ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಾಲಕರು ತನ್ನ ಕಾಲೇಜಿನ ಅಡ್ಮಿಷನ್ ಫೀ ಭರಿಸದ ಕಾರಣ ಮನನೊಂದ ವಿದ್ಯಾರ್ಥಿನಿಯೋರ್ವಳು ತನ್ನ ಮನೆಯ ಶೌಚಾಲಯದಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ಸಂಭವಿಸಿದೆ.
ಬೀಡಿ ಗ್ರಾಮದ ನಿವಾಸಿ ಮೆಹೇಕ್ ಶಕೀಲ್ ಸಂಗೊಳ್ಳಿ (19) ಮೃತ ವಿದ್ಯಾರ್ಥಿನಿ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಮೆಹೇಕ್ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಖಾಸಗಿ ಕಾಲೇಜಿನಲ್ಲಿ ಕಳೆದ ವರ್ಷ ಪ್ರಥಮ ವರ್ಷದ ಬಿಸಿಎ ಪದವಿ ಪೂರೈಸಿದ್ದಳು.
ಈಕೆಯ ಪಾಲಕರು ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಈ ವರ್ಷ ದ್ವಿತೀಯ ವರ್ಷದ ಪದವಿಗೆ ತೆರಳಲು ಉತ್ಸುಕಳಾಗಿದ್ದ ಆಕೆಯ ಈ ವರ್ಷದ ಕಾಲೇಜು ಫೀ ಭರಿಸಲು ಕೊರೊನಾ ಕಾರಣದಿಂದಾಗಿ ಪಾಲಕರು ವಿಫಲರಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಾಲಕರು ನಂದಗಡ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ