ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದ ವಿವಿಧೆಡೆ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ. ಎಲ್ಲೆಡೆ ಪೊಲೀಸ್ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಶಾಂತ ಮತ್ತು ಸುರಕ್ಷಿತ ಮತದಾನ ನಡೆಯುತ್ತಿದೆ.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಮತ್ತು ಕಂಗ್ರಾಳಿ ಕೆಎಚ್ ಗ್ರಾಮದಲ್ಲಿ ಜನ ಗುಂಪುಗೂಡಲು ಪ್ರಯತ್ನಿಸಿದ್ದರಿಂದ ಲಘುಲಾಠಿ ಪ್ರಹಾರ ನಡೆಸಲಾಗಿದೆ. ದೇಸೂರು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಸಿಬ್ಬಂದಿ ಪಿಸ್ತೂಲ್ ಇಟ್ಟುಕೊಂಡು ಬಂದಿದ್ದರಿಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಧಿಕಾರಿಯನ್ನು ಬದಲಿಸಲಾಗಿದೆ.
ಅಥಣಿ ತಾಲೂಕಿನ ಹಲ್ಯಾಳ ಸೇರಿದಂತೆ ಕೆಲವೆಡೆ ವಾಮಾಚಾರ ನಡೆಸಿರುವ ಕುರುಹುಗಳು ಕಂಡುಬಂದಿವೆ. ಬೆಳಗ್ಗೆ ನಿಧಾನ ಗತಿಯಿಂದ ಮತಚಲಾವಣೆ ಕಂಡುಬರುತ್ತಿದ್ದು, ಬಿಸಿಲೇರಿದಂತೆ ಬಿರುಸು ಪಡೆಯಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ