
ಪ್ರಗತಿವಾಹಿನಿ ಸುದ್ದಿ, ಶಿರಸಿ: ನಗರದ ಯಲ್ಲಾಪುರ ರಸ್ತೆಯಲ್ಲಿರುವ ಸಾಮ್ರಾಟ ವಸತಿ ಗೃಹದ ಕೊನೆಯ ಅಂತಸ್ತಿನ ಮಹಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು ಬೆಂಕಿಯನ್ನು ಹತೋಟಿಗೆ ತರುವ ಕಾರ್ಯ ಅಗ್ನಿಶಾಮಕ ದಳದಿಂದ ತುರ್ತಾಗಿ ಸಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಕೊನೆಯ ಮಹಡಿಯ ಕೋಣೆಯಲ್ಲಿದ್ದ ಇಲೆಕ್ಟ್ರಿಕಲ್ ಉಪಕರಣ ಸೇರಿದಂತೆ ಹಳೆಯ ಬಿಲ್‍ಬುಕ್ ಗಳು ಬೆಂಕಿಗೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ ಎಂದು ಪ್ರಥಮ ಮಾಹಿತಿಯಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಸಿಪಿಆಯ್ ಪ್ರದೀಪ ಬಿ ಯು ಮತ್ತು ಪಿಎಸ್‍ಆಯ್ ನಂಜಾ ನಾಯ್ಕ ತೆರಳಿ ಪರಿಶೀಲನೆ ನಡೆಸಿದ್ದಾರೆ. ಏಕಾಏಕಿ ಬೆಂಕಿ ಬಿದ್ದಿದ್ದರಿಂದ ಸಾಮ್ರಾಟ ವಸತಿ ಗ್ರಹದ ಮೊದಲ, ದ್ವಿತೀಯ ಹಾಗು ಕೊನೆಯ ಮಹಡಿಯ ಕೋಣೆಯಲ್ಲಿದ್ದ ಪ್ರವಾಸಿಗರು ಓಡೋಡಿ ಹೊರಗೆ ಬಂದರು. ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದ ಸಾಮ್ರಾಟ ಮುಂಭಾಗದ ಮುಖ್ಯರಸ್ತೆಯಲ್ಲಿ ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಯಿತು. ಹಾನಿಯ ಅಂದಾಜು ತಿಳಿದು ಬಂದಿಲ್ಲಾ. ಆದರೆ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.