Latest

ನವರಾತ್ರಿ ವಿಶೇಷ ಕಜ್ಜಾಯ, ಭಾಗ – 7

ಜೇನುಕೋಲು

ಮಲೆನಾಡಿನ ಹವ್ಯಕರಲ್ಲಿ ಮಾಡುವ  ಸಾಂಪ್ರದಾಯಿಕ ಕಜ್ಜಾಯದಲ್ಲಿ ಜೇನುಕೋಲು ಸಹ ಒಂದು. ಒಂದು ಸಲ ಮಾಡಿದರೆ ಮತ್ತೆ ಮತ್ತೆ ಮಾಡುತ್ತೀರಾ  ಈ ಕಜ್ಜಾಯವನ್ನಾ. ಹೆಸರೇ ಹೇಳುವಂತೆ ಜೇನಿನಂತೆ ತುಂಬಾ ಸಿಹಿಯಾಗಿ ಇರುತ್ತದೆ.
ಬೇಕಾಗುವ ಸಾಮಗ್ರಿಗಳು:
ದೋಸೆ ಅಕ್ಕಿ 1 ಕಪ್, ಬೆಲ್ಲ  2 ಕಪ್, ಹಸಿ ಕೊಬ್ಬರಿ ತುರಿ 1 ಕಪ್, ಕರಿಯಲು ಎಣ್ಣೆ ,ರುಚಿಗೆ ತಕ್ಕಸ್ಟು ಉಪ್ಪು.
ಮಾಡುವ ವಿಧಾನ:  
ಅಕ್ಕಿಯನ್ನು 2-3 ತಾಸು ನೀರಿನಲ್ಲಿ ನೆನೆಹಾಕಬೇಕು. ನಂತರ ಚನ್ನಿಗಿ ತೊಳೆದು ದೋಸೆಹಿಟ್ಟಿನ ಹದಕ್ಕೆ  ರುಬ್ಬಿ ರುಚಿಗೆ ತಕ್ಕಸ್ಟು  ಉಪ್ಪು ಸೇರಿಸಿ ಇಡಬೇಕು.
ಕೊಬ್ಬರಿ ತುರಿಗೆ ಸ್ವಲ್ಪ ಬೆಲ್ಲಸೇರಿಸಿ ಕಲಸಿಟ್ಟಿರಬೇಕು.
ಉಳಿದ ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ  ಒಂದೆಳೆ ಪಾಕ ಬರುವುದರೊಳಗೆ ಗ್ಯಾಸಿನಿಂದ ಇಳಿಸಬೇಕು. (ಪಾತ್ರೆಯ ಬಿಸಿಗೆ ಒಂದೆಳೆ ಪಾಕ ವಾಗಿರುತ್ತದೆ.)
ಮೊದಲು ತಯಾರಿಸಿಟ್ಟ  ದೋಸೆಹಿಟ್ಟಿನಿಂದ ಪೇಪರ್ ದೋಸೆ(ತೆಳ್ಳೇವು) ಮಾಡಿಕೊಳ್ಳಬೇಕು. ದೋಸೆಯ ಒಂದು ತುದಿಯಲ್ಲಿ ಬೆಲ್ಲ ಮಿಶ್ರಿತ ಕೊಬ್ಬರಿಯನ್ನು ಇಟ್ಟು , ಅಕ್ಕ ಪಕ್ಕ ಮಡಿಸಿ ಸುರುಳಿ ಸುತ್ತ ಬೇಕು.(ಕೊಬ್ಬರಿ ತುರಿ ಹೊರಗೆ ಬರದ ರೀತಿ ಸುತ್ತಬೇಕು.)ಇದನ್ನಾ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ಮೊದಲು ಮಾಡಿಟ್ಟಪಾಕಕ್ಕೆ ಹಾಕಿ 8-10 ನಿಮಿಷ ನೆನೆಸಬೇಕು. ನಂತರ ಜಿಲೇಬಿ ತರವೇ ಡಬ್ಬದಲ್ಲಿ ತುಂಬಿ ಇಡಬಹುದು. ತಿನ್ನುವಾಗ ತುಪ್ಪ ಮತ್ತು ಜೇನುತುಪ್ಪ ಹಾಕಿ ತಿಂದರೆ ಅದರ ರುಚಿಯೇ ಬೇರೆ. ಮತ್ತೆ ಮತ್ತೆ ಜೇನುಕೋಲು ಮಾಡಿ ತಿನ್ನುತ್ತೀರಿ.
-ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button