Kannada NewsKarnataka NewsLatest

ರಸ್ತೆ ಹಾಗೂ ಗಟಾರ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕ  ಮಹಾನಗರ ಪಾಲಿಕೆಯ ಎಸ್.ಎಫ್.ಸಿಯ  1 ಕೋಟಿ ರೂ. ಅನುದಾನದಡಿಯಲ್ಲಿ ರಸ್ತೆ ಹಾಗೂ ಗಟಾರು ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಾರುತಿ ನಗರದಲ್ಲಿ ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡುವುದು ಇಲ್ಲಿನ ರಹವಾಸಿಗಳ ಬಹಳ ವರ್ಷಗಳ ಬೇಡಿಕೆಯಾಗಿತ್ತು, ಅದರನ್ವಯ ಮಹಾನಗರ ಪಾಲಿಕೆಯ ಎಸ್.ಎಫ್.ಸಿ ಅನುದಾನದಡಿಯಲ್ಲಿ ರಸ್ತೆ ಹಾಗೂ ಗಟಾರು ನಿರ್ಮಾಣವನ್ನು ಕೈಗೊಳ್ಳಲಾಗುತ್ತಿದ್ದು, ರಹವಾಸಿಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದರು.

ಇಲ್ಲಿನ ಸಾರ್ವಜನಿಕರು ಗುತ್ತಿಗೆದಾರರೊಂದಿಗೆ ಪರಸ್ಪರ ಸಹಕರಿಸಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ಮಾಡಿಸಿಕೊಳ್ಳಬೇಕೆಂದರು.  ಕಾಮಗಾರಿಗಳಲ್ಲಿ ಗುಣಮಟ್ಟತೆಯನ್ನು ಕಾಪಾಡಿಕೊಂಡು ಇಲ್ಲಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಮತಕ್ಷೇತ್ರದ ಸಂಪೂರ್ಣ ಅಭಿವೃಧ್ದಿಗೆ ಇನ್ನೂ ಹೆಚ್ಚು ಶ್ರಮಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರೊಂದಿಗೆ ಮಹಾನಗರ ಪಾಲಿಕೆಯ ಸಹಾಯಕ ಅಭಿಯಂತರ  ವೀಣಾ ಬೆಣ್ಣಿ, ಗುತ್ತಿಗೆದಾರರಾದ ವೈಭವ ಭಡಾಳೆ, ಶಾಸಕರ ಆಪ್ತ ಸಹಾಯಕ ವಿ.ಎಮ್.ಪತ್ತಾರ, ಸ್ಥಳೀಯ ಮುಖಂಡರುಗಳಾದ ರಮೇಶ ತಹಶೀಲ್ದಾರ, ಅನಗೋಳಕರ, ಸದಾನಂದ ಗುಂಟೆಪ್ಪನವರ (ಬೆಳಗಾವಿ ಉತ್ತರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷರು), ಈರಯ್ಯ ಖೋತ (ಬೆಳಗಾವಿ ಉತ್ತರ ಬಿ.ಜೆ.ಪಿ. ಪ್ರಧಾನ ಕಾರ್ಯದರ್ಶಿಗಳು) ಹಾಗೂ ಅನೇಕ ಸ್ಥಳೀಯ ರಹವಾಸಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button