Kannada NewsKarnataka NewsLatest

ಸಣ್ಣ ಬೀದಿ ವ್ಯಾಪಾರಿಗಳಿಗೆ ಅಭಿನಂದನಾ ಪತ್ರ ವಿತರಣೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ-  ಯಕ್ಸಂಬಾ ಪಟ್ಟಣದ ಶ್ರೀ ಬಿರೇಶ್ವರ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ ಸಭಾಭವನದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಬಿದಿ ವ್ಯಾಪಾರಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು.

 ಕರೋನಾ ಮಹಾಮಾರಿ ಸಂದರ್ಭದಲ್ಲಿ ತಮಗೆ ವ್ಯಾಪಾರ ಆಗದೇ ಮನೆಯಲ್ಲಿ ಇದ್ದು ನಷ್ಟ ಅನುಭವಿಸಿದ್ದಿರಿ. ಹಾಗಾಗಿ ತಾವು ಬೀದಿ ಬೀದಿ ಅಲೆದಾಡಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದು, ತಾವು ಮಾಡುತ್ತಿರುವ ಸಣ್ಣ ಪುಟ್ಟ ವ್ಯಾಪಾರಗಳು ಇನ್ನಷ್ಟು ಅಭಿವೃದ್ದಿ  ನಿಪ್ಪಾಣಿ ಮತಕ್ಷೇತ್ರದಲ್ಲಿ ೭೦೦ ಫಲಾನುಭವಿಗಳಿಗೆ ಹಾಗೂ ಚಿಕ್ಕೋಡಿ ಮತಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರ ಪ್ರಯತ್ನದಿಂದ ೨೮೦ ಜನರಿಗೆ ತಲಾ ೧೦,೦೦೦ ರೂ ಗಳನ್ನು ತಮಗೆ ಒದಗಿಸಿ ಕೊಟ್ಟಿದ್ದೆನೆ. ಇಂದು ೧೦೨ ಜನ ಫಲಾನುಭವಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಗುತ್ತಿದೆ. ನಾಳೆಯಿಂದ ಆಯಾ ಗ್ರಾಮಗಳಲ್ಲಿ ಕಾರ್ಯಕರ್ತರು ಅಭಿನಂದನಾ ಪತ್ರ ವಿತರಿಸುತ್ತಾರೆ ಎಂದು ಜೊಲ್ಲೆ ಹೇಳಿದರು.
ಬ್ಯಾಂಕ್ ಖಾತೆಗೆ ಅನುದಾನದ ಹಣ ಜಮಾ ಆಗಿದ್ದು, ಈ ಅನುದಾನವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ಅಭಿವೃದ್ದಿಗೊಳಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭೂ ನ್ಯಾಯ ಮಂಡಳಿ ಸದಸ್ಯರಾದ ರಾಮಚಂದ್ರ ಬಾಕಳೆ, ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪ ಜಾಧವ, ಓಜಿಸಿಎಸ್‌ ಚೇರಮನರಾದ ಲಕ್ಷ್ಮಣ ಕಬಾಡೆ, ನಿರ್ದೇಶಕರಾದ ಅನ್ವರ ದಾಡಿವಾಲೆ, ಪಟ್ಟಣ ಪಂಚಾಯತ ಸದಸ್ಯರಾದ ರಜನಿಕಾಂತ ಪಾಂಗಮ, ದಯಾನಂದ ಮಾಳಿ, ಮನೋಹರ ಕುಪ್ಪಾನಟ್ಟಿ, ಮಹಾದೇವ ರಾಯಜಾದವ, ಶಂಕರ ರೇಂದಾಳೆ, ಉಮೇಶ ಪೊತದಾರ, ಸುರೇಶ ಸಲಗರೆ, ಸುಭಾಷ ಕಟ್ಟಿಕರ, ಪಿಂಟು ಬಡಿಗೇರ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button