Kannada NewsKarnataka NewsLatest

ಅನಂತಪುರ -ನವ ದೆಹಲಿ ಕಿಸಾನ್ ರೈಲಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅನಂತಪೂರ-ಹೊಸ ದೆಹಲಿ ಕಿಸಾನ ರೈಲಿಗೆ ಕೇಂದ್ರ ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ ಇಲಾಖೆಯ ಸಚಿವ ನರೇಂದ್ರ ಸಿಂಗ ತೊಮರ ಹಾಗೂ ಆಂದ್ರ ಪ್ರದೇಶದ ಮುಖ್ಯಮಂತ್ರಿಗಳಾದ ಜಗನ್ ಮೋಹನ ರೇಡ್ಡಿ ಅವರು ಬುಧವಾರ (ಸೆ.೯) ಆನ್‌ಲೈನ್ ವಿಡಿಯೋ ಸಂವಾದದ ಮೂಲಕ ಹಸಿರು ನಿಶಾನೆ ತೊರಿಸಿದರು.
ನಗರದಲ್ಲಿ ಇರುವ ತಮ್ಮ ಕಚೇರಿಯಿಂದ ವಿಡಿಯೋ ಸಂವಾದದ ಮೂಲಕ ಭಾಗ ವಹಿಸಿ ಮಾತನಾಡಿದ ರಾಜ್ಯ ರೈಲ್ವೆ ಸಚಿವ ಸುರೇಶ ಅಂಗಡಿ ಅವರು, ದೇಶದ ಪ್ರಧಾನ ಮಂತ್ರಿಗಳು ರೈತರಿಗಾಗಿ ಕಿಸಾನ ರೈಲು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಕಿಸಾನ ರೈಲುಗಳಿಂದ ರೈತರ ಆದಾಯವು ದ್ವಿಗುಣ ಆಗಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ಹಳ್ಳಿ ಹಳ್ಳಿಗೂ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂಬ ಯೋಜನೆಯನ್ನು ಜಾರಿಗೆ ತಂದಿದ್ದರು. ಅದೆ ರೀತಿ ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ರೈತರ ಉತ್ಪನ್ನಗಳನ್ನು ಬೇರೆ ಬೇರೆ ನಗರಗಳಿಗೆ ತಲುಪಿಸಲು ಕಿಸಾನ ರೈಲು ಯೋಜನೆ ಜಾರಿಗೆ ತಂದಿದ್ದಾರೆ.
ರೈತರು ತಮಗೆ ಹೆಚ್ಚು ಆದಾಯ ಬರುವ ಕಡೆ ತಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು. ರೈತರಿಗೆ ಈ ಮುಂಚೆ ತಾವು ಬೆಳೆದ ಉತ್ಪನ್ನಗಳನ್ನು ಅನ್ಯ ರಾಜ್ಯಗಳಿಗೆ ಸಾಗಿಸಿ ಮಾರಾಟ ಮಾಡಲು ಸಾದ್ಯವಾಗುತಿರಲಿಲ್ಲ. ಆದರೆ ಕಿಸಾನ ರೈಲಿನಿಂದ ರ‍್ಯತರಿಗೆ ಸಹಾಯವಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ಪ್ರತಿಯೊಬ್ಬ ರೈತನು ಕೂಡಾ ಸ್ವಾಭಿಮಾನದಿಂದ ಬದುಕಬೇಕು ಎಂದು ಸಚಿವ ಸುರೇಶ ಅಂಗಡಿ ಅವರು ಹೇಳಿದರು.
ಈ ವೇಳೆ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಪೂರುಶೋತ್ತಮ ರುಪಲಾ, ಕೃಷಿ ಮತ್ತು ರೈತ ಕಲ್ಯಾಣ ಕೇಂದ್ರ ರಾಜ್ಯ ಸಚಿವ ಕೈಲಾಸ ಚೌಧರಿ ಸೆರಿದಂತೆ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button