Kannada NewsKarnataka NewsLatest

2 ಅಪರಿಚಿತ ಶವ ಪತ್ತೆ; 3 ಕೈಗಾರಿಕ ಘಟಕಗಳ ಸೀಜ್

   ಪುಸ್ತಕಗಳು ೫೦% ರಿಯಾಯಿತಿ ದರಗಳಲ್ಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕನ್ನಡರಾಜ್ಯೋತ್ಸವದ ಅಂಗವಾಗಿ ೨೦೨೦ ರ ನವೆಂಬರ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ ೫೦% ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಆನ್‌ಲೈನ್ ನಲ್ಲಿ ಕೂಡ ೫೦% ರಿಯಾಯಿತಿ ಲಭ್ಯವಿದೆ.
ಅದೇ ರೀತಿ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲದಲ್ಲಿಯೂ ಕೂಡ ಶೇಕಡಾ ೫೦% ರ ರಿಯಾಯಿತಿಯಲ್ಲಿ ಇಲಾಖೆಯ ವೆಬ್ ಸೈಟ್ ನಲ್ಲಿ ಪುಸ್ತಕಗಳ ವಿಭಾಗದಲ್ಲಿ ಆಯ್ಕೆ ಮಾಡಿ ಆನ್ ಲೈನ್ ಮೂಲಕ ಹಣ ಪಾವತಿಸಿ ಪುಸ್ತಕಗಳನ್ನು ಅಂಚೆ ಮೂಲಕ ಪಡೆಯಬಹುದಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈ ವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಸುಮಾರು ೩೬೦ ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ.
ಅತ್ಯಂತ ಮೌಲಿಕವಾದ ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶವನ್ನು ಕನ್ನಡ ಪುಸ್ತಕ ಪ್ರಾಧಿಕಾರ ಹೊಂದಿದೆ ಎಂದು ಕನ್ನಡ ಪುಸ್ತಕ ಪಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಅಪರಿಚಿತ ವ್ಯಕ್ತಿಯ ಶವ ಪತ್ತೆ

ರಾಯಭಾಗ- ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣಗಳ ಮಧ್ಯದ ನಾಗರಬಾವಿ ಗ್ರಾಮದ ಹತ್ತಿರ ನವೆಂಬರ್ ೪ ರಂದು ಅಪರಿಚಿತ ವ್ಯಕ್ತಿ (೪೫) ಚಲಿಸುವ ರೈಲು ಗಾಡಿ ಮುಂದೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ನವೆಂಬರ್ ೪ ರಂದು ಪ್ರಕರಣ ದಾಖಲಿಸಲಾಗಿರುತ್ತದೆ.
ಮೃತನ ಎತ್ತರ ೫ ಪುಟ್ ೫ ಇಂಚು ಸಾದ ಗಪ್ಪು ಮೈಬಣ್ಣ, ಮೈಯಿಂದ ಸದೃಢ, ತೆಲೆಯಲ್ಲಿ ೨ ಕಪ್ಪು ಕೂದಲು, ದಪ್ಪ ಮೀಶೆ ಇರುತ್ತವೆ, ಉಡಪುಗಳು ಮೃತನು ಕಪ್ಪು ಡಿಸೈನವುಳ್ಳ ಪುಲ್ ಶರ್ಟ, ಸಾಧಗಪ್ಪು ಪ್ಯಾಂಟ, ಚಾಕಲೇಟ ಕಲರ್ ಅಂಡರವೇರ್ ಧರಿಸಿರುತ್ತಾನೆ.
ಈ ಚಹರೆಯುಳ್ಳ ವ್ಯಕ್ತಿಯ ಸಂಬಂದಿಕರು ಇದ್ದಲ್ಲಿ ಕೂಡಲೇ ಪೊಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ಇವರನ್ನು ಸಂಪರ್ಕಿಸಬೇಕು, ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ ೯೪೮೦೮೦೨೧೨೭   ಸಂಪರ್ಕಿಸಲು ರೈಲ್ವೆ ಪೋಲಿಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯ ಶವ ಪತ್ತೆ

-: ಬೆಳಗಾವಿ- ದೇಸೂರ ಮಧ್ಯದ ಮಜಗಾಂವ ಹತ್ತಿರ ನವೆಂಬರ್ ೧ ರಂದು ಅಪರಿಚಿತ ವ್ಯಕ್ತಿ (೪೫) ಚಲಿಸುವ ರೈಲು ಗಾಡಿ ಮುಂದೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾನೆ. ಈ ಕುರಿತು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಮೃತನ ಎತ್ತರ ೫ ಪುಟ್ ೫ ಇಂಚು ಸಾದ ಗಪ್ಪು ಮೈಬಣ್ಣ, ಮೈಯಿಂದ ಸದೃಢ, ಹೊಟ್ಟೆಯ ಮೇಲೆ ೨ ತದ್ದ ಇರುವ ಕಲೆಗಳು ಇರುತ್ತವೆ, ಮೃತನು ಉಡಪುಗಳು ಚಾಕಲೇಟ ಚೌಕಡಿಯುಳ್ಳ ಪುಲ್ ಶರ್ಟ, ಬೂಧಿ ಬಣ್ಣದ ಪ್ಯಾಂಟ, ಚಾಕಲೇಟ ಕಲರ್ ಅಂಡರವೇರ್ ಧರಿಸಿರುತ್ತಾನೆ.
ಈ ಚಹರೆಯುಳ್ಳ ವ್ಯಕ್ತಿಯ ಸಂಭಂದಿಕರು ಇದ್ದಲ್ಲಿ ಕೂಡಲೇ ಪೊಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ಇವರನ್ನು ಸಂಪರ್ಕಿಸಬೇಕು, ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ ೯೪೮೦೮೦೨೧೨೭  ಸಂಪರ್ಕಿಸಲು ರೈಲ್ವೆ ಪೋಲಿಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಪ್ಲೋಮಾ ಪ್ರವೇಶಾತಿ: ಅರ್ಜಿ ಆಹ್ವಾನ

ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಹಾಗೂ ತೃತೀಯ ವರ್ಷದ (ಲ್ಯಾಟರಲ್ ಎಂಟ್ರಿ) ೨೦೨೦-೨೧ನೇ ಸಾಲಿನ ಅಥಣಿ ಸರ್ಕಾರಿ ಪಾಲಿಟೆಕ್ನನಲ್ಲಿ ಪ್ರವೇಶ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳನ್ನು ಇಲಾಖೆಯ ವೆಬ್‌ಸೈಟ್ ಮುಖಾಂತರ ಅರ್ಜಿ ಪಡೆದು ನವೆಂಬರ್ ೧೪ ರ ಸಂಜೆ ೫ ಗಂಟೆಯೊಳಗಡೆ ಸಂಬಂಧಿತ ಸೂಕ್ತ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ಮೂಲ ದಾಖಲಾತಿಗಳನ್ನು ತೆಗೆದುದುಕೊಂಡು, ಪ್ರಾಚಾರ್ಯರ ಹಂತದಲ್ಲಿ ಪ್ರವೇಶ ಪಡೆಯ ಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಮೊ.೯೪೪೮೬೩೫೧೬೩ ನ್ನು ಸಂಪರ್ಕಿಸಬೇಕೆಂದು ಎಂದು ಅಥಣಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಪ್ರವೇಶಾತಿ: ಅರ್ಜಿ ಆಹ್ವಾನ

ಸರ್ಕಾರಿ ಉಪಕರಣಾಗಾರ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರ ಬೆಳಗಾವಿ ಉಪಕೇಂದ್ರವನ್ನು ೧೯೯೭ ರಿಂದ ಪ್ರಾರಂಭಿಸಲಾಗಿದ್ದು, ಜಿ.ಟಿ.ಟಿ.ಸಿ ಕೇಂದ್ರಗಳಲ್ಲಿ ಹೈಟೆಕ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗಿದೆ. ಇದರಲ್ಲಿ ಬೆಳಗಾವಿ ಕೇಂದ್ರವು ಒಂದಾಗಿದೆ.
ತರಬೇತಿ ಸಂಸ್ಥೆಯನ್ನು ಪ್ರಾರಂಭ ಮಾಡುವ ಉದ್ದೇಶವೇನೆಂದರೆ ನುರಿತ ಮಾನವ ಸಂಪನ್ಮೂಲವನ್ನು ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ಒದಗಿಸುವುದು ಹಾಗೂ ಕೈಗಾರಿಕಾ ಸಂಸ್ಥೆಗಳ ಅಭಿವೃದ್ಧಿಗೆ ತಂತ್ರಜ್ಞಾನ ಮತ್ತು ತರಬೇತಿಗಳ ನೆರವು ನೀಡುವುದಾಗಿದೆ.
ಸಂಸ್ಥೆಯು ತಾಂತ್ರಿಕ ಮತ್ತು ಕೈಗಾರಿಕಾ ಉತ್ಪಾದನಾ ಕ್ಷೇತ್ರದಲ್ಲಿ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುವಲ್ಲಿ ಪರಿಣಿತಿ ಹೊಂದಿದ್ದು ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೊಳಪಟ್ಟಿದೆ. ಸಂಸ್ಥೆಯಲ್ಲಿನ ಕಾರ್ಯವೈಖರಿ ಶಿಕ್ಷಣದ ಮೂಲಕ ತಯಾರಿಕೆ ಮತ್ತು ತಯಾರಿಕೆಯ ಮೂಲಕ ಶಿಕ್ಷಣ.
ಸಂಸ್ಥೆಯಲ್ಲಿ ಡಿಪ್ಲೋಮಾ ತರಬೇತಿ ಪಡೆದ ಅಭ್ಯರ್ಥಿಗಳು ಉನ್ನತ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಯಶಸ್ವಿ ಸ್ವಯಂ ಉದ್ಯಮಿಯಾಗಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನುಪ್ಯಾಕ್ಚರಿಂಗ್ (ಡಿಪಿಎಮ್) ಕೋರ್ಸಿನಲ್ಲಿ ಸೀಮಿತ ಸೀಟುಗಳು ಉಳಿದಿದ್ದು, ಅವುಗಳನ್ನು ಭರ್ತಿಮಾಡಲು ಎಸ್.ಎಸ್.ಎಲ್.ಸಿ ಪಾಸಾಗಿರುವ ಆಸಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರು ತರಬೇತಿ ಕೇಂದಕ್ಕೆ ಭೇಟಿ ನೀಡಿ ನವೆಂಬರ್ ೨೭ ರೊಳಗೆ ಪ್ರವೇಶಗಳನ್ನು ಪಡೆದುಕೊಂಡು ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಿಸಿಕೊಳ್ಳಬೇಕೆಂದು ಜಿಟಿಟಿಸಿ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಜಿಟಿಟಿಸಿ ಬೆಳಗಾವಿ-೫೯೦೦೦೮ ಮೊ: ೦೮೩೧-೨೯೫೦೬೧೧, ೯೧೪೧೬೩೦೩೦೯, ನ್ನು ಸಂಪರ್ಕಿಸಲುಕೊರಲಾಗಿದೆ.

ವಿದ್ಯುತ್ ನಿಲುಗಡೆ

:ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆ ಅಗಲೀಕರಣ ಕೆಲಸವನ್ನು ಕೈಗೊಳ್ಳುತ್ತಿರುವುದರಿಂದ ಹಾಗೂ ವಿದ್ಯುತ್ ಮಾರ್ಗಗಳ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ನವೆಂಬರ್ ೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಾಯಂಕಾಲ ೬. ಗಂಟೆಯವರೆಗೆ ವಿದ್ಯುತ್ ನಿಲುಗಡೆ ಆಗಲಿದೆ.
೧೧೦ ಕೆ.ವ್ಹಿ. ಮಚ್ಛೆ ಉಪಕೇಂದ್ರದಿಂದ ವಿತರಣೆಯಾಗುವ ದೇಸೂರ್, ಸುಸ್ಗ್ಯಾಣಟ್ಟಿ, ಮಚ್ಛೆ ಹಾಗೂ ಪೀರಣವಾಡಿ ಗ್ರಾಮಗಳಿಗೆ ಹಾಗೂ ಔದ್ಯೋಗಿಕ್ ಕ್ಷೇತ್ರಕ್ಕೆ ಹಾಗೂ ಖಾನಾಪುರ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಎಂದು ಹು.ವಿ.ಸ.ಕಂ ಗ್ರಾಮೀಣ ವಿಭಾಗದ ಕಾಂiiನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೈಗಾರಿಕೆ ಘಟಕ ಸೀಜ್ ಮಾಡಲು ಜಿಲ್ಲಾಧಿಕಾರಿ ಆದೇಶ

– : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ ನಿಯಮಗಳನ್ನು ಪಾಲಿಸದೇ ಇರುವ   ಸಂಬಂಧಿಸಿದ ಮೂರು ಹಾಗೂ ಮಚ್ಚೆ ಗ್ರಾಮದಲ್ಲಿರುವ ಕೈಗಾರಿಕಾ ಘಟಕವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕಾಯ್ದೆ ೧೯೭೪, ಕಲಂ.೩೩  ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಕಾಯ್ದೆ ೧೯೮೧, ಕಲಂ. ೩೧  ಪ್ರಕಾರ ನಿಯಮಗಳನ್ನು ಪಾಲಿಸದೇ ಇರುವ ಕಾರಣದಿಂದಾಗಿ ತಕ್ಷಣವೇ ಕೈಗಾರಿಕೆಯನ್ನು ಸಿಸ್ ಮಾಡುವಂತೆ ಜಿಲ್ಲಾಧಿಕಾರಿ ಎಂ.ಜಿ ಹೀರೆಮಠ ಅವರು ಪರಿಸರ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ ಬೆಳಗಾವಿ ತಾಲೂಕಿನ ಉದ್ಯಮಬಾಗ ಗ್ರಾಮದಲ್ಲಿರುವ  ಘಟಗಳನ್ನು ಸೀಜ್ ಮಾಡುವಂತೆ ತಿಳಿಸಲಾಗಿದೆ.

 M/s Ashok Iron Works Pvt Ltd, Plant – I, No.689 / 1 Udyambag Industrial Estate , Udyambag Belagavi; M/s Ashok Iron Works Pvt Ltd, Plant – 2, No.67-71 / and macche  Industrial Estate , macche  Belagavi and M/s Ashok Iron Works Pvt Ltd, Plant – 3, No.552/B,553 /B and 592/bmacche  Industrial Estate , macche   ಹಾಗೂ M/s Om Shree Servicing Center, Plot No.1951, Bharat Nagar, Machhe, Belagavi

ಪರಿಸರ ಅಧಿಕಾರಿಗಳು ಮೇಲ್ಕಂಡ ಘಟಕಗಳನ್ನು ಪೊಲೀಸ್ ಭದ್ರತೆಯೊಂದಿಗೆ ಸೀಜ್ ಮಾಡುವುದು, ಹಾಗೂ ಸದರಿ ಘಟಕದಲ್ಲಿ ಮಾಲಿನ್ಯಕ್ಕೆ ಮತ್ತು ಸುತ್ತಮುತ್ತಲಿನ ಜನರ ಆರೋಗ್ಯಕ್ಕೆ ಹಾನಿಯಾಗುವಂತಹ ರಾಸಾಯನಿಕಗಳು ಇದ್ದಲ್ಲಿ ಅವುಗಳನ್ನು ನಿಯಮಾನುಸಾರ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡಿ ಕ್ರಮ ಕೈಕೊಳ್ಳಲು ಎಂ.ಜಿ.ಹೀರೆಮಠ ಆದೇಶ ಹೊರಡಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button