Kannada NewsKarnataka NewsLatest

​ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮತ್ತೆ ಬಂಪರ್ ಕೊಡುಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ಶುಕ್ರದೆಸೆ ಬಂದೊಂದಗಿದಂತಿದೆ. ಕ್ಷೇತ್ರದಲ್ಲಿ ಎಡೆಬಿಡದೆ ನಿರಂತರವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಈಗ ಮತ್ತೆ 40 ಲಕ್ಷ ರೂ. ವೆಚ್ಚದಲ್ಲಿ ಹಲವು ರಸ್ತೆಗಳ ಅಭಿವೃದ್ಧಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭಾನುವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.
 ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದ ಶಿವಬಸವ ನಗರದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ರಸ್ತೆಯ ಡಾಂಬರೀಕರಣದ ಕಾಮಗಾರಿಗಳಿಗೆ ಚಾಲನೆಯನ್ನು ನೀಡಲಾಯಿತು. ಎರಡು ಮುಖ್ಯ ರಸ್ತೆಗಳು ಹಾಗೂ ಆರು ಒಳಾಂಗಣ ರಸ್ತೆಗಳನ್ನು​ ಇದು​ ಒಳಗೊಂಡಿ​ದೆ​.
ಪಂತ ನಗರದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅನುದಾನದಲ್ಲಿ‌ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ ಸಹ ಭಾನುವಾರ ಅಧಿಕೃತವಾಗಿ ಚಾಲನೆಯನ್ನು ನೀಡಲಾಯಿತು.
ಹಲವಾರು ವರ್ಷಗಳಿಂದ ಗ್ರಾಮಸ್ಥರ ಬೇಡಿಕೆಯಾಗಿದ್ದ ಈ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿರುವುದು ನನಗೆ ಖುಷಿಯನ್ನು ತಂದಿದೆ. ​ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಗುರಿಯೊಂದಿಗೆ, ಕ್ಷೇತ್ರದ ಜನರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದಗಳೊಂದಿಗೆ  ಅಭಿವೃದ್ಧಿ ಕೆಲಸಗಳನ್ನು ನೆರವೇರಿಸುತ್ತಿದ್ದೇನೆ.  ಇನ್ನೂ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಕನಸನ್ನು ಹೊತ್ತಿದ್ದೇನೆ. ನನ್ನನ್ನು ಮನೆಮಗಳಂತೆ ನೋಡುತ್ತಿರುವ ನಿಮ್ಮ ಋಣ ತೀರಿಸುವ ಕೆಲಸವನ್ನು ಮುಂದುವರಿಸುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಕಾಮಗಾರಿಗಳ ಚಾಲನೆಯ ಸಂದರ್ಭದಲ್ಲಿ ಗ್ರಾಮದ​  ಹಿರಿಯರು, ಸ್ಥಳೀಯ ನಿವಾಸಿಗಳು, ​ ತಾಲೂಕ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಎಮ್ ಜಿ ಪಾಟೀಲ, ಶ್ರೀಕಾಂತ ಪುಡಕಲ್ಕಟ್ಟಿ, ಬಸವರಾಜ ಮೆನಸಿನಕಾಯಿ, ಹಿಟ್ಟಣಗಿ, ಪಿಡಿಓ ಬಾಗಲಿ, ಜಗದೀಶ ಬಾಗೇವಾಡಿ​, ಹಿಟ್ಟಣಗಿ, ಅಪ್ಜರ್​ ಮುಂತಾದವರು ಉಪಸ್ಥಿತರಿದ್ದರು.
ಇನ್ನೂ ಹಲವಾರು ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಕನಸನ್ನು ಹೊತ್ತಿದ್ದೇನೆ. ನನ್ನನ್ನು ಮನೆಮಗಳಂತೆ ನೋಡುತ್ತಿರುವ ನಿಮ್ಮ ಋಣ ತೀರಿಸುವ ಕೆಲಸವನ್ನು ಮುಂದುವರಿಸುತ್ತೇನೆ
–  ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button