ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಪೆಟ್ರೋಲ್ ಬಂಕ್ ನಲ್ಲಿ ವಾಹನಗಳಿಗೆ ಪೆಟ್ರೋಲ್-ಡೀಸೆಲ್ ಬದಲಾಗಿ ನೀರು ಮಿಶ್ರಣಮಾಡಿ ಹಾಕುತ್ತಿದ್ದ ಘಟನೆ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಪೆಟ್ರೋಲ್ ಹಾಕಿಸಿಕೊಂಡವರ ವಾಹನಗಳ ಇಂಜಿನ್ ಸಂಪೂರ್ಣ ಬ್ಲಾಕ್ ಆಗಿ ಕೆಟ್ಟು ನಿಂತಿವೆ.
ಇಲ್ಲಿನ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬದಿದೆ. ನಾರಾಯಣಪುರ ಗ್ರಾಮದ ಹನುಮಂತ ಎಂಬುವರು ತಮ್ಮ ಟಾಟಾ ಏಸ್ ಗಾಡಿಗೆ ಡೀಸೆಲ್ ಹಾಕಿಸಿದ್ದರು, ವಾಹನ ಸ್ವಲ್ಪ ದೂರ ತೆರಳಿ ಇಂಜಿನ್ ಬ್ಲಾಕ್ ಆಗಿ ವಾಹನ ರಿಪೇರಿಗೆ ಬಂದಿತ್ತು.
ಅದೇ ಬಂಕ್ ನಲ್ಲಿ ಡೀಸೆಲ್ ಹಾಕಿಸಿದ ಹನುಮಂತನ ಸ್ನೇಹಿತನ ಗಾಡಿಗೂ ಇದೆ ಸಮಸ್ಯೆಯಾಗಿದೆ. ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿದಾಗ, ಅದರಲ್ಲಿ ನೀರು ಬೆರೆತಿರುವುದು ತಿಳಿದುಬಂದಿದೆ. ಈ ಬಗ್ಗೆ ಬಂಕ್ ಮಾಲೀಕರನ್ನು ಕೇಳಿದರೆ ತಾವು ಬೇಕೆಂದು ನೀರು ಬೆರೆಸಿಲ್ಲ. ಮಳೆಯಿಂದಾಗಿ ಪೆಟ್ರೋಲ್-ಡೀಸೆಲ್ ಟ್ಯಾಂಕ್ ಗೆ ನೀರು ಸೇರಿರಬಹುದು ಎಂದು ಸಮಜಾಯಿಷಿ ನೀಡಿದ್ದಾರೆ. ನಾರಾಯಣಪುರದ ಪೆಟ್ರೋಲ್ ಬಂಕ್ ವಿರುದ್ಧ ಇದೀಗ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ