Latest

ಲವ್ ಜಿಹಾದ್ ಕಾಯ್ದೆಗೆ ಸಿದ್ದರಾಮಯ್ಯ ವಿರೋಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲವ್ ಜಿಹಾದ್ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದೊಂದು ಮೂರ್ಖತನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರು ಹಿಂದೂ-ಮುಸ್ಲೀಮ್ ಮದುವೆಯಾಗಬಾರದು ಎನ್ನುತ್ತಾರೆ. ಮುಸ್ಲೀಮರು 600 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ. ಆಗಲೇ ಎಷ್ಟೋ ಸಂಬಂಧಗಳು ಬೆಳೆದಿವೆ. ಕ್ರಾಸ್ ಆಗಿ ಎಷ್ಟೋ ಜನರು ಹುಟ್ಟಿದ್ದಾರೆ. ಕಾನೂನಿನ ಪ್ರಕಾರವೂ ಲವ್ ಜಿಹಾದ್ ಕಾಯ್ದೆಗೆ ಅವಕಾಶವಿಲ್ಲ ಎಂದರು.

ಲವ್ ಜಿಹಾದ್ ಕಾಯ್ದೆ ತರುವ ಮೂಲಕ ಬಿಜೆಪಿಯವರು ಶಾಂತಿ ಬಂಗ ಮಾಡಲು ಹೊರಟಿದ್ದಾರೆ. ಸರ್ಕಾರದ ಈ ಉದ್ದೇಶ ದುರುದ್ದೇಶದಿಂದ ಕೂಡಿದೆ ಎಂದು ಕಿಡಿಕಾರಿದರು.

Home add -Advt

Related Articles

Back to top button