ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ತಾಲೂಕಾ ಅಧ್ಯಕ್ಷರೂ, ಜಿಲ್ಲಾ ಚುಟುಕು ಸಾಹಿತ್ಯಪರಿಷತ್ತಿನ ಹಿರಿಯ ಉಪಾಧ್ಯಕ್ಷರೂ ಆದ ಬಸವರಾಜ ಸಸಾಲಟ್ಟಿ ನಿಧನರಾಗಿದ್ದಾರೆ.
ದೇವರಾಜ ಅರಸ ಕಾಲನಿ ಸ್ವಗೃಹದಲ್ಲಿ ಮಂಗಳವಾರ ಅವರು ನಿಧನ ಹೊಂದಿದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು.
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಅವರು ಮೂಲತಃ ಗೋಕಾಕ ತಾಲೂಕಿನ ಕುಲಗೋಡದವರಾಗಿದ್ದು ನಿವೃತ್ತಿ ನಂತರ ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇತರ ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ