Latest

ಇಂದಿಗೂ ನನ್ನ ಜೊತೆ ಹಲವು ಶಾಸಕರಿದ್ದಾರೆ: ಸಚಿವ ಶ್ರೀರಾಮುಲು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಸಚಿವ ರಮೇಶ್ ಜಾರಕಿಹೊಳಿ ಭೇಟಿ ಹಿಂದೆ ರಾಜಕೀಯ ಉದ್ದೇಶವಿಲ್ಲ. ಏತನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜೊತೆ ತುಂಗಭದ್ರಾ ವ್ಯಾಪ್ತಿಯ ನವಿಲಿ ಏತನೀರಾವರಿ ಯೋಜನೆ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆ, ಹೊರತು ಬೇರಾವ ರಾಜಕೀಯ ಉದ್ದೇಶಕ್ಕಲ್ಲ ಎಂದರು.

ಜಾರಕಿಹೊಳಿ ಆಗಮನದಿಂದ ಶ್ರೀರಾಮುಲುಗೆ ಹಿನ್ನಡೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಹಿನ್ನಡೆಯಾಗುತ್ತೆ ಎಂದು ನಾನು ರಾಜಕಾರಣ ಮಾಡಿದವನಲ್ಲ. ಇಂದಿಗೂ ನನ್ನ ಜೊತೆ ಹಲವು ಶಾಸಕರು, ಸಮುದಾಯದವರು ಇದ್ದಾರೆ. ಅವರೆಲ್ಲರ ಬೆಂಬಲ ನನಗಿದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡುವವನು ನಾನಲ್ಲ ಎಂದು ಹೇಳಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button