ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್: ಶಿರಸಿಯಲ್ಲಿ ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ, ಶಿರಸಿ –  ಶಿರಸಿ ನಗರದ ಮರಾಠಿಕೊಪ್ಪ ಬಸ್ ನಿಲ್ದಾಣದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಐಪಿಎಲ್ ಕ್ರೀಕೆಟ್ ಬೆಟ್ಟಿಂಗ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಾರುಕಟ್ಟೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಮರಾಠಿಕೊಪ್ಪದ  ಚಂದ್ರಶೇಖರ ಗಣಪತಿ ಪಟಗಾರ  ಮತ್ತು ಕಿರಣ ಗಣಪತಿ ಪಟಗಾರ ಬಂಧಿತರು.   ಆರೋಪಿತರಿಂದ 11,295 ರೂ.  ಹಾಗೂ ಜೂಜಾಟಕ್ಕೆ ಬಳಸಿಕೊಂಡಿದ್ದ 2 ಮೊಬೈಲ್ ಗಳನ್ನು ಮಾರುಕಟ್ಟೆ ಪೊಲೀಸರು  ಜಪ್ತಿಪಡಿಸಿಕೊಂಡಿದ್ದು ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
  ಶಿರಸಿ ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿಗಳಾದ ಚಿದಾನಂದ ನಾಯ್ಕ,  ಇಸ್ಮಾಯೀಲ್ ಕೋಣನಕೇರಿ,ರೋನಾಲ್ಡ ಅಲ್ಮೇಡಾ,ಮೋಹನ ನಾಯ್ಕ ರವರನ್ನು ಒಳಗೊಂಡ ತಂಡ ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
 ಶಿವಪ್ರಕಾಶ್ ದೇವರಾಜು ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,  ಬದ್ರಿನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ,  ಗೋಪಾಲಕೃಷ್ಣ ನಾಯಕ ಡಿ.ಎಸ್.ಪಿ ಶಿರಸಿ ಉಪವಿಭಾಗ,   ಬಿ.ಯು ಪ್ರದೀಪ್ ವೃತ್ತ ನಿರೀಕ್ಷಕರು  ಮಾರ್ಗದರ್ಶನ ನೀಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button