Kannada NewsKarnataka NewsLatest

ಬೆಳಗಾವಿ ಪೊಲೀಸರಿಂದ 2 ಭರ್ಜರಿ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಾಕತಿ ಠಾಣೆ ಪೊಲೀಸರು ಮನೆಗಳ್ಳನನ್ನು ಬಂಧಿಸಿ 2.71 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಪಣಗುತ್ತಿಯ ಯಲ್ಲಪ್ಪ ಗಂಗಪ್ಪ ಗೌಡಣ್ಣವರ್ ಎನ್ನುವವರು ನೀಡಿದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳುವು ಮಾಡಿದ್ದ 3.74 ಲಕ್ಷ ರೂ. ಮೌಲ್ಯದ ನಗ, ನಗದುಗಳಲ್ಲಿ 2.71 ಲಕ್ಷ ರೂ. ಮೌಲ್ಯವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಕತಿ ಪಿಐ ರಾಘವೇಂದ್ರ ಹಳ್ಳೂರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

 

ಮಟ್ಕಾ ಬುಕ್ಕಿ ಬಂಧನ: 2.11 ಲಕ್ಷ ರೂ. ವಶ

ಡಿಸಿಪಿ ವಿಕ್ರಂ ಅಮಟೆ ನೇತೃತ್ವದಲ್ಲಿ ನಗರದ ಖಂಜರ್ ಗಲ್ಲಿಯಲ್ಲಿ ದಾಳಿ ನಡೆಸಿದ ಪೊಲೀಸರು ಮಹಮ್ಮದ್ ಶಫಿ ತಹಸಿಲ್ದಾರ್ ಎನ್ನುವ ಮಟ್ಕಾ ಕಿಂಗ್ ಪಿನ್ ಮತ್ತು ಬುಕ್ಕಿಯನ್ನು ಮತ್ತು ಆತನ 22 ಸಹಚರರನ್ನು ಬಂಧಿಸಿದ್ದಾರೆ. ಅವರಿಂದ 2.11 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

15 ಮೊಬೈಲ್ ಮತ್ತು ಮಟ್ಕಾ ಚೀಟಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಇವರೆಲ್ಲ ಮಟ್ಕಾ ಆಡುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ತ್ಯಾಗರಾಜನ್ ಪೊಲೀಸ್ ಆಯುಕ್ತರಾಗಿ, ವಿಕ್ರಂ ಅಮಟೆ ಡಿಸಿಪಿಯಾಗಿ ಮತ್ತು ಎನ್.ವಿ.ಬರಮನಿ ಕ್ರೈಂ ಎಸಿಪಿಯಾಗಿ ಬಂದ ನಂತರ ಬೆಳಗಾವಿಯಲ್ಲಿ ಕಾರ್ಯಾಚರಣೆ ಚುರುಕಿನಿಂದ ನಡೆಯುತ್ತಿದ್ದು, ಯಾವುದೇ ರೀತಿಯ ಅಪರಾಧ ಚಟುವಟಿಕೆ ಗಮನಕ್ಕೆ ಬಂದರೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button