ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ಅಕ್ಟೋಬರ್ 10ರಂದು ನಾಲ್ಕನೇ ಪದವಿ ದಿನ ಆಚರಿಸುತ್ತಿದೆ.
ಈ ಸಂದರ್ಭದಲ್ಲಿ ಟೋಕಿಯೊ ಶಿಬೌರಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರಾದ ಪ್ರೊ. ಮಸಾಟೊ ಮುರಕಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಂಬೈನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ (ಎನ್ಐಟಿಐಇ) ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಸಂಜಯ್ ಗೋವಿಂದ್ ಧಾಂಡೆ ಅವರು ಪದವಿ ದಿನದ ಭಾಷಣ ಮಾಡಲಿದ್ದಾರೆ.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ, ಕಾರ್ಯಕ್ರಮದ ಗೌರವ ಅತಿಥಿಯಾಗಿ ಭಾಗವಹಿಸಲಿದ್ದು, ಪ್ರೊ. ಎ. ಎಸ್. ದೇಶಪಾಂಡೆ, ಕುಲಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ವಹಿಸಲಿದ್ದಾರೆ. ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಪ್ರದೀಪ್ ಎಸ್. ಸಾವಕಾರ ಮತ್ತು ಕೆಎಲ್ಎಸ್ ಜಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಎಂ. ಆರ್. ಕುಲಕರ್ಣಿ ಅವರು ಸಮಾರಂಭದಲ್ಲಿ ಉಪಸ್ಥಿತರಿರುವರು.
ಈ ವರ್ಷ ಕೆಎಲ್ಎಸ್ ಜಿಐಟಿ, ೮೭೧ ಎಂಜಿನಿಯರ್ ಗಳು, ೬೪ ವಾಸ್ತುಶಿಲ್ಪಿಗಳು, ೫೪ ಎಂ.ಟೆಕ್, ೫೨ ಎಂಬಿಎ ಮತ್ತು ೧೦೬ ಎಂಸಿಎ ವಿದ್ಯಾರ್ಥಿಗಳಿಗೆ ಪದವಿ ದಿನದಂದು ತಾತ್ಕಾಲಿಕ ಪದವಿ ನೀಡಿ ಗೌರವಿಸಲಿದೆ ಎಂದು ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಯಂತ್ ಕೆ. ಕಿತ್ತೂರ ಅವರು ಹೇಳಿದ್ದಾರೆ.
ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ೧೯೭೯ ರಲ್ಲಿ ಸ್ಥಾಪನೆಯಾದ ಕರ್ನಾಟಕ ಲಾ ಸೊಸೈಟಿಯ ಒಂದು ಪ್ರಮುಖ ಸಂಸ್ಥೆಯಾಗಿದ್ದು, ೦೭ ಪದವಿಪೂರ್ವ ಮತ್ತು ೯ ಸ್ನಾತಕೋತ್ತರ ವಿಭಾಗಗಳನ್ನು ಒಳಗೊಂಡಿದೆ.
ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಶಾಶ್ವತ ಅಂಗಸಂಸ್ಥೆ ಮತ್ತು ಸ್ವಾಯತ್ತ ಸಂಸ್ಥೆಯಾದ ಕೆಎಲ್ಎಸ್ ಜಿಐಟಿಯನ್ನು ರಾಷ್ಟ್ರೀಯ ಮಾನ್ಯತೆ ಮಂಡಳಿ (NBA) ಮತ್ತು (NAAC), A+ ಮಾನ್ಯತೆ ಪಡೆದಿದೆ. ಕೆಎಲ್ಎಸ್ ಜಿಐಟಿಯು ೪೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತ್ತು ಸುಮಾರು ೨೭೦ ಕ್ಕೂ ಹೆಚ್ಚು ಅರ್ಹ ಮತ್ತು ಪ್ರೇರಿತ ಕಾರ್ಯಪಡೆಗೆ ಆಶ್ರಯ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ