ಆರ್.ಟಿ.ಒ ಕಚೇರಿ ಎಫ್ಡಿಎ ಮಂಜುನಾಥ್, ಏಜೆಂಟ್ ಅಜೀಮ್ ಎಸಿಬಿ ಬಲೆಗೆ

 ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ: ನಗರದ ಆರ್​ಟಿಒ‌(ಪ್ರಾದೇಶಿಕ ಸಾರಿಗೆ ಇಲಾಖೆ )ಕಚೇರಿಯ ಎಫ್‌ಡಿಎ  ಮಂಜುನಾಥ್ ಮತ್ತು ಏಜೆಂಟ್​  ಅಜೀಮ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೃತ ಪಾರ್ಥ ಸಾರಥಿ ಎಂಬುವರ ಕಾರನ್ನು ಅವರ ಪತ್ನಿ‌ ಹರಿಪ್ರಿಯ ಅವರ ಹೆಸರಿಗೆ ಬದಲಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಮಂಜುನಾಥ 1500 ರೂ. ಕೊಡುವಂತೆ ಏಜೆಂಟ್ ಅಜೀಮ್ ಮೂಲಕ‌ ಕೇಳಿದ್ದರಂತೆ. ಈ ಬಗ್ಗೆ  ಪಾರ್ಥಸಾರಥಿ ಅವರ ಪರಿಚಯದ ವ್ಯಕ್ತಿ  ಮಹಮ್ಮದ್ ಫರ್ಕಾನ್ ಎಸಿಬಿಗೆ ದೂರು‌ ನೀಡಿದ್ದರು. ಗುರುವಾರ 700 ರೂ. ಕೊಡುವಾಗ ಎಸಿಬಿ ಅಧಿಕಾರಿಗಳು ಹಣ ಸಮೇತ ಮಂಜುನಾಥ ಮತ್ತು ಅಜೀಮ್​ನನ್ನು ಬಂಧಿಸಲಾಗಿದೆ ಎಂದು ಎಸಿಬಿ‌ ಡಿವೈಎಸ್​ಪಿ ಚಂದ್ರಕಾಂತ ಪೂಜಾರಿ ತಿಳಿಸಿದ್ದಾರೆ.
ಹಿನ್ನೆಲೆ: ಕೆಲಸ ಮಾಡಿಕೊಡುವುದರಲ್ಲಿ ತಡ ಮಾಡಲಾಗಿದೆ. ಆ ಕೆಲಸ ಮಾಡಿಕೊಡಲು ಮಂಜುನಾಥ್​ 1500 ರೂ. ಹಣದ ಬೇಡಿಕೆ ಇಟ್ಟಿದ್ದರು. ಆದರೆ 700 ರೂ. ಪಡೆದುಕೊಂಡು ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಾಲೀಕರ ವಾಹನ ಮರಣದ ನಂತರ ವರ್ಗಾವಣೆ ಪ್ರಮಾಣಪತ್ರ, ನಕಲಿ ನೋಂದಣಿ ಪ್ರಮಾಣಪತ್ರ, ಲೋನ್ ರದ್ದು ಮಾಡಿಕೊಡಲು ಎಫ್‌ಡಿಎ ಮಂಜುನಾಥ ಮತ್ತು ಏಜೆಂಟ್ ಮಹಮ್ಮದ್ ಅಜಿಮ್ ಈ ಇಬ್ಬರು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಮಹಮ್ಮದ್ ಫರ್ಕಾನ್ ಎಸಿಬಿಗೆ ದೂರು ನೀಡಿದ್ದರು. ಸದ್ಯ ಎಫ್​ಡಿಎ ಮಂಜುನಾಥ್​ ಹಾಗೂ ಏಜೆಂಟ್ ಮಹಮ್ಮದ್ ಅಜೀಮ್​​ನನ್ನು ಬಂಧಿಸಿರುವ ಎಸಿಬಿಗೆ ಅಧಿಕಾರಗಳು, ವಿಚಾರಣೆ ನಡೆಸಿ ನ್ಯಾಯಾಲಕಕ್ಕೆ ಹಾಜರುಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button