Kannada NewsKarnataka NewsLatest

ಶಾಸಕಿ ಅಂಜಲಿ ನಿಂಬಾಳಕರ್ ಮತ್ತೊಂದು ಅವತಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಅಂಜಲಿ ನಿಂಬಾಳಕರ್ ರಾಜಕೀಯಕ್ಕೆ ಎಂಟ್ರಿ ಕೊಟ್ಟು 2ನೇ ಪ್ರಯತ್ನದಲ್ಲಿ ಖಾನಾಪುರ ಕ್ಷೇತ್ರದ ಶಾಸಕಿಯಾದರು. ನಂತರದಲ್ಲಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಯೊಂದನ್ನು ಆರಂಭಿಸುವ ಕೆಲಸವೂ ಸಾಗುತ್ತಿದೆ. ಇದರ ಬೆನ್ನಿಗೇ ಖಾನಾಪುರದಲ್ಲಿ 2 ಎಕರೆ ಜಮೀನು ಖರೀದಿಸಿ ಅಪ್ಪಟ ಕೃಷಿಕರೂ ಆಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಂಜಲಿ ನಿಂಬಾಳಕರ್, ತಮ್ಮ 2 ಎಕರೆ ಹೊಲದಲ್ಲಿ ಹುಲುಸಾಗಿ ಬೆಳೆದಿರುವ ಬತ್ತದ ಫೋಟೋ ಹಾಕಿದ್ದಾರೆ.

ಇತ್ತೀಚೆಗೆ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಹೋಗಿದ್ದಾಗ ಹೊಲದಲ್ಲಿ ಬತ್ತದ ನಾಟಿ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದೀಗ ತಮ್ಮದೇ ಹೊಲದಲ್ಲಿ ಬತ್ತದ ಫಸಲು ಬೆಳೆದಿರುವ ಫೋಟೋ ಹಾಕಿದ್ದಾರೆ. ಸಂಪೂರ್ಣ 2 ಎಕರೆಯಲ್ಲಿ ಬತ್ತ ಬೆಳೆದಿರುವುದಾಗಿ ಪ್ರಗತಿವಾಹಿನಿಗೆ ತಿಳಿಸಿರುವ ಅವರು, ಬೆಳೆ ಚೆನ್ನಾಗಿ ಬಂದಿದೆ ಎಂದಿದ್ದಾರೆ.

ಅಂಜಲಿ ನಿಂಬಾಳಕರ್ ಅವರು ಮೂಲತಃ ಮಹಾರಾಷ್ಟ್ರದವರು. ಅವರ ಪತಿ ಹೇಮಂತ ನಿಂಬಾಳಕರ್ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕರ್ನಾಟಕ ರಾಜಕಾರಣಕ್ಕೆ ಎಂಟ್ರಿ ಕೊಡುವುದಕ್ಕಾಗಿಯೇ ಖಾನಾಪುರಕ್ಕೆ ಬಂದು ನೆಲೆಸಿರುವ ಅಂಜಲಿ ನಿಂಬಾಳಕರ್, ಈಗ ಸಂಪೂರ್ಣವಾಗಿ ಖಾನಾಪುರದ ನಿವಾಸಿಯಾಗಿದ್ದಾರೆ, ಕೃಷಿಕರೂ ಆಗಿದ್ದಾರೆ.

ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವಳು. ನನ್ನ ತಂದೆ 100 ಎಕರೆ ಹೊಲದ ಒಡೆಯ. ಮನೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ನಮ್ಮ ಹೊಲದಲ್ಲೇ ಬೆಳೆಯುತ್ತ ಬಂದವರು ನಾವು. ಹಾಗಾಗಿ ಕೃಷಿ ನನಗೆ ಹೊಸದಲ್ಲ

-ಡಾ.ಅಂಜಲಿ ನಿಂಬಾಳಕರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button