Latest

ಪಂಚಭೂತಗಳಲ್ಲಿ ಲೀನರಾದ ಪತ್ರಕರ್ತ ರವಿ ಬೆಳಗೆರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೃದಯಾಘಾತದಿಂದ ನಿಧನರಾಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗರೆ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ನೆರವೇರಿಸಲಾಯಿತು.

ಬ್ರಾಹ್ಮಣ ಸಂಪ್ರದಾಯದಂತೆ ರವಿ ಬೆಳೆಗೆರೆ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನಗಳನ್ನು ಮಕ್ಕಳಾದ ಕರ್ಣ ಹಾಗೂ ಹಿಮವಂತ್ ನೆರವೆರಿಸಿದರು. ಅಂತಿಮ ವಿಧಿ-ವಿಧಾನದ ಬಳಿಕ ರವಿ ಬೆಳಗೆರೆ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು. ರವಿ ಬೆಳೆಗೆರೆ ಪಂಚಭೂತಗಳಲ್ಲಿ ಲೀನರಾದರು.

ಅಕ್ಷರ ಲೋಕದ ಮಾಂತ್ರಿಕನಾಗಿ ತಮ್ಮದೇ ಶೈಲಿಯ ಬರಹಗಳಿಂದ ಓದುಗರ ಮನಗೆದ್ದಿದ್ದ ಪತ್ರಕರ್ತ ರವಿ ಬೆಳಗೆರೆ ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಪದ್ಮನಾಭನಗರದ ಕಚೇರಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button