Kannada NewsKarnataka NewsLatest

ಬಾಲಕಿ ನಾಪತ್ತೆ ಸೇರಿದಂತೆ ಹಲವು ಪ್ರಮುಖ ಸುದ್ದಿಗಳು

 ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯ ಎಲ್ಲಾ ರೈತರು ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಯೋಜನೆಯಲ್ಲಿ ಈಗಾಗಲೇ ಪಾಲ್ಗೊಂಡಂತೆ ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಸಹ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸುವ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಹಾಗೂ ಸಾಂಖ್ಯಿಕ ಇಲಾಖೆಯ ಜಂಟಿ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದ್ದು, ಸಂಗ್ರಹವಾದ ಬೆಳೆಗಳ ಮಾಹಿತಿಯನ್ನು ತಾಲೂಕ ಆಡಳಿತ ಪರಿಶೀಲಿಸಲಿದೆ.
ವಿಧಾನ: ರೈತರು ಸ್ಮಾರ್ಟಫೋನ್ ಉಪಯೂಗಿಸಿ ಬೆಳೆ ಸಮೀಕ್ಷೆ ಮೊಬೈಲ್ ಆಪ್‌ನ್ನು ಗೂಗಲ್‌ನ ಪ್ಲೇ ಸ್ಟೋರ್  ನಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ರೈತರ ಪರವಾಗಿ ಅವರ ಕುಟುಂಬದ ಸದಸ್ಯರು, ಸಂಬಂಧಿಕರು ಅಥವಾ ಮೊಬೈಲ್ ಮಾಹಿತಿ ಹೊಂದಿರುವ ಕಂದಾಯ/ಕೃಷಿ ಇಲಾಖೆ ವತಿಯಿಂದ ನಿಯೋಜನೆಗೊಂಡ ತಮ್ಮದೆ ಗ್ರಾಮದ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರುವ ಯುವಕರ (ಖಾಸಗಿ ನಿವಾಸಿ/ಪಿ.ಆರ್) ಸಹಾಯದೂಂದಿಗೆ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಔಖಿP ಪಡೆಯುವ ಮೂಲಕ ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ಅಪಲೋಡ ಮಾಡಬಹುದಾಗಿದೆ. ರೈತರು ನಿಗದಿತ ಸಮಯದೊಳಗೆ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಅಪ್ಲೋಡ್ ಮಾಡದೇ ಇದ್ದ ಪಕ್ಷದಲ್ಲಿ ಪ್ರತಿ ಗ್ರಾಮಕ್ಕೆ ನಿಯೋಜನೆಗೊಂಡ ಬೆಳೆ ಸಮೀಕ್ಷಕರು (ಖಾಸಗಿ ನಿವಾಸಿ/ಪಿ.ಆರ್) ತಮ್ಮ ಹೊಲಗಳಿಗೆ ಭೇಟಿ ನೀಡಿ ಮೊಬೈಲ್ ಆಪ್ ಬಳಸಿ ಬೆಳೆ ಮಾಹಿತಿ ಸಂಗ್ರಹಿಸಿ ಅಪಲೋಡ್ ಮಾಡುತ್ತಾರೆ.

ಉದ್ದೇಶ: ಬೆಳೆ ಸಮೀಕ್ಷೆ ಯೋಜನೆಯಡಿ ಸಂಗ್ರಹವಾಗುವ ಮಾಹಿತಿ
ಸಾಂಖ್ಯಿಕ ಇಲಾಖೆಯ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆ ವಿಸ್ತೀರ್ಣ ಏಣಿಕಾ ಕಾರ್ಯದಲ್ಲಿ ಬಳಸಲು ಅನುಮತಿಸಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ಓಆಖಈ/Sಆಖಈ ಅಡಿಯಲ್ಲಿ ಸಹಾಯಧನ ನೀಡಲು ವರದಿ ತಯಾರಿಸಲಾಗುವದು. ಹಾಗೂ ಬೆಳೆ ವಿಮೆ ಯೋಜನೆಯಡಿ ರೈತರ ತಾಲೂಕುವಾರು ಬೆಳೆ ಪರಿಶೀಲಿಸಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗುವದು, ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ. ಅಲ್ಲದೆ ಆರ್.ಟಿ.ಸಿ.ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಜಿಲ್ಲ್ಲೆಯ ಎಲ್ಲಾ ರೈತರು ರೈತರು ತಮ್ಮ ಜಮೀನುಗಳಲ್ಲಿ (ಹಿಸ್ಸಾವಾರು) ತಾವು ಬೆಳೆದ ಹಿಂಗಾರು ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್‌ನಲ್ಲಿ ನಿಗದಿತ ಸಮಯದೊಳಗೆ ಅಪ್ಲೋಡ್ ಮಾಡಿ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಯೋಜನೆಯಲ್ಲಿ ಭಾಗವಹಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವ ಸೌರಭ ೨೦೨೦-೨೧

ಬೆಳಗಾವಿ-  ಇಂದಿನ ಯುವಜನರು ಶಿಕ್ಷಣ ಕಲಿಯುವುದರ ಜೊತೆಗೆ ನಮ್ಮ ನಾಡಿನ ವಿವಿಧ ಕಲೆಗಳಲ್ಲಿಯೂ ಆಸಕ್ತಿ ವಹಿಸಿ ನಮ್ಮ ಕಲೆಯನ್ನ ಕರಗತ ಮಾಡಿಕೊಂಡು ನಮ್ಮ ಕಲಾ ಪರಂಪರೆ ಮುಂದುವರೆಸಬೇಕೆಂದು ಶ್ರೀ ಮ.ನಿ.ಪ್ರ ಗುರುಸಿದ್ಧೇಶ್ವರ ಮಹಾಸ್ವಾಮಿಗಳು ಕಾರಿಮಠ, ಹತ್ತರಗಿ ಯುವಜನರಿಗೆ ಕರೆ ನೀಡಿದರು.
ಅವರು ಕಳೆದ ದಿನಾಂಕ ೧೫ ಡಿಸೆಂಬರ ೨೦೨೦ ರಂದು ಸಂಕೇಶ್ವರ ನೇಸರಿ ಗಾರ್ಡನ್ ಸಭಾ ಭವನದಲ್ಲಿ ಆಯೋಜಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಳಗಾವಿ, ಶ್ರೀ ರಾಮಕೃಷ್ಣ ಚಂದಗರಿ ಕಲಾ ಪ್ರತಿಷ್ಠಾನ, ಸಂಕೇಶ್ವರ ಇವರ ಸಹಯೋಗದಲ್ಲಿ ಆಯೋಜಿಸಿದ ಯುವ ಸೌರಭ ೨೦೨೦-೨೧ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ನಮ್ಮ ನಾಡಿನ ಜನಪದ ಕಲೆ ಜನಪದ ಸಂಗೀತ ಶ್ರೀಮಂತ ಕಲೆಗಳಾಗಿದ್ದು ಕಲಾ ಪ್ರದರ್ಶನದಿಂದ ಕಲಾವಿದನಿಗೂ ಹಾಗೂ ನೋಡುಗರಿಗು ಸಂತೋಷವನ್ನುಂಟು ಮಾಡುತ್ತದೆ ಎಂದರು.
ಸಂಕೇಶ್ವರ ಪುರಸಭೆಯ ಮುಖ್ಯಾಧಿಕಾರಿಗಳಾದ ಜಗದೀಶ ಈಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಹಮೀದಾಬೇಗಂ ದೇಸಾಯಿ ಇವರು ಮಾತನಾಡಿ ನಮ್ಮ ಕನ್ನಡ ಭಾಷೆ ಉಳಿಸುವುದು ಜೊತೆಗೆ ನಮ್ಮ ಸಾಂಸ್ಕೃತಿಕ ಕಲಾ ಪರಂಪರೆ ಉಳಿಸುವುದು ಅಷ್ಟೇ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಯುವ ಸೌರಭ ಕಾರ್ಯಕ್ರಮ ಗಡಿನಾಡು ಸಂಕೇಶ್ವರದಲ್ಲಿ ಆಯೋಜಿಸಿದ್ದು ಸೂಕ್ತವಾಗಿದೆ ಎಂದು ಇಲಾಖೆಯನ್ನು ಅಭಿನಂದಿಸಿದರು.
ವೇದಿಕೆಯ ಮೇಲೆ ಹಿರಿಯ ಸಾಹಿತಿಗಳು ಎಲ್.ವಿ.ಪಾಟೀಲ, ಕನ್ನಡಪರ ಕಾರ್ಯಕರ್ತರಾದ ಕಿರಣ ನೇಸರಿ, ಸಂಗೀತ ಕಲಾವಿದರಾದ ರೋಹಿಣಿ ವಿನಾಯಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಯುವ ಕಲಾವಿದರಾದ ಶ್ರೀ ಪ್ರಣವ ಪಿ. ವಿನಾಯಕ, ಆರತಿ ಮಾದರ, ಪುಂಡಲೀಕ ದೊಡ್ಡಮನಿ, ಮಹಾಂತೇಶ ಕಂಬಾರ, ಚೈತ್ರಾ ಯಾಪಲಪರವಿ ಇವರನ್ನು ಶಾಲು ಹೋದಿಸಿ, ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಾಯಕ ನಿರ್ದೇಶಕರಾದ ವಿದ್ಯಾವತಿ ಹೆಚ್. ಭಜಂತ್ರಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿಭಾವಂತ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಸೌರಭ ಕಾರ್ಯಕ್ರಮ ಇಲಾಖೆಯಿಂದ ನಡೆಸುತ್ತಿದ್ದು ಯುವಕರನ್ನು ಗುರುತಿಸಲು ಇದೊಂದು ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ನಂತರ ನಡೆದ ಯುವ ಸೌರಭ ಸಾಂಸ್ಕೃತೀಕ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ- ಪ್ರಣವ ಪಿ. ವಿನಾಯಕ ತಂಡ, ಬೆಳಗಾವಿ, ವಚನ ಸಂಗೀತ- ಮಹಾಲಕ್ಷ್ಮೀ ದೊಡ್ಡಮನಿ ಹಾಗೂ ತಂಡ, ಶಿವಭಜನಾ ಪದ- ಮಹಾಂತೇಶ ಕಂಬಾರ, ತಂಡ, ಪಾಮಲದಿನ್ನಿ, ಕೋಲಾಟ ನೃತ್ಯ- ಗುರುಪ್ರಸಾದ ಕಲಾಚಂದ್ರ ಹಾಗೂ ತಂಡ ನಿಪ್ಪಾಣಿ, ತತ್ವಪದ- ಜ್ಯೋತಿ ಮಠಪತಿ ಹಾಗೂ ತಂಡ ಹೆಬ್ಬಾಳ, ಸಮೂಹ ಗೀತೆ- ಸ್ವರಸುರಭಿ ಸಂಗೀತ ಮಹಾವಿದ್ಯಾಲಯ, ಸಂಕೇಶ್ವರ, ಸಮೂಹ ನೃತ್ಯ- ಚಿನ್ನು ವಸ್ತ್ರದ ತಂಡ, ಹುಬ್ಬಳಿ, ಡೋಳ್ಳುಕುಣಿತ- ಅಕ್ಕiಹಾದೇವಿ ಮಾದರ ತಂಡ ಜೋಕಾನಟ್ಟಿ, ಸಣ್ಣಾಟ ಪ್ರದರ್ಶನ- ಶ್ರಿ ಜಡಿಸಿದ್ದೇಶ್ವರ ಸಣ್ಣಾಟಕ ಕಲಾ ತಂಡ, ಬಾಗೇವಾಡಿ ಕಲಾ ತಂಡದವರು ವರ್ಣ ರಂಜಿತ ಕಲಾಪ್ರದರ್ಶನ ನೀಡಿ ಕಲಾಪ್ರೇಕ್ಷಕರಿಗೆ ಕಲಾ ರಸದೌತನ ನೀಡಿದರು. ಭರತ ಕಲಾಚಂದ್ರ, ಸುಜಾತಾ ಮಗದುಮ್ಮ ಕಾರ್ಯಕ್ರಮ ನಿರೂಪಿಸಿರು. ಸುರೇಶ ಚಂದಗರಿ ಸ್ವಾಗತಿಸಿದರು. ಅಕ್ಬರ ಸನದಿ ವಂದಿಸಿದರು.

 

ಅಕ್ರಮ ಮದ್ಯ ವಶ

ಡಿಸೆಂಬರ್ ೧೬ ಕಣಕುಂಬಿ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಬರುವ ಕಣಕುಂಬಿ ರಸ್ತೆಯಲ್ಲಿ ಬೇರೆ ರಾಜ್ಯಗಳಿಂದ ಬರುವಂತ ವಾಹನಗಳ ತಪಾಸಣೆಯನ್ನು ಮಾಡುವಾಗ ಗೂಡ್ಸ್ ಗಾಡಿಯಲ್ಲಿ ೧೦೮೭.೨೦೦ ಲೀ. ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಮದ್ಯವನ್ನು ಅಬಕಾರಿ ನಿರೀಕ್ಷಕರು, ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ ರಾಜ್ಯದಲ್ಲಿ ಮಾರಾಟವಾಗುತ್ತಿದ್ದಂತ ೧೨೫ ನಮೂನೆಯ ಮದ್ಯವನ್ನು ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ಕೆರಿಯರ್‌ನ್ನ ಈ ದಾಳಿಯಲ್ಲಿ ಜಪ್ತು ಮಾಡಿಕೊಂಡಿದ್ದು ರಿತೇಶಬಾಯಿ ಪಾಟೀಲ (೩೭) ಆರೊಪಿಯನ್ನು ಬಂಧಿಸಲಾಗಿದ್ದು, ಒಟ್ಟು ೮,೫೯,೪೫೬ ರೂಗಳ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ದಾಳಿಯಲ್ಲಿ ಅಬಕಾರಿ ಜಂಟಿ ಆಯುಕ್ತರಾದ ವೈ. ಮಂಜುನಾಥ ಅಬಕಾರಿ ಉಪ ಆಯುಕ್ತರಾದ ಜಯರಾಮೇಗೌಡ ಹಾಗೂ ಅಬಕಾರಿ ಉಪ ಅಧಿಕ್ಷಕರಾದ ಚನಗೌಡ ಎಸ್.ಪಾಟೀಲ ಹಾಗೂ ಎಸ್.ಎಮ್.ಪೂಜಾರಿ, ಬಿ.ಎ.ಪಾಂಗೇರಿ, ಸುನೀಲ ಪಾಟಿಲ, ಎಂ.ಎಫ್.ಕಟಗೆನ್ನವರ ಹಾಗೂ ಅಬಕಾರಿ ಸಿಬ್ಬಂದಿಗಳು ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

  ಜಿಲ್ಲೆಯಲ್ಲಿ ಯುವ ಮತದಾರರ ನೋಂದಣಿ ಹೆಚ್ಚಿಸುವುದರ ಜತೆಗೆ ಲೋಪರಹಿತ ಮತದಾರರ ಪಟ್ಟಿ ಸಿದ್ಧಪಡಿಸಲು ಮತದಾರರ ಪಟ್ಟಿಯ ಪರಿ?ರಣೆ ಕಾರ್ಯವನ್ನು ಮಾರ್ಗಸೂಚಿ ಪ್ರಕಾರ ಸಮರ್ಪಕವಾಗಿ ನಡೆಸಬೇಕು ಎಂದು ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕ(ರೋಲ್ ಅಬ್ಸರ್ವರ್)ರಾದ ಎಲ್.ಕೆ.ಅತೀಕ್ ಸೂಚನೆ ನೀಡಿದರು.
ಜಿಲ್ಲೆಯ ಮತದಾರರ ಪಟ್ಟಿಯ ವಿಶೇ? ಪರಿ?ರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಡಿ.೧೬) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಶೇ.೭೧ ರ? ಜನರ ಹೆಸರು ಮತದಾರರ ಪಟ್ಟಿಯಲ್ಲಿದೆ. ಆದರೆ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಸದ್ಯಕ್ಕೆ ಶೇ.೬೫ ರ? ಜನರ ಹೆಸರು ನೋಂದಣಿ ಇರುವುದರಿಂದ ಇದನ್ನು ಇನ್ನ? ಹೆಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅತೀಕ್ ನಿರ್ದೇಶನ ನೀಡಿದರು.
ಇದೇ ರೀತಿ ಲಿಂಗಾನುಪಾತ ದ ಪ್ರಕಾರ ಮತದಾರರ ಸಂಖ್ಯೆ ಇರುವಂತೆ ನೋಡಿಕೊಳ್ಳಬೇಕು. ಮಹಿಳೆಯರು, ಯುವಜನರು ಮತ್ತು ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಆಕ್ಷೇಪಣೆಗಳ ವಿಲೇವಾರಿಗೆ ನಿರ್ದೇಶನ:
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕರಿಸಲಾಗುವ ಆಕ್ಷೇಪಣೆಗಳನ್ನು ನಿಯಮಾವಳಿ ಪ್ರಕಾರ ವಿಲೇವಾರಿ ಮಾಡಬೇಕು.ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಮಾರ್ಗಸೂಚಿ ಪ್ರಕಾರ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
೧-೧-೨೦೨೧ ಕ್ಕೆ ಅನ್ವಯಿಸುವಂತೆ ಮತದಾರರ ಪಟ್ಟಿಯ ವಿಶೇ? ಪರಿ?ರಣೆ ನಡೆಯುತ್ತಿದೆ. ಮತ ಪಟ್ಟಿಯ ಲೋಪದೋ?ಗಳನ್ನು ಸರಿಪಡಿಸಲು ಅವಕಾಶಗಳನ್ನು ಒದಗಿಸಲಾಗಿದೆ. ತಿದ್ದುಪಡಿ, ಸೇರ್ಪಡೆ, ಡಿಲೀಟ್ ಗೆ ಅವಕಾಶ ನೀಡಲಾಗಿದೆ.
ಮತಪಟ್ಟಿಗಳು ಲೋಪರಹಿತವಾಗಿರಬೇಕು. ಮತದಾರರ ಪಟ್ಟಿಯಿಂದ ಹೆಸರು ಸೇರ್ಪಡೆ ಅಥವಾ ಹೆಸರು ತೆಗೆದುಹಾಕುವ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಬೇಕು.
ವಿಕಲಚೇತನರ ಹೆಸರುಗಳು ಯಾವುದೇ ಕಾರಣಕ್ಕೂ ಪಟ್ಟಿಯಿಂದ ಬಿಟ್ಟು ಹೋಗಬಾರದು.
ಮತದಾರರ ಪಟ್ಟಿಯ ಪರಿ?ರಣೆ ಗೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಲೋಪದೋ? ಅಥವಾ ಕೊರತೆ ಕಂಡುಬಂದರೆ ಸರಿಪಡಿಸಲು ಅವಕಾಶವಿದೆ ಎಂದು ಎಲ್.ಕೆ.ಅತೀಕ್ ಹೇಳಿದರು.
ಜಿಲ್ಲೆಯಲ್ಲಿ ಇರುವ ೪೪೩೪ ಮತಗಟ್ಟೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿದ್ದು, ಪರಿ?ರಣೆ ಕೆಲಸ ಸರಿಯಾಗಿ ನಿರ್ವಹಿಸಬೇಕು. ಉನ್ನತ ಮಟ್ಟದ ಅಧಿಕಾರಿಗಳು ಇದರ ಮೇಲೆ ನಿಗಾ ವಹಿಸಬೇಕು ಎಂದು ಅತೀಕ್ ನಿರ್ದೇಶನ ನೀಡಿದರು.
ಯುವ ಮತದಾರರ ನೋಂದಣಿಗೆ ಆದ್ಯತೆ:
ಹದಿನೆಂಟು ವ?ಗಳನ್ನು ಪೂರ್ಣಗೊಳಿಸಿದ ಯುವಕರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು. ಇದಕ್ಕೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಯುವ ಸಮುದಾಯ ಹೆಸರು ನೋಂದಣಿಗೆ ಮುಂದಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅತೀಕ್ ಸಲಹೆ ನೀಡಿದರು.
ಬೂತ್ ಲೆವೆಲ್ ಏಜೆಂಟ್ ನೇಮಕದ ಪಟ್ಟಿಯನ್ನು ರಾಜಕೀಯ ಪಕ್ಷಗಳು ಸಕಾಲದಲ್ಲಿ ಸಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.
ಬಿ.ಎಲ್.ಓ.ಗಳಿಗೆ ಅಗತ್ಯವಿರುವ ಕಿಟ್ ನೀಡಿರುವ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರಲ್ಲದೇ ಮತದಾರರ ಕರಡು ಪಟ್ಟಿ ರಾಜಕೀಯ ಪಕ್ಷಗಳಿಗೆ ತಲುಪಿಸಿರುವುದನ್ನು ಸಭೆಯಲ್ಲಿ ಖಚಿತಪಡಿಸಿಕೊಂಡರು.
ಮತದಾರರ ಹೆಸರು ಸೇರ್ಪಡೆ ಸೇರಿದಂತೆ ಲಭ್ಯವಿರುವ ವಿವಿಧ ನಮೂನೆಗಳಾದ ೬, ೬ಎ, ೭, ೮ ಹಾಗೂ ೮ಎ ಇವುಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಮನೆ ಮನೆ ಭೇಟಿಗೆ ಸೂಚನೆ:
ಬಿ.ಎಲ್.ಓ.ಗಳು ಕಡ್ಡಾಯವಾಗಿ ಮನೆ ಮನೆಗೆ ಭೇಟಿ ನೀಡಬೇಕು. ಇದರ ಬಗ್ಗೆ ಸಂಬಂಧಿಸಿದವರು ಮೇಲ್ವಿಚಾರಣೆ ನಡೆಸಬೇಕು ಎಂದು ಅತೀಕ್ ಸೂಚನೆ ನೀಡಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕರಿಸಲಾದ ದೂರುಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು. ಕಂಟ್ರೋಲ್ ರೂಮ್ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಖುದ್ದಾಗಿ ಭೇಟಿ ನೀಡಿ ಪರಿಶೀಲನೆ:
ವಿಶೇಷ ಪರಿಷ್ಕರಣೆ ಬಳಿಕವೂ ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.
ಕೆಲವು ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆದಾಗ್ಯೂ ಎಲ್ಲಿಯಾದರೂ ಸಮಸ್ಯೆ ಕಂಡುಬಂದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಮತದಾರರ ಪಟ್ಟಿ ಪರಿ?ರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಕೇಂದ್ರ(ಕಂಟ್ರೋಲ್ ರೂಮ್) ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಎಚ್.ವಿ., ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳಾದ ಯುಕೇಶ್ ಕುಮಾರ್, ಮಹಾನಗರ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್., ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.

ಬಾಲಕಿ ನಾಪತ್ತೆ

ಅಂಬೇಡ್ಕರ್ ನಗರ ಅನುಗೋಳ ನಿವಾಸಿಯಾದ ಲಕ್ಷ್ಮೀ ವಯಸ್ಸು (೧೫ ವರ್ಷ) ಅವರು ಡಿಸೆಂಬರ್ ೧೨ ರಂದು ಸಾಯಂಕಾಲ ೦೫ ಗಂಟೆಗೆ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀ ಸತೀಶ ಭಜಂತ್ರಿ ವಯಸ್ಸು (೧೫) ಹೊಳು ಮುಖ, ಸಾದಾಗಪ್ಪು ಮೈಬಣ್ಣ, ಉದ್ದ ಮೂಗು, ಎತ್ತರವಾದ ಹಣೆ ಮತ್ತು ನೀಲಿ ಬಣ್ಣದ ಗಾಗರಾ ಧರಿಸುತ್ತಾರೆ. ೪.೮ ಅಡಿ ಎತ್ತರ ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ತಾಯಿ ಹಾಗೂ ಮಗುವಿನ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಟಿಳಕವಾಡಿ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆ ೦೮೩೧-೨೪೦೫೨೩೬ ನ್ನು ಸಂಪರ್ಕಿಸಲು ಠಾಣೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button