
ಪ್ರಗತಿವಾಹಿನಿ ಸುದ್ದಿ; ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಪತ್ನಿ ಗರ್ಭಿಣಿ ಅನುಷ್ಕಾ ಶರ್ಮಾಗೆ ಶೀರ್ಷಾಸನ ಮಾಡಲು ಸಹಾಯ ಮಾಡಿರುವ ಫೋಟೋ ಇದೀಗ ಭಾರಿ ವೈರಲ್ ಆಗಿದೆ.
ಮುದ್ದು ಕಂದನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದರೂ ಯೋಗಾಸನ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ವಿರಾಟ್ ತನ್ನ ಪತ್ನಿಗೆ ಶೀರ್ಷಾಸನ ಮಾಡಲು ಸಹಾಯ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ.
ಫೋಟೋ ಹಂಚಿಕೊಂಡಿರುವ ನಟಿ ಅನುಷ್ಕಾ, ಯೋಗ ನನ್ನ ಜೀವನದ ಒಂದು ಭಾಗ. ನಾನು ಗರ್ಭಿಣಿಯಾಗುವ ಮೊದಲು ಹಲವು ಯೋಗಾಸನ ಮಾಡುತ್ತಿದ್ದೆ. ಈಗಲೂ ಆ ಆಸನಗಳನ್ನು ಸಹಾಯ ಪಡೆದು ಮಾಡಲು ವೈದ್ಯರು ಹೇಳಿದ್ದಾರೆ. ನಾನು ಹಲವಾರು ವರ್ಷದಿಂದ ಶೀರ್ಷಾಸನ ಮಾಡುತ್ತಿದ್ದೇನೆ. ಇಂದು ಗೋಡೆಯ ಮತ್ತು ನನ್ನ ಪ್ರೀತಿಯ ಗಂಡನ ಸಹಾಯದಿಂದ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಗರ್ಭಿಣಿಯಾದ ಸಮಯದಲ್ಲೂ ನಾನು ಈ ರೀತಿಯ ಅಭ್ಯಾಸ ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ