ಪ್ರಗತಿವಾಹಿನಿ ಸುದ್ದಿ; ಪಣಜಿ: ನವೆಂಬರ್ 27ರಂದು ಅರಬ್ಬಿ ಸಮುದ್ರದಲ್ಲಿ ಪತನವಾಗಿದ್ದ ಭಾರತೀಯ ನೌಕಾಪಡೆಯ ಮಿಗ್-29ಕೆ ಯುದ್ಧ ವಿಮಾನ ದುರಂತದಲ್ಲಿ ನಾಪತ್ತೆಯಾಗಿದ್ದ ಪೈಲಟ್ ಮೃತದೇಹ ಇದೀಗ ಪತ್ತೆಯಾಗಿದೆ.
ಮಿಗ್ -29ಕೆ ವಿಮಾನ ದುರಂತದಲ್ಲಿ ಓರ್ವ ಪೈಲಟ್ ಬಚಾವಾಗಿದ್ದರು. ಇನ್ನೋರ್ವ ಪೈಲೆಟ್ ಲೆಫ್ಟಿನೆಂಟ್ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದಾರೆ ಎನ್ನಲಾಗಿತ್ತು. ಇದೀಗ ವಿಮಾನ ದುರಂತದ 11 ದಿನಗಳ ಬಳಿಕ ನಿಶಾಂತ್ ಶವ ಪತ್ತೆಯಾಗಿದೆ.
ಗೋವಾ ಸಮುದ್ರದ ಆಳದಲ್ಲಿ ನಿಶಾಂತ್ ಶವ ಪತ್ತೆಯಾಗಿದೆ. ಈ ಕುರಿತು ವಾಯುಪಡೆ ಮಾಹಿತಿ ನೀಡಿದ್ದು, ವಿಮಾನ ಪತನದ ಸಂದರ್ಭದಲ್ಲಿ ಓರ್ವ ಪೈಲಟ್ ದುರಂತಕ್ಕೂ ಮುನ್ನವೇ ವಿಮಾನದಿಂದ ಹಾರಿ ಬಚಾವಾಗಿದ್ದರು, ಆದರೆ ಪೈಲಟ್ ನಿಶಾಂತ್ ವಿಮಾನ ದುರಂತದಲ್ಲಿ ಕೆಳಗೆ ಬಿದ್ದಿದ್ದರು. ಅವರಿಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಗೋವಾ ಕರಾವಳಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ