ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಳ್ಳರನ್ನು ಹಿಡಿದು ಶಿಕ್ಷಿಸಬೇಕಾದ ಪೊಲೀಸರೇ ಕಳ್ಳರಿಗೆ ಚಿನ್ನಾಭರಣ ದೋಚಲು ಸಹಾಯ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಳ್ಳರಿಗೆ ಸಹಾಯಮಾಡಿದ್ದ ಕಾನ್ಸ್ ಟೇಬಲ್ ಸೇರಿ 7 ಜನರನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪೊಲೀಸ್ ಸಿಬ್ಬಂದಿ ಪರಾರಿಯಾಗಿದ್ದು, ಶೋಧಕಾರ್ಯ ಮುಂದುವರೆದಿದೆ.
ಬೆಂಗಳೂರಿನ ನಗರ್ತಪೇಟೆಯಲ್ಲಿನ ಚಿನ್ನಾಭರಣ ಅಂಗಡಿಯಲ್ಲಿ ಚಿನ್ನ ದೋಚಿ ಪರಾರೊಯಾಗಿದ್ದಾರೆ. ವ್ಯಕ್ತಿಯೊಬ್ಬ ಪರವಾನಗಿ ಇಲ್ಲದೇ ಇಲ್ಲಿ ಆಭರಣ ಅಂಗಡಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಅಂಗಡಿ ಹಿಂಭಾಗದ ಕಟ್ಟಡದ ಮಾಲೀಕ ಜೀತು ಎಂಬಾತ ಅಂಗಡಿ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ. ಇದಕ್ಕೆ ಕಾಡುಗೋಡಿ ಠಾಣೆಯ ಕಾನ್ಸ್ ಟೇಬಲ್ ಗಳಾದ ಅಶೋಕ್ ಹಾಗೂ ಚೌಡೇಗೌಡ ಜೊತೆ ಚರ್ಚೆ ನಡೆಸಿದ್ದ. ದಾಳಿಗೆ ಸಹಕರಿಸಿದರೆ ಪಾಲು ನೀಡುವುದಾಗಿಯೂ ಹೇಳಿದ್ದ. ಹೀಗೆ ಪ್ಲಾನ್ ಮಾಡಿ ಪೊಲೀಸರ ಜೊತೆ ಸೇರಿ ಅಂಗಡಿ ಮೇಲೆ 8 ಜನ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಹೀಗೆ ದೋಚಿದ್ದ ಚಿನ್ನಾಭರಣಗಳನ್ನು ಇಬ್ಬರು ಪೊಲೀಸರು ಹಾಗೂ ಉಳಿದ ಆರು ಖದೀಮರು ಹಂಚಿಕೊಂಡಿದ್ದಾರೆ. ಇದೀಗ ಕಾನ್ಸ್ ಟೇಬಲ್ ಅಶೋಕ್ ಸೇರಿ 7 ಜನರನ್ನು ಬಂಧಿಸಿದ್ದು, ಪರಾರಿಇಯಾಗಿರುವ ಪೊಲೀಸ್ ಸಿಬ್ಬಂದಿ ಚೌಡೇಗೌಡನಿಗಗೈ ಶೋಧ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ