ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಮಾಹಾಮಾರಿ ಸಂದರ್ಭದಲ್ಲಿಯೇ ದೇಶದಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ ಬೇಡಿಕೆ ಹೆಚ್ಚಳವಾಗಿದೆ. ಅದರಲ್ಲೂ ರಾತ್ರಿಗಿಂತ ಹಗಲಲ್ಲಿ ಹೆಚ್ಚು ಜನರು ಕಾಂಡೋಮ್ ಖರೀದಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಗರ್ಭ ನಿರೋಧಕ ಮಾತ್ರೆ, ಚಿಕನ್ ಬಿರಿಯಾನಿ, ಮುಂಬೈನಲ್ಲಿ ದಾಲ್ ಖಿಚ್ಡಿ, ಚೆನ್ನೈನಲ್ಲಿ ಇಡ್ಲಿ, ದೆಹಲಿಯಲ್ಲಿ ಕಾಫಿ, ಪುಣೆಯಲ್ಲಿ ಮ್ಯಾಗಿ, ಗುರುಗ್ರಾಮದಲ್ಲಿ ಆಲೂ ಟಿಕ್ಕಿ ಬರ್ಗರ್ ಹೆಚ್ಚು ಖರೀದಿಯಾಗುತ್ತಿದೆ.
ದೇಶದೆಲ್ಲೆಡೆ ಕಾಂಡೋಮ್ ಖರೀದಿಸುವವರ ಪ್ರಮಾಣ ಮೂರುಪಟ್ಟು ಹೆಚ್ಚಾಗಿದೆ. ಹೈದರಾಬಾದ್ ನಲ್ಲಿ ಕಾಂಡೋಮ್ ಖರೀದಿಸುವವರ ಪ್ರಮಾಣ 6 ಪಟ್ತು ಹೆಚ್ಚಿದ್ದರೆ ಚೆನ್ನೈ 5, ಜೈಪುರ 4, ಮುಂಬೈ ಮತ್ತು ಬೆಂಗಳೂರು ತಲಾ 3 ಪಟ್ಟು ಏರಿಕೆಯಾಗಿದೆ.
ಬೆಂಗಳೂರಿನಲ್ಲಿ 22 ಪಟ್ಟು ಹೆಚ್ಚು ಜನರು ರೋಲಿಂಗ್ ಪೇಪರ್ ಗಳನ್ನು ಖರೀದಿಸುತ್ತಿದ್ದಾರೆ. ತುರ್ತು ಗರ್ಭನಿರೋಧಕ ಮಾತ್ರೆಗಳ ಖರೀದಿಯಲ್ಲಿ ಬೆಂಗಳೂರು, ಪುಣೆ, ಹೈದರಾಬಾದ್ ಹಾಗೂ ಗುರುಗ್ರಾಮ ಮುಂದಿದೆ ಎಂದು ಕನ್ಸೈರ್ಜ್ ಸರ್ವೀಸಸ್ ಅಪ್ಲಿಕೇಶನ್ ಡಂಜೊ ನಡೆಸಿದ ಅಧ್ಯಯನದಲ್ಲಿ ಈ ಅಂಶಗಳು ಬಯಲಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ