ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಾಲೆಗಳಿಗೆ ಮಧ್ಯಂತರ (ದಸರಾ) ರಜೆ ನೀಡುವ ಸಾಧ್ಯತೆ ಇದೆ.
ವಿದ್ಯಾಗಮ ಯೋಜನೆ ಹಿನ್ನೆಲೆಯಲ್ಲಿ ಶಾಲೆಗಳ ದಸರಾ ರಜೆಯನ್ನು ರದ್ದು ಮಾಡಲಾಗಿತ್ತು. ಆದರೆ ಇದೀಗ ವಿದ್ಯಾಗಮ ಯೋಜನೆ ರದ್ದಾಗಿದ್ದರಿಂದ ಶಾಲೆಗಳಿಗೆ ದಸರಾ ರಜೆ ನೀಡಲು ಸರಕಾರ ಚಿಂತನೆ ನಡೆಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಮಕ್ಕಳಿಗೆ ರಜೆ ಇದ್ದರೂ ಶಿಕ್ಷಕರಿಗೆ ಈ ಬಾರಿ ರಜೆ ನೀಡಿಲ್ಲ. ಶಿಕ್ಷಕರು ಜೂನ್ ತಿಂಗಳಿನಿಂದಲೂ ಶಾಲೆಗಳಿಗೆ ತೆರಳುತ್ತಿದ್ದಾರೆ. ಅವರು ಕೊರೋನಾ ಅಪಾಯದ ಮಧ್ಯೆಯೇ ವಿದ್ಯಾಗಮ ಸೇರಿದಂತೆ ಇನ್ನಿತರ ಕೆಲಸಗಳಲ್ಲಿ ನಿರತರಾಗಿದ್ದಾರೆ.
ವಿದ್ಯಾಗಮ ಯೋಜನೆಯಿಂದಾಗಿ ರಾಜ್ಯದಲ್ಲಿ 150ಕ್ಕೂ ಹೆಚ್ಚು ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದರಿಂದಾಗಿ ಇದೀಗ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಶಿಕ್ಷಕರಿಗೆ ದಸರಾ ರಜೆಯನ್ನು ನೀಡುವ ಸಾಧ್ಯತೆ ಇದೆ. ಇದರಿಂದಾಗಿ ಶಿಕ್ಷಕರಿಗೆ ಸ್ವಲ್ಪ ಮಟ್ಟಿಗೆ ನೆಮಮ್ದಿ ಸಿಗಲಿದೆ.
ವಿದ್ಯಾಗಮ ಯೋಜನೆ ರದ್ದಾಗಿದ್ದನ್ನು ಸ್ವಾಗತಿಸಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದಸರಾ ರಜೆಯನ್ನು ನೀಡುವಂತೆ ಮನವಿ ಮಾಡಿದೆ. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಸಂಘ ಮನವಿ ಸಲ್ಲಿಸಿದೆ. ವಿದ್ಯಾಗಮ ರದ್ದಾಗಿದ್ದರಿಂದ ಅಕ್ಟೋಬರ್ 31ರ ವರೆಗೆ ಮಧ್ಯಂತರ ರಜೆ ನೀಡುವಂತೆ ವಿನಂತಿಸಿದೆ.
ಶಿಕ್ಷಕರಿಗೆ ತೀವ್ರ ಗತಿಯಲ್ಲಿ ಕೊರೋನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಮಧ್ಯಂತರ ರಜೆ ನೀಡುವ ದಿಸೆಯಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ. ಇನ್ನು 2 ದಿನದಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಮಧ್ಯಂತರ ರಜೆ ರದ್ದು: ಶಿಕ್ಷಕರ ಸಂಘಟನೆಗಳ ಅಸಮಾಧಾನ
ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ
ವಿದ್ಯಾಗಮ ಯೋಜನೆ; ಕೊರೊನಾಗೆ ಬಲಿಯಾದ ಶಿಕ್ಷಕರು ಎಷ್ಟು ಗೊತ್ತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ