Kannada NewsKarnataka News

ಮಾನವೀಯತೆ ಮೆರೆದ ಸದಲಗಾ ಪಿಎಸ್‌ಐ ಆರ್.ವೈ.ಬೀಳಗಿ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -: ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರನನ್ನು ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಿ.ಎಸ್.ಐ ಆರ್.ವೈ.ಬೀಳಗಿ ಮಾನವೀಯತೆ ಮೆರೆದಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಸದಲಗಾ ನಗರದ ಗಣಪತಿ ಮಂದಿರದ ಬಳಿ ಕೆ.ಎಸ್.ಆರ್.ಟಿ.ಸಿ.ಬಸ್ ( ಕೆಎ೨೩/, ೭೬೮ ) ಹಾಗೂ ಬೈಕ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಮುಖಕ್ಕೆ ತೀವ್ರವಾದ ಗಾಯವಾದ ಘಟನೆ ಮಂಗಳವಾರ ನಡೆದಿದೆ.

ಅಪಘಾತದ ಸುದ್ದಿ ತಿಳಿದ ಸದಲಗಾ ಪಿ.ಎಸ್.ಐ ಆರ್.ವೈ.ಬೀಳಗಿ ಘಟನಾ ಸ್ಥಳಕ್ಕೆ ಆಗಮಿಸಿದವರೇ ಯಾವುದೇ ಅಂಬುಲೆನ್ಸ್ ಗೆ ಕಾಯದೇ ತಮ್ಮದೇ ಇಲಾಖೆಯ ಸ್ವಂತ ವಾಹನದಲ್ಲಿ ಗಾಯಾಳು ಬೈಕ್ ಸವಾರನನ್ನು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಿದರು.

ನಂತರ ಸಂಚಾರ ದಟ್ಟನೆಯಾಗಿದ್ದನ್ನು ಮುಂದೆ ನಿಂತು ತಕ್ಷಣ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದಾಗ ಬೈಕ್ ಸವಾರನ ಮುಖಕ್ಕೆ ತೀವ್ರವಾದ ಗಾಯವಾಗಿದ್ದನ್ನು ನೋಡುತ್ತಿರುವ ಜನ ಮೊದಲು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಿಲ್ಲ. ಇನ್ನು ಕೆಲವರು ಮೊಬೈಲ್ ಲ್ಲಿ ಅಪಘಾತದ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಆಗಮಿಸಿದ ಪಿಎಸ್ಐ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button