ಪ್ರಗತಿವಾಹಿನಿ ಸುದ್ದಿ; ವಿಜಯವಾಡ: ಕಾರಿನೊಳಗೆ ಆಟವಾಡುತ್ತಿದ್ದ ಮಕ್ಕಳು ಡೋರ್ ಲಾಕ್ ಆಗಿ ಕಾರಿನಲ್ಲಿಯೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.
ಕೊಂಡೂರು ಮಂಡಲದ ರೇಪುಡಿ ತಾಂಡಾದಲ್ಲಿ ಈ ದುರ್ಘಟನೆ ನಡೆದಿದೆ. ಪಾರ್ಕ್ ಮಾಡಿದ್ದ ಕಾರಿನ ಡೋರ್ ಸ್ವಲ್ಪ ತೆರೆದುಕೊಂಡಿತ್ತು. ಈ ವೇಳೆ ಆಟವಾಡುತ್ತಾ ಇಬ್ಬರು ಮಕ್ಕಳು ಕಾರಿನ ಬಾಗಿಲು ತೆರೆದು ಕಾರಿನೊಳಗೆ ಸೇರಿಕೊಂಡಿದ್ದಾರೆ. ಕಾರಿನ ಡೋರ್ ಲಾಕ್ ಆಗಿದೆ. ಉಸಿರುಗಟ್ಟಿದ ಪರಿಣಾಮ ಕಾರಿನೊಳಗೇ ಮಕ್ಕಳು ಪ್ರಾಣಬಿಟಿದ್ದಾರೆ.
ಮೃತ ಮಕ್ಕಳನ್ನು ಶ್ರೀನಿವಾಸ (5), ಯಮುನಾ (4) ಎಂದು ಗುರುತಿಸಲಾಗಿದೆ. ತುಂಬಾ ಸಮಯವಾದರೂ ಮಕ್ಕಳ ಸುಳಿವಿಲ್ಲದಿದ್ದಾಗ ಮನೆಯವರು ಹುಡುಕಾಡಿದ್ದಾರೆ. ಕಾರಿನಲ್ಲಿ ನೋಡಿದಾಗ ಮಕ್ಕಳು ಸಾವನ್ನಪ್ಪಿರುವುದು ತಿಳಿದು ಆಘಾತಕ್ಕೀಡಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ