Latest

ಖ್ಯಾತ ನಿರೂಪಕ ಸೇರಿ ಮತ್ತೆ ಮೂವರಿಗೆ ಸಿಸಿಬಿ ನೋಟಿಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಖ್ಯಾತ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್​ , ಮಾಜಿ ಕಾಂಗ್ರೆಸ್​ ಶಾಸಕ ಆರ್​ ವಿ ದೇವರಾಜ್​ ಮಗ ಯುವರಾಜ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿದ್ದು, ನಾಳೆ ವಿಚಾರಣೆಗೆ ಹಾಜರಾಗುಂತೆ ಸೂಚಿಸಿದೆ.

ಡ್ರಗ್ಸ್ ಜಾಲದ ಆರೋಪಿಅಗಳ ವಿಚಾರಣೆ ವೇಳೆ ಅಕುಲ್​ ಬಾಲಾಜಿ ಹೆಸರು ಕೇಳಿ ಬಂದ ಹಿನ್ನೆಲೆ ಅವರಿಗೆ ನೋಟಿಸ್​​ ನೀಡಲಾಗಿದೆ. ನೋಟಿಸ್​ಗೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಅಕುಲ್​ ಬಾಲಾಜಿ, ವಾಟ್ಸಾಪ್​ ಮೂಲಕ ನನಗೆ ನೋಟಿಸ್​ ಸಿಕ್ಕಿದೆ. ಸದ್ಯ ನಾನು ಹೈದ್ರಾಬಾದ್​ನಲ್ಲಿದ್ದು, ನಾಳೆಯೇ ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರಿಗೆ ಉತ್ತರಿಸಿದ್ದೇನೆ ಎಂದಿದ್ದಾರೆ.

ಇನ್ನು ನಟ ಸಂತೋಷ್ ಸಂಜನಾ ಜತೆ ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದ. ಸಂತೋಷ್ ಕೂಡ ನಾಳೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ.

ಇನ್ನು ಸುಧಾಮನಗರ ಕಾರ್ಪೋರೇಟರ್​ ಆರ್​ವಿ ದೇವರಾಜ್​ ಮಗ ಆರ್​ವಿ ಯುವರಾಜ್​ಗೆ ನೋಟಿಸ್​ ನೀಡಿರುವುದರಿಂದ ಚಿತ್ರರಂಗದ ಜೊತೆ ರಾಜಕೀಯ ನಾಯಕರ ಹೆಸರು ಕೂಡ ಈ ಪ್ರಕರಣದಲ್ಲಿ ಕೇಳಿಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್​, ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇದೆ, ನನ್ನ ಹೆಸರು ಈ ಪ್ರಕರಣದಲ್ಲಿ ಯಾಕೆ ಬಂತು ಗೊತ್ತಿಲ್ಲ ಎಂದಿದ್ದಾರೆ, ದಿಂಗತ್​ ಐಂದ್ರಿತಾ, ರಾಗಿಣಿ ವಿರೇನ್ ಖನ್ನಾ ಯಾರ ಜೊತೆ ಕೂಡ ನನ್ನ ಒಡನಾಟವಿಲ್ಲ. ಬೇಕಾದಲ್ಲಿ ನನ್ನ ಕಾಲ್​ ಡೀಟೈಲ್​ ತೆಗೆದು ನೋಡಲಿ ಎಂದು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button