಾಮಗಾರಿಯು ಮುಕ್ತಾಯ ಹಂತ ತಲುಪಿದೆ. ಇನ್ನು ಮುಂದೆ ಕಿತ್ತೂರು ತಾಲೂಕಿನ ರೈತರಿಗೆ ಸಿಗಬೇಕಾದ ಸಹಾಯ ಸೌಲಭ್ಯಗಳು ದೊರಕುವಂತೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಮಂಜೂರು ಮಾಡಿಸಿ ಈಗಾಗಲೇ ಭೂಮಿ ಪೂಜೆಯು ಆಗಿದೆ. ಅನುದಾನವನ್ನು ಮಂಜುರು ಮಾಡಿಸಿ ರೈತರ ಕನ್ಮಣಿಯ ಶಾಸಕ ಮಹಾಂತೇಶ ದೊಡಗೌಡರ.
ತಾಲೂಕು ವಕ್ಕಲುತನ ಮಾರಾಟ ಹುಟ್ಟುವಳಿ ಸಹಕಾರಿ ಸಂಘ ಅಸ್ತಿತ್ವಕ್ಕೆ
ಕಿತ್ತೂರು ತಾಲೂಕಾಗಿ ಹಲವಾರು ವರ್ಷಗಳು ಉರುಳಿದರೂ ರೈತರಿಗೆ ಅನುಕೂಲವಾಗುವ ದರದಲ್ಲಿ ಬೀಜ, ಗೊಬ್ಬರಗಳು ಸೇರಿದಂತೆ ಇನ್ನುಳಿದ ಕೃಷಿ ಚಟುವಟಿಕೆಗಳ ವಸ್ತುಗಳನ್ನು ಕಡಿಮೆ ದರದಲ್ಲಿ ವಿತರಿಸಲು ಹಾಗೂ ರೈತರು ಬೆಳೆದಂತೆ ಬೆಳೆಗಳನ್ನು ಸರಕಾರದ ಬೆಂಬಲ ಬೆಲೆಯೊಂದಿಗೆ ಖರಿಧೀಸಲು ತಾಲೂಕು ವಕ್ಕಲುತನ ಮಾರಾಟ ಹುಟ್ಟುವಳಿ ಸಹಕಾರಿ ಸಂಘ ವಿರಲಿಲ್ಲ ಅದನ್ನು ಶಾಸಕರು ರೈತರಿಗೆ ಅನುಕೂಲವಾಗಲು ಅಸ್ತಿತ್ವಕ್ಕೆ ತಂದು ಮತ್ತು ಅದರದೇಯಾದ ನಿವೇಶನವನ್ನು ಸಹ ಮಂಜುರೂ ಮಾಡಿಸಿ ನಾಡಿನ ಜನತೆಗೆ ಪ್ರೀತಿಗೆ ಪಾತ್ರರಾದ ಶಾಸಕ ಮಹಾಂತೇಶ ದೊಡಗೌಡರ.
ಪಶು ಆಸ್ಪತ್ರೆ ಹಾಗೂ ಕಾಲೇಜುಗಳಿಗೆ ಅನುದಾನ
ಕಿತ್ತೂರು ತಾಲೂಕಾ ಪಶು ಆಸ್ಪತ್ರೆ, ನೇಸರಗಿ ಸರಕಾರಿ ಆಸ್ಪತ್ರೆಗೆ, ಅಂಬೇಡ್ಕರ ವಸತಿ ಶಾಲೆಗೆ, ಐಟಿಐ ಕಾಲೇಜಿಗೆ, ಸಂಪಗಾಂವ ಪಶು ಆಸ್ಪತ್ರೆ, ಹಾಗೂ ಎಲ್ಲ ತಾಲೂಕಾ ಕಚೇರಿಗಳನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತೆ ಹಾಗೂ ತಾಲೂಕಿಗೆ ಬರುವ ಎಲ್ಲ ಅನುದಾನಗಳು ಪ್ರತ್ಯೇಕವಾಗಿ ನೀಡುವಂತೆ ಶ್ರಮ ವಹಿಸಿ ಮಾಡಿದ್ದಾರೆ.
ಚನ್ನಮ್ಮಾಜಿಯ ಉತ್ಸವಕ್ಕೆ ವಿಶೇಷ ಮೆರಗು
ಉತ್ತರ ಕರ್ನಾಟಕದ ದಸರಾ ಉತ್ಸವವೆಂದೇ ಖ್ಯಾತವಾದ ಐತಿಹಾಸಿಕ ಕಿತ್ತೂರ ಚನ್ನಮ್ಮಾಜಿಯ ಉತ್ಸವಕ್ಕೆ ಪ್ರತಿವರ್ಷ ಸರಕಾರದಿಂದ ರೂ 30 ಲಕ್ಷ ಅನುದಾನ ಬರುತ್ತಿತ್ತು. ಈಗ ಮಹಾಂತೇಶ ದೊಡಗೌಡರ ಶಾಸಕರಾದ ನಂತರ ಅದನ್ನು ರೂ 1 ಕೋಟಿವರೆಗೆ ಬಿಡುಗಡೆ ಮಾಡಿಸಿ ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.
ಕ್ಷೇತ್ರದ ಗ್ರಾಮೀಣ ರಸ್ತೆಗಳ ಅಭಿವೃದ್ದಿ
ಕಿತ್ತೂರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳು ಎಂದು ಅಭಿವೃದ್ದಿ ಕಂಡಿರುವದಿಲ್ಲ ಅಂತಹ ರಸ್ತೆಗಳನ್ನು ಅಭಿವೃದ್ದಿಗೊಳಿಸಿದ ಹರಿಕಾರ ಶಾಸಕ ಮಹಾಂತೇಶ ದೊಡಗೌಡರ.
ಮದನಭಾವಿ- ಲಕ್ಕುಂಡಿ ರಸ್ತೆ, ಅಂಬಡಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯಿಂದ ಅಂಬಡಗಟ್ಟಿ ಗ್ರಾಮಕ್ಕೆ ತಲುಪುವ ರಸ್ತೆ, ಕಿತ್ತೂರು ರಸ್ತೆಯಿಂದ ತಿಗಡೊಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ, ಕಿತ್ತೂರಿನಿಂದ ಕುಲವಳ್ಳಿ ಕತ್ರಿದಡ್ಡಿ ಮಾರ್ಗವಾಗಿ ಕಿತ್ತೂರು ಕ್ಷೇತ್ರ ವ್ಯಾಪ್ತಿಯ ಮುಗಿಯುವವರೆಗೆ ರಸ್ತೆ, ವಣ್ಣೂರು- ಸುಣಕುಂಪಿ, ಮಾಸ್ತಮರಡಿ ರಸ್ತೆ, ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ ಮುಂತಾದ ಅಭಿವೃದ್ಧಿ ಕಾರ್ಯಗಳನ್ನ ಕೈಗೊಳ್ಳಲಾಗಿದೆ.
ಇತಿಹಾಸದಲ್ಲಿಯೇ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ
ಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮಬಾರಿಗೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಪ್ರಾಥಮಿಕ, ಪ್ರೌಢ, ಪದವಿಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಅತಿ ಹೆಚ್ಚು ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿ ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡಲಾಗಿದೆ.
ಕಂದಾಯ ಗ್ರಾಮದ ಸ್ಥಾನಮಾನ
ಕಿತ್ತೂರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೈಲಹೊಂಗಲ ತಾಲೂಕಿನ ಹೊಸಕೋಟಿ ಗ್ರಾಮವನ್ನು ಕಂದಾಯ ಗ್ರಾಮದ ಸ್ಥಾನಮಾನ ಕಲ್ಪಿಸಲು ಬಹುದಿನಗಳಿಂದ ಹೋರಾಟವಿತ್ತು ಅವರ ಬೇಡಿಕೆಯನ್ನು ಶಾಸಕ ಮಾಹಾಂತೇಶ ದೊಡಗೌರ ಇಡೇರಿಸಿದ್ದಾರೆ. ಹೀಗೆ ಕ್ಷೇತ್ರದಲ್ಲಿ ಹಲವಾರು ಇಂತಹ ಯೋಜನೆಗಳನ್ನು ಮಾಡಿ ಈ ಐತಿಹಾಸಿಕ ಚನ್ನಮ್ಮಾಜಿ ಕಿತ್ತೂರ ಕ್ಷೇತ್ರಕ್ಕೆ ಬೆಳಕನ್ನು ಚಲ್ಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ