ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಯುವತಿ ಕರೀನಾ ರಾಜು ಒರೊಬ್ಯೇವಾ ಜಯಪುರದಲ್ಲಿ ಇಂಡಿಯನ್ ಫ್ಯಾಶನ್ ಫಿಯೆಸ್ಟಾ ಆಯೋಜಿಸಿದ್ದ ವೋಗ್ಗಿಶ್ ಫ್ಯಾಶನ್ ಶೋದಲ್ಲಿ ಮಿಸ್ಸೆಸ್ ಇಂಡಿಯಾ-2019 ಆಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ಒಟ್ಟೂ 5 ದಿನಗಳ ಕಾಲ ಸ್ಪರ್ಧೆಯ ವಿವಿಧ ಹಂತಗಳು ನಡೆದ ನಂತರ ಫೆ.2ರಂದು ಅಂತಿಮ ಸ್ಪರ್ಧೆ ನಡೆಯಿತು. ರಾಷ್ಟ್ರದ ವಿವಿಧೆಡೆಯಿಂದ ಭಾಗವಹಿಸಿದ್ದ 30 ಸ್ಪರ್ಧಿಗಳಲ್ಲಿ ಕರೀನಾ ಬಂಗಾರದ ಕಿರೀಟ ಮುಡಿಗೇರಿಸಿಕೊಂಡರು. ತನ್ಮೂಲಕ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಮಿಸ್ಸೆಸ್ ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಕರೀನಾ ಅರ್ಹತೆ ಪಡೆದಿದ್ದಾರೆ.
ಶಿವಾನಿ ಸಿಂಗ್ ಫರ್ಸ್ಟ್ ರನ್ನರ್ ಅಪ್ ಆಗಿ, ಅನುಪಮ ಖೋಲ್ಸಾ ಸೆಕೆಂಡ್ ರನ್ನರ್ ಅಪ್ ಆಗಿ ಆಯ್ಕೆಯಾದರು. ಮಿಸ್ ಇಂಡಿಯಾ ಆಗಿ ಧನಶ್ರೀ ಗೋವ್ಸಾ, ಫರ್ಸ್ಟ್ ರನ್ನರ್ ಅಪ್ ಆಗಿ ಸೌದಾಮಿಣಿ ನಾಯಕ, ಸೆಕೆಂಡ್ ರನ್ನರ್ ಅಪ್ ಆಗಿ ಸಾತಾಶಕಿ ಸಿಂಗ್ ಆಯ್ಕೆಯಾದರು. ಮಿಸ್ಟರ್ ಇಂಡಿಯಾ ಆಗಿ ಝಾಹಿರ್ ಅಹಮದ್, ಪರ್ಸ್ಟ್ ರನ್ನರ್ ಅಪ್ ಆಗಿ ಅಂಕಿತ್ ದುಹಾನ್, ಸೆಕೆಂಡ್ ರನ್ನರ್ ಅಪ್ ಆಗಿ ಏವನಾಥ್ ಖಾನ್ ಆಯ್ಕೆಯಾದರು.
ಮೂಲತಃ ರಷ್ಯಾದವರಾದ 25 ವರ್ಷದ ಕರೀನಾ 2013ರಲ್ಲಿ ಬೆಳಗಾವಿಗೆ ಬಂದು, ಬೆಳಗಾವಿಯ ರಾಜು ಚಂದ್ರಶೇಖರಪ್ಪ ಅವರನ್ನು 2014ರಲ್ಲಿ ವಿವಾಹವಾಗಿ, ಇಲ್ಲಿಯ ಹನುಮಾನ ನಗರದಲ್ಲಿ ವಾಸವಾಗಿದ್ದಾರೆ. ರಾಜು ರಿಯಲ್ ಎಸ್ಟೇಟ್ ಉದ್ಯಮಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ