Latest

ನವರಾತ್ರಿ ವಿಶೇಷ ಕಜ್ಜಾಯ, ಭಾಗ -6

                              ಕಾಯಿಲಾಡು (ಕೊಬ್ಬರಿ ಉಂಡೆ)

ತುಪ್ಪ  ಇಲ್ಲದಿರುವಾಗ, ಲಾಡು ಮಾಡಬೇಕೆನಿಸಿದರೆ, ಕರಿಯುವುದು  ಪಾಕಹಿಡಿಯುವ ಗೊಡವೆ ಇಲ್ಲದೆ ಪಟಾ ಪಟ್ ಅಂತಾ ಸುಲಭವಾಗಿ  ಕಡಿಮೆ ಸಾಮಗ್ರಿಗಳನ್ನು  ಉಪಯೋಗಿಸಿ ಮಾಡಬಹುದಾದ  ಸಿಹಿ ಕಜ್ಜಾಯ ಕಾಯಿ ಲಾಡು.
 ಬೇಕಾದ ಸಾಮಗ್ರಿ:
ತೆಂಗಿನಕಾಯಿತುರಿ 2 ಕಪ್, ಸಕ್ಕರೆ  ಒಂದುವರೆ ಕಪ್, ಚಿಟಕಿ ಏಲಕ್ಕಿ ಪುಡಿ,( 2ಪಾರ್ ಲೆಜಿ ಬಿಸ್ಕೇಟ್ ಸ್ವಲ್ಪ ಹಾಲು)
ಮಾಡುವ ವಿಧಾನ:     
ಕಾಯಿತುರಿಗೆ ಸಕ್ಕರೆ ಏಲಕ್ಕಿ ಪುಡಿಸೇರಿಸಿ ದಪ್ಪತಳದ ಪಾತ್ರೆಯಲ್ಲಿ ಹಾಕಿ ಕಾಯಿಸ ಬೇಕು. ಏಲಕ್ಕಿ ಪುಡಿಯನ್ನು ಸೇರಿಸ ಬೇಕು .ಬಿಸ್ಕೇಟನ್ನು ಸ್ವಲ್ಪ ಹಾಲಿನಲ್ಲಿ ನೆನೆಸಿ ಹಾಕಬೇಕು. ಸಕ್ಕರೆ ಕರಗಿದ ನಂತರ ಬೇಗನೆ ಪಾಕಬರುವುದು. ಕಾಯಿಯ ಮಿಶ್ರಣವು  ಮುದ್ದೆಯಾದರೆ ಉಂಡೆಯ ಹದ ಬಂದಿದೆ ಎಂದರ್ಥ.ಬಿಸಿ ಇರುವಾಗಲೆ ಇದನ್ನು ಉಂಡೆ ಕಟ್ಟಬೇಕು.ಬಿಸ್ಕೇಟನ್ನು ಹಾಲಿನಲ್ಲಿ ನೆನಸಿ ಹಾಕುವದರಿಂದ  ಲಾಡು ಮೃದುವಾಗಿ  ಜ್ಯೂಸಿಯಾಗಿ ಬರುತ್ತದೆ.
 ಪಟಾಪಟ್ ಹತ್ತು ನಿಮಿಷದಲ್ಲಿ ಕಾಯಿ ಲಾಡು ರೆಡಿ.
(ಬೇಕಿದ್ದರೆ ಮಾತ್ರ ಬಿಸ್ಕೇಟ್ ಸೇರಿಸಬಹುದು. ಸೇರಿಸಿದರೆ ರುಚಿ ಚೆನ್ನಾಗಿ ಬರುತ್ತದೆ.)
-ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button