Latest

ಸಿಎಂ ಯಡಿಯೂರಪ್ಪ ಕುಟುಂಬದಿಂದ ಲಂಚ ಸ್ವೀಕಾರ: ಕೆಪಿಸಿಸಿ ನೂತನ ಉಸ್ತುವಾರಿ ಸುರ್ಜೇವಾಲ ಗಂಭೀರ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಯಡಿಯೂರಪ್ಪ, ಪುತ್ರ ವಿಜಯೇಂದ್ರ, ಮೊಮ್ಮಗ ಮತ್ತು ಅಳಿಯನ ವಿರುದ್ಧ ಅಕ್ರಮ ಹಣ ಸ್ವೀಕಾರ ಆರೋಪ ಮಾಡಿರುವ ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ, ಅಪಾರ್ಟ್ ಮೆಂಟ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕುಟುಂಬ ಬರೋಬ್ಬರಿ 666 ಕೋಟಿ ರೂ ಭ್ರಷ್ಟಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ

ಕೆಪಿಸಿಸಿ ಉಸ್ತುವಾರಿ ವಹಿಸಿಕೊಂಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬದ ವಿರುದ್ಧ ಗಂಭೀರ ಆರೋಪ ಮಾಡಿದರು. ಸಿಎಂ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಮರಾಡಿ ಹಾಗೂ ಅಳಿಯ ವಿರೂಪಾಕ್ಷ ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಎಂದರು.

ಈ ಬಗ್ಗೆ ನಮ್ಮ ಬಳಿ ದಾಖಲೆಗಳಿದ್ದು, ಕೋಲ್ಕತ್ತಾದಿಂದ ಬೆಂಗಳೂರಿಗೆ ಹಣ ವರ್ಗಾವಣೆಯಾಗಿದೆ. ಸಿಎಂ ಮೊಮ್ಮಗ ಶಶಿಧರ್ ಅವರಿಗೆ ಹಣವನ್ನು ಆರ್ ಟಿ ಜಿಎಸ್ ಮಾಡಲಾಗಿದೆ. ವಿಜಯೇಂದ್ರ ಅವರೇ ಹಣ ಕೇಳಿದ್ದರ ಬಗ್ಗೆ ನಮ್ಮ ಬಳಿ ಆಡಿಯೋ ಕೂಡ ಇದೆ. ಇಲ್ಲ ಅಕ್ರಮಗಳಿಗೆ ಸಿಎಂ ಯಡಿಯೂರಪ್ಪಗೆ ಸಂಪೂರ್ಣ ಮಾಹಿತಿ ಇದೆ ಆದಾಗ್ಯೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಯಡಿಯೂರಪ್ಪನವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button