Latest

ಅತ್ತೆಯನ್ನೇ ವಿವಾಹವಾದ ಭೂಪ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ವ್ಯಕ್ತಿಯೊಬ್ಬ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟು ಪತ್ನಿಯ ತಾಯಿಯನ್ನು ವಿವಾಹವಾಗಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

ಸೂರಜ್ ಮೆಹ್ತಾ ಕೆಲ ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹವಾಗಿದ್ದ. ಆದರೆ ಕೆಲ ವರ್ಷಗಳಲ್ಲಿ ಇಬ್ಬರ ನಡುವೆ ಮನಸ್ತಾಪ ಆರಂಭವಾಗಿದೆ. ಇದೇ ವೇಳೆ ಸೂರಜ್ ತನ್ನ ಪತ್ನಿಯ ತಾಯಿ ಆಶಾದೇವಿಯೊಂದಿಗೆ ಸ್ನೇಹದಿಂದ ಇರಲು ಶುರುಮಾಡಿದ್ದಾನೆ. ಕೊನೆಗೆ ಹೆಂಡತಿಯನ್ನು ನಿರ್ಲಕ್ಷ್ಯ ಮಾಡಿ ಅತ್ತೆಯೊಂದಿಗೇ ಇರಲು ಆರಂಭಸಿದ್ದಾನೆ.

Home add -Advt

ಪತಿ ಹಾಗೂ ತಾಯಿ ನಡತೆ ಕಂಡು ಬೇಸತ್ತ ಪತ್ನಿ ಸೂರಜ್ ಗೆ ವಿಚ್ಛೇಧನ ನೀಡಿದ್ದಾಳೆ. ಬಳಿಕ ಸೂರಜ್ ತನ್ನ ಅತ್ತೆ ಆಶಾದೇವಿಯ ಜೊತೆ ವಿವಾಹವಾಗಿದ್ದಾನೆ. ಕೆಲ ದಿನಗಳಲ್ಲೇ ಆ ಸಂಬಂಧವೂ ಹದಗೆಟ್ಟು ಇಬ್ಬರ ನಡುವೆ ಜಗಳ ಆರಂಭವಾಗಿದೆ. ಇದರಿಂದ ಇಬ್ಬರೂ ಮತ್ತೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಆಶಾ ದೇವಿ, ತಾನು ಅಳಿಯನನ್ನು ಮದುವೆಯಾಗಿ ತಪ್ಪು ಮಾಡಿದೆ. ಈಗ ತನಗೆ ಅರುವಾಗಿದೆ ಎಂದಿದ್ದಾಳೆ.

 

Related Articles

Back to top button