ಅತಿವೃಷ್ಟಿ: ಕೇಂದ್ರ ಅಧ್ಯಯನ ತಂಡದ ಭೇಟಿ ಸೆ.೮ ರಂದು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಗೃಹಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.೮) ಭೇಡಿ ನೀಡಿ ಪರಿಶೀಲಿಸಲಿದೆ.
ಜಿಲ್ಲೆಯ ಪರಿಸ್ಥಿತಿಯ ಕುರಿತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೆಳಿಗ್ಗೆ ೯.೧೫ ಗಂಟೆಗೆ ನಗರದ ಪ್ರವಾಸಿಮಂದಿರದಲ್ಲಿ ಕೇಂದ್ರ ತಂಡಕ್ಕೆ ಮಾಹಿತಿಯನ್ನು ನೀಡಲಿದ್ದಾರೆ.
ನಂತರ ಪ್ರವಾಸ ಆರಂಭಿಸಲಿರುವ ಕೇಂದ್ರ ಅಧ್ಯಯನ ತಂಡವು ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ, ಯರನಾಳ, ಹೊಸೂರ ಹಾಗೂ ಇಂಗಳಿ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆಹಾನಿ ಪರಿಶೀಲಿಸಲಿದೆ.
ಅಲ್ಲಿಂದ ಗೋಕಾಕ ತಾಲ್ಲೂಕಿನ ಮಸಗುಪ್ಪಿ, ತಿಗಡಿ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆಹಾನಿ ಹಾಗೂ ಲೋಳಸೂರ ಸೇತುವೆ ಪರಿಶೀಲನೆ ಬಳಿಕ ಸವದತ್ತಿ ತಾಲ್ಲೂಕಿಗೆ ತೆರಳಲಿದೆ.
ಕೇಂದ್ರ ಅಧ್ಯಯನ ತಂಡವು ಸವದತ್ತಿಯಲ್ಲಿ ಬೆಳೆಹಾನಿ ಪರಿಶೀಲನೆ ಬಳಿಕ ಇನಾಂಹೊಂಗಲ್ ಮಾರ್ಗವಾಗಿ ಧಾರವಾಡ ಜಿಲ್ಲೆಗೆ ಪ್ರಯಾಣ ಬೆಳೆಸಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ
ವಿವಿಧ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ನವೆಂಬರ ೩೦ ಕೊನೆಯ ದಿನವಾಗಿದ್ದು, ಆನ್ಲೈನ್ ಮೂಲಕ ಅವಶ್ಯಕ ದಾಖಲೆಗಳೊಂದಿಗೆ ವೆಬ್ಸ್ಶೆಟ್ (www.sw.kar.nic.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯೋಜನೆಯ ವಿವರ:
ದ್ವಿತೀಯ ಪಿ.ಯು.ಸಿ ಪಾಸಾದ ವಿದ್ಯಾರ್ಥಿಗಳಿಗೆ ರೂ.೨೦,೦೦೦, ಪದವಿ ಮುಗಿಸಿದ ವಿದಾರ್ಥಿಗಳಿಗೆ ರೂ.೨೫,೦೦೦, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರೂ.೩೦,೦೦೦ ಹಾಗೂ ಇಂಜಿನೀಯರಿಂಗ್/ವೈದ್ಯಕೀಯ/ಕೃಷಿ/ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ರೂ ೩೫.೦೦೦ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲಾತಿಗಳು;
ಕಡ್ಡಾಯವಾಗಿ ಆರ್.ಡಿ. ಸಂಖ್ಯೆ ಹೊಂದಿರುವ ವಿದ್ಯಾರ್ಥಿಯ ಜಾತಿ ಪ್ರಮಾಣ ಪತ್ರ ಹೊಂದಿರಬೇಕು, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಪ್ರತಿಯನ್ನು ನೀಡಬೇಕು ಹಾಗೂ ಸದರಿ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಮೊದಲೇ ಆಧಾರ್ ಜೋಡಣೆ ಮಾಡಿರಬೇಕು, ನವೀಕರಿಸಿದ ಸೂಕ್ತವಾದ ಆಧಾರ್ ಕಾರ್ಡ್ ಲಗತ್ತಿಸಬೇಕು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಅಂಕಪಟ್ಟಿಗಳನ್ನು ಕಡ್ಡಾಯವಾಗಿ ನೀಡುವುದು ಹಾಗೂ ಕೋರ್ಸುಗಳಿಗೆ ಅನಗುಣವಾಗಿ ಎಲ್ಲಾ ಸೆಮಿಸ್ಟರ್ಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣವಾದ ಬಗ್ಗೆ ದೃಢೀಕೃತ ಅಂಕಪಟ್ಟಿಗಳನ್ನು ಸಲ್ಲಿಸುವುದು. ಅರ್ಜಿ ಸಲ್ಲಿಸಿದ ನಂತರ ದಾಖಲೆಗಳನ್ನು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಣದೊಂದಿಗೆ ಕಾರ್ಯಾಲಯಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು(ಗ್ರೇಡ್-೧) ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ದೂರವಾಣಿ ಸಂಖ್ಯೆ ೦೮೩೧-೨೪೭೦೫೪೫ ಮೊಬೈಲ್ ಸಂಖ್ಯೆ:೮೧೦೫೪೨೧೨೪೦, ೯೯೮೦೩೮೪೮೯೨ಗೆ ಕರೆ ಮಾಡಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಡಿಪ್ಲೋಮಾ ಪ್ರವೇಶ: ಅವಧಿ ವಿಸ್ತರಣೆ
ಪ್ರಥಮ ಡಿಪ್ಲೋಮಾ ಪ್ರವೇಶ ಪ್ರಕ್ರಿಯೆಯ ಎರಡನೆಯ ಮುಂದುವರೆದ ಸುತ್ತಿನಲ್ಲಿ (Second Extended Round) ಭಾಗವಹಿಸಲು ಆನ್ಲೈನ್ ನಾನ್ಇಂಟ್ರಾಕ್ವಿವ್ ಕೌನ್ಸಲಿಂಗ್ ಮುಖಾಂತರ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಅಹ್ವಾನಿಸಿ, ಅವಧಿಯನ್ನು ವಿಸ್ತರಿಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾರ್ವಜನಿಕರ ಹಿತದೃಷ್ಟಿಯ ಮೇರೆಗೆ ಅರ್ಹ ಅಭ್ಯರ್ಥಿಗಳಿಂದ ಸ್ವತಃ ನೇರವಾಗಿ ವೆಬ್ಸೈಟ್ಗಳ ಮೂಲಕ ಅಥವಾ ಸಮೀಪ ಇರುವ ಸರ್ಕಾರಿ/ಅನುದಾನಿತ ಪಾಲಿಟೆಕ್ನಿಕ್ಗಳಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಲು ಹಾಗೂ ತಮ್ಮ ಇಚ್ಚೆಯ ಅನುಸಾರ ಪಾಲಿಟೆಕ್ನಿಕ್/ಕೋರ್ಸುಗಳನ್ನು ಆಯ್ಕೆ ಮಾಡಿ ಆಧ್ಯತಾ ಕ್ರಮಾನುಸಾರ ಗರಿಷ್ಠ ಸಂಖ್ಯೆಯ ಆಪ್ಷನ್ ಎಂಟ್ರಿಯನ್ನು ಆನ್ಲೈನ್ನಲ್ಲಿ ದಾಖಲಿಸಲು ಸೆ.೭ ರಿಂದ ಸೆ.೧೬ ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ:
ಎಸ್.ಎಸ್.ಎಲ್.ಸಿ/ತತ್ಸಮಾನ ಅಂಕಪಟ್ಟಿ ಅಥವಾ Statement of Marks,, ಜಾತಿ & ಆದಾಯ ಪ್ರಮಾಣ ಪತ್ರ ಆರ್.ಡಿ. ನಂಬರ್, ಕನ್ನಡ ಮಾಧ್ಯಮ ವ್ಯಾಂಸಗ ಪ್ರಮಾಣ ಪತ್ರ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಹೈದ್ರಾಬಾದ್-ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ನೀಡಬೇಕು.
ಮೀಸಲಾತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಪ್ರಮಾಣ ಪತ್ರವನ್ನು ಸ್ಕ್ಯಾನ್ ಮಾಡಿ PDF Format ನಲ್ಲಿ 1MB ಮೀರದಂತೆ ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅಪ್ಲೋಡ ಮಾಡುವುದು. ದಾಖಲಾತಿಗಳು ಲಭ್ಯವಿಲ್ಲದಿದ್ದಲ್ಲಿ, ಮೀಸಲಾತಿ ಕ್ಲೇಮ ಮಾಡಿ ಸೀಟು ಆಯ್ಕೆ ಮಾಡಿಕೊಂಡ ನಂತರ ಪ್ರವೇಶಾತಿ ಸಮಯದಲ್ಲಿ ಸಂಬಂಧಪಟ್ಟ ಮೀಸಲಾತಿ ಮೂಲ ದಾಖಲಾತಿಯನ್ನು ಕಡ್ಡಾಯವಾಗಿ ಹಾಜರಪಡಿಸುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
ಅರ್ಜಿ ನೋಂದಣಿ ಶುಲ್ಕವನ್ನು ಆನ್ಲೈನ್ ಮೂಲಕ ಸೀಟು ಹಂಚಿಕೆಯಾದ ನಂತರ ಅಭ್ಯರ್ಥಿಯು ಪ್ರವೇಶ ಪಡೆಯುವ ಪಾಲಿಟೆಕ್ನಿಕ್ನಲ್ಲಿಯೇ ನಿಗಧಿಪಡಿಸಿರುವ ಪ್ರವೇಶ ಶುಲ್ಕದೊಂದಿಗೆ ಅರ್ಜಿ ಶುಲ್ಕವನ್ನು (ಸಾಮಾನ್ಯ ವರ್ಗ/೨ಎ/೨ಬಿ/೩ಎ/೩ಬಿ ರೂ. ೧೦೦ ಪ.ಜಾ/ಪ.ಪಂ/ಪ್ರವರ್ಗ೧ ರೂ. ೫೦) ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಾಲೇಜು & ತಾಂತ್ರಿ ಶಿಕ್ಷಣ ಇಲಾಖೆಯ & ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://dtek.karnataka.gov.in & www.cetonline.karnataka.gov.in/kea/ ಗೆ ಭೇಟಿ ನೀಡಬಹುದು
ದಾಖಲಾತಿ ಪರಿಶೀಲನಾ ಕೇಂದ್ರ:
ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ -೦೮೩೧/೨೪೬೧೨೦೬, ಸರ್ಕಾರಿ ಪಾಲಿಟೆಕ್ನಿಕ್, ಅಥಣಿ ಪ್ರಾಚಾರ್ಯರ ಮೊಬೈಲ್ ಸಂಖ್ಯೆ: ೯೪೪೮೬೩೫೧೬೩, ಮರಾಠಾ ಮಂಡಳ ಪಾಲಿಟೆಕ್ನಿಕ್, ಬೆಳಗಾವಿ ೯೮೪೫೪೪೮೬೪೩, ಗೋಮಟೇಶ ಪಾಲಿಟೆಕ್ನಿಕ್, ಹಿಂದವಾಡಿ ಬೆಳಗಾವಿ ಮೊಬೈಲ್ ಸಂಖ್ಯೆ: ೯೪೪೯೪೭೯೧೨೩, ಭರತೇಶ ಪಾಲಿಟೆಕ್ನಿಕ್, ಬಸವನ ಕುಡುಚಿ, ಬೆಳಗಾವಿ ಮೊಬೈಲ್ ಸಂಖ್ಯೆ: ೯೮೮೬೩೯೫೨೩೦ಗೆ Pರೆ ಮಾಡಬಹುದು ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹರಾಜು ಪ್ರಕ್ರಿಯೆ
ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯಲ್ಲಿ ವಿವಿಧ ಮಾದರಿಯ ನಿರುಪಯುಕ್ತ ವಾಹನಗಳನ್ನು ಅಕ್ಟೋಬರ್ ೫ ರಂದು ಬೆಳಗ್ಗೆ ೧೧.೩೦ಕ್ಕೆ ಹರಾಜು ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.
ವಾಹನಗಳ ವಿವಿರ:
ಕೆ.ಎ-೦೫ ಜಿ-೬೦೨೬ ಮಾರುತಿ ಓಮೀನಿ, ಕೆ.ಎ-೨೨ ಜಿ-೧೩೩ ಮಾರುತಿ ಓಮೀನಿ ಅಂಬುಲೆನ್ಸ ಹಾಗೂ ಕೆ.ಎ-೨೨ ಜಿ-೦೧೩೫ ರಾಯಲ್ ಎನ್ಫೀಲ್ಡ್ ಮೋಟರ ಸೈಕಲ್ ವಾಹನಗಳ ಹರಾಜು ಪ್ರಕ್ರಿಯೆಯು ಕೇಂದ್ರ ಕಾರಾಗೃಹದ ಕಚೇರಿ ಆವರಣದಲ್ಲಿ ಇರುತ್ತದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ಬೀಜಗಳ ಮಾರಾಟಕ್ಕೆ ಪರವಾನಿಗೆ ಕಡ್ಡಾಯ
ಬೆಳಗಾವಿ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಸಕಾಲ (ಸೇವಾ ಸಿಂಧೂ) ಯೋಜನೆಯಡಿ ತೋಟಗಾರಿಕೆ ಬೆಳೆಗಳ ಬೀಜ ಮಾರಾಟ ಪರವಾನಿಗೆ ಪ್ರಮಾಣ ಮಪತ್ರ ನೀಡುವ ಕಾರ್ಯಕ್ರಮವೂ ಪ್ರಗತಿಯಲ್ಲಿದ್ದು, ಬೀಜ ನಿಯಂತ್ರಣಾ ಕಾಯ್ದೆ ೧೯೮೩ ರ ಪ್ರಕಾರ ಬೀಜ ಮಾರಾಟ ಮಾಡುವವರು ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ತೋಟಗಾರಿಕೆ ಬೆಳೆಗಳ ಬೀಜ ಮಾರಾಟಗಾರರೂ ಸಹ ಕಡ್ಡಾಯವಾಗಿ ತೋಟಗಾರಿಕೆ ಇಲಾಖೆವತಿಯಿಂದ ಪಡೆದುಕೊಳ್ಳಬೇಕು. ಒಂದು ವೇಳೆ ಪರವಾನಿಗೆ ಪತ್ರ ಪಡೆದುಕೊಳ್ಳದೇ, ಕಳಪೆ ಬೀಜ ಮಾರಾಟ ಮಾಡುವುದು ಅಥವಾ ಆವಧಿ ಮೀರಿದ ಬೀಜಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳವಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕ
ಕಾಗವಾಡ ತಾಲೂಕಿನ ವ್ಯಾಪ್ತಿಯ ಕಾಗವಾಡ ಶಿಶು ಅಭಿವೃಧ್ಧಿ ಯೋಜನೆಯ ವಿವಿಧ ಗ್ರಾಮಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಗೌರವ ಸೇವೆಯಲ್ಲಿ ಆಯ್ಕೆ ಸಮಿತಿ ಮುಖಾಂತರ ಗುರುತಿಸಲಾಗುತ್ತಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತಿ ಹೆಸರು:
ಜಂಬಗಿ ಗ್ರಾಮ ಪಂಚಾಯತಿಯ ಶಿವನೂರ-೪ (ಇತರೆ), ಬಳ್ಳಿಗೇರಿ ಗ್ರಾಮ ಪಂಚಾಯತಿಯ ಬಳ್ಳಿಗೇರಿ-೪ (ಇತರೆ), ಪಾರ್ಥನಹಳ್ಳಿ ಗ್ರಾಮ ಪಂಚಾಯತಿಯ ಪಾರ್ಥನಹಳ್ಳಿ-೦೩ (ಇತರೆ) ಹಾಗೂ ಕುಸನಾಳ ಗ್ರಾಮ ಪಂಚಾಯತಿಯ ಮೋಳವಾಡ (ಮಿನಿಅಂ.ಕೇಂದ್ರ)-೪ (ಇತರೆ) ಇವು ಕಾಗವಾಡ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಕೇಂದ್ರಗಳ ಪಟ್ಟಿವಾಗಿದೆ.
ಅಂಗನವಾಡಿ ಸಹಾಯಕಿ ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯತಿ ಹೆಸರು:
ಸಂಬರಗಿ ಗ್ರಾಮ ಪಂಚಾಯತಿಯ ನಾಗನೂರ ಪಿ.ಎ-೧ (ಇತರೆ), ಶೇಡಬಾಳ ವಾರ್ಡ ನಂ.೧೧ ಗ್ರಾಮ ಪಂಚಾಯತಿಯ ಶೇಡಬಾಳ-೧೧ (ಪ.ಪಂ), ಮಲಬಾದ ಗ್ರಾಮ ಪಂಚಾಯತಿಯ ಬೇವನೂರ-೨ (ಪ.ಜಾ), ತಂಗಡಿ ಗ್ರಾಮ ಪಂಚಾಯತಿಯ ಕತ್ರಾಳ-೧ (ಇತರೆ) ಕಾಗವಾಡ ಗ್ರಾಮ ಪಂಚಾಯತಿಯ ಕಾಗವಾಡ-೯ (ಇತರೆ), ಉಗಾರ ಖುರ್ದ ವಾರ್ಡ ನಂ.೦೫ ಗ್ರಾಮಪಂಚಾಯತಿಯ ಉಗಾರ ಖುರ್ದ-೪ (ಇತರೆ), ಬಳ್ಳಿಗೇರಿ ಗ್ರಾಮ ಪಂಚಾಯತಿಯ ಬಳ್ಳಿಗೇರಿ-೪ (ಇತರೆ), ಉಗಾರ ಖುರ್ದ ವಾರ್ಡ ನಂ-೧೬ ಗ್ರಾಮ ಪಂಚಾಯತಿಯ ವಿನಾಯಕವಾಡಿ-೧(ಇತರೆ), ಉಗಾರ ಖುರ್ದ ವಾರ್ಡ ನಂ-೨೨ ಗ್ರಾಮ ಪಂಚಾಯತಿಯ ಫರಿದಖಾನವಾಡಿ-೧ (ಇತರೆ), ಐನಾಪೂರ ವಾರ್ಡ ನಂ-೦೭ ಗ್ರಾಮ ಪಂಚಾಯತಿಯ ಐನಾಪೂರ (ಇತರೆ), ಕೃಷ್ಣಾಕಿತ್ತೂರ ಗ್ರಾಮ ಪಂಚಾಯತಿಯ ಕೃಷ್ಣಾಕಿತ್ತೂರ-೨ (ಪ.ಜಾ) ಹಾಗೂ ಶಿರೂರ ಗ್ರಾಮ ಪಂಚಾಯತಿಯ ಖೋತಚವಾಡಿ-೧ (ಇತರೆ) ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಕೇಂದ್ರಗಳ ಪಟ್ಟಿ ಇಂತಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ