Kannada NewsLatest

ಬೆಳಗಾವಿಯಿಂದ ಒಬ್ಬರು ಔಟ್, ಇನ್ನೊಬ್ಬರು ಇನ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಂಪುಟ ಪುನಾರಚನೆಯಾದರೆ ಬೆಳಗಾವಿಯ ಒಬ್ಬರು ಸಚಿವರಿಗೆ ಕೊಕ್ ನೀಡುವ ಸಾಧ್ಯತೆ ದಟ್ಟವಾಗಿದೆ.

ಉಮೇಶ್ ಕತ್ತಿಗೆ ಪಟ್ಟ ಕಟ್ಟಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಗೆ ಕೊಕ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅವರ ಜಾಗಕ್ಕೆ ಮಹಿಳಾ ಕೋಟಾದಲ್ಲಿ ಶಾಸಕಿ ಪೂರ್ಣಿಮಾ ಅವರಿಗೆ ಸ್ಥಾನ ಕಲ್ಪಿಸುವ ಚಿಂತನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ದೆಹಲಿಗೆ ತೆರಳಿ ವರಿಷ್ಠರಿಗೆ ನೀಡಿರುವ ಪಟ್ಟಿಯಲ್ಲಿ ಈ ಪ್ರಸ್ತಾವನೆ ಇದೆ.

ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಶಿಕಲಾ ಜೊಲ್ಲೆಯವರನ್ನು ಕೈ ಬಿಟ್ಟು ಉಮೇಶ ಕತ್ತಿಗೆ ಜಿಲ್ಲೆಯಿಂದ ಸಚಿವಸ್ಥಾನ ನೀಡಲು ಚಿಂತನೆ ನಡೆದಿದೆ.  ಆದರೆ ಶಶಿಕಲಾ ಜೊಲ್ಲೆಗೆ ಕೊಕ್ ನೀಡುವ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ ಕೆಲಸ ಮಾಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿರುವ ಅವರನ್ನು ಕೈ ಬಿಡುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಒಟ್ಟಾರೆ, ಬೆಳಗಾವಿ ರಾಜಕೀಯ ಬೆಳವಣಿಗೆ ರಾಜ್ಯ ರಾಜಕಾರಣದ ಮೇಲೆ ಹಲವು ಬಾರಿ ಪರಿಣಾಮ ಬೀರಿದ್ದು, ಇದೀಗ ಜಿಲ್ಲೆಯಿಂದ ನಾಲ್ವರು ಸಚಿವರ ಬ್ಯಾಲೆನ್ಸ್ ಕಾಪಾಡಲು ಜೊಲ್ಲೆ ಅವರನ್ನು ಕೈ ಬಿಡುವ ಸಾಧ್ಯತೆ ಕಾಣುತ್ತಿದೆ.

ಮೇಲ್ಮನೆ ಸದಸ್ಯರಾದ ಎಂಟಿಬಿ ನಾಗರಾಜ ಮತ್ತು ಆರ್.ಶಂಕರ್ ಅವರಿಗೂ ಸಚಿವಸ್ಥಾನ ಬಹುತೇಕ ಖಚಿತವಾಗಿದೆ.

ಸುಮಾರು 45 ನಿಮಿಷಗಳ ಕಾಲ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಮಧ್ಯೆ ಸಚಿವಸಂಪುಟ ಪುನಾವೃರಚನೆ ಕುರಿತು ಚರ್ಚೆ ನಡೆದಿದೆ.  2- 3 ದಿನದಲ್ಲಿ ಪಟ್ಟಿಗೆ ಹಸಿರುನಿಶಾನೆ ತೋರುವುದಾಗಿ ನಡ್ಡಾ ಭರವಸೆ ನೀಡಿದ್ದಾರೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯಿಂದ ಉಮೇಶ ಕತ್ತಿ ಸಚಿವರಾಗುವುದು ಬಹುತೇಕ ಖಚಿತವಾಗಿದೆ. ಈಚೆಗಷ್ಟೆ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದು, ಉಮೇಶ ಕತ್ತಿ ಸಚಿವರಾಗುವ ಮೂಲಕ ನವಂಬರ್ ತಿಂಗಳು ನಿಜವಾದ ದೀಪಾವಳಿ ಆಚರಿಸುತ್ತಿದ್ದಾರೆ.

ಪ್ರಗತಿವಾಹಿನಿ ಈ ಹಿಂದೆ ಪ್ರಕಟಿಸಿದ್ದ ಸುದ್ದಿ –

ಕತ್ತಿ ಬ್ರದರ್ಸ್ ಲಕ್ ಸರಿ ಇದ್ರೆ ಇದೇ ತಿಂಗಳಲ್ಲಿ 2 ಮಹತ್ವದ ಹುದ್ದೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button