ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಭಾಗ್ಯನಗರ ಸಮೀಪ ರಸ್ತೆ ಅಪಘಾತಕ್ಕೆ ವಿದ್ಯಾರ್ಥಿ ಬಲಿಯಾಗಿದ್ದಾನೆ.
18 ವರ್ಷದ ತನಯ ಹುಯಿಲಗೋಳ ಮೃತ ವಿದ್ಯಾರ್ಥಿ. ಈತ ಗೋಗಟೆ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಅಪಘಾತದಿದ ತೀವ್ರ ಗಾಯಗೊಂಡ ತನಯನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಇದೀಗ ಜಿಲ್ಲಾ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಯುತ್ತಿದೆ.
ತನಯ ಚಾರ್ಟರ್ಡ್ ಅಕೌಂಟಂಟ್ ಮನೋಜ್ ಹುಯಿಲಗೋಳ ಅವರ ಏಕೈಕ ಪುತ್ರನಾಗಿದ್ದ. ಬಸ್ಸಿನ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತ್ಯೇಕ ಸಭೆ ಸರಿಯಲ್ಲ ಎಂದ ಸಚಿವ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ