Kannada NewsKarnataka NewsLatest

ಬಸವರಾಜ ಕಟ್ಟೀಮನಿ ಪತ್ರಕರ್ತ ಪ್ರಶಸ್ತಿ ಪ್ರದಾನ ಹಾಗೂ ಯುವ ಸಾಹಿತ್ಯ ಪುರಸ್ಕಾರ

ಸಾಹಿತ್ಯ ಲೋಕದ ದೈತ್ಯ ಪ್ರತಿಭೆ ಡಾ. ಕಾಟ್ಕರ್: ಸಿ.ಯು.ಬೆಳ್ಳಕ್ಕಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಡಾ.ಸರಜೂ ಕಾಟ್ಕರ್ ಮಾಧ್ಯಮ ಹಾಗೂ ಸಾಹಿತ್ಯ ಲೋಕದ ದೈತ್ಯ ಪ್ರತಿಭೆ ಎಂದು ಆಕಾಶವಾಣಿ ಕೇಂದ್ರದ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ವರ್ಣಿಸಿದರು.

ಬಸವರಾಜ ಕಟ್ಟೀಮನಿ ಸಭಾಗೃಹದಲ್ಲಿ ಭಾನುವಾರ ೨೭ ರಂದು ನಡೆದ ಬಸವರಾಜ ಕಟ್ಟೀಮನಿ ಪ್ರಶಸ್ತಿ ಪ್ರದಾನ ಹಾಗೂ ಯುವ ಸಾಹಿತ್ಯ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ. ಸರಜೂ ಕಾಟ್ಕರ್ ಪ್ರತಿಯೊಂದು ಕ್ಷೇತ್ರದ ಬಗ್ಗೆ ಆಳವಾದ ಅಧ್ಯಯನ ಹೊಂದಿರುವ ಅಪರೂಪದ ವ್ಯಕ್ತಿ. ಸರಳ-ನೇರವಾದ ಶೈಲಿಯ ಬರವಣಿಗೆ ಅವರದ್ದಾಗಿದೆ ಎಂದರು.
ಅಕ್ಷರವನ್ನು ಆಯುಧವಾಗಿ ಮಾಡಿಕೊಳ್ಳಬೇಕು. ಹಾಗೆ ಮಾಡಿದರೆ ಸಾಮಾಜಿಕ ಬದುಕಿನಲ್ಲಿ ನೊಂದವರ ನೋವಿಗೆ ನಾವು ನೆರವಾಗಲು ಸಾಧ್ಯ. ಆದರೆ, ಇವತ್ತಿನ ಇಂಗ್ಲೀಷ್ ವ್ಯಾಮೋಹದ ಶಿಕ್ಷಣ ಕ್ರಮದಲ್ಲಿ ನಮಗೆ ಒಂದು ವಾಕ್ಯವನ್ನೂ ಬರೆಯಲು ಸಾಧ್ಯವಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಬರೆಯಲು ಉತ್ಸಾಹ ಹಾಗೂ ಆಸಕ್ತಿ ಬೇಕು ಎಂದರು.
ಮಾಧ್ಯಮ ಕ್ಷೇತ್ರ ಇಂದು ಅಗಾಧವಾಗಿ ಬೆಳೆದಿದೆ. ಅದರಿಂದ ಹೊರ ಬರಲು ನಮ್ಮಿಂದ ಸಾಧ್ಯವಿಲ್ಲ. ಜಗತ್ತಿನಲ್ಲಿ ಲಕ್ಷಾಂತರ ಮಾಧ್ಯಮಗಳು ವಿವಿಧ ಜಾಲಗಳಲ್ಲಿ ವ್ಯಾಪಿಸಿವೆ ಎಂದು ಹೇಳಿದರು.
ಕಟೀಮನಿ ಪ್ರತಿ?ನ ಉತ್ತಮ ಪ್ರತಿ?ನವಾಗಿದೆ. ಕನ್ನಡ ಪುಸ್ತಕ ಲೋಕ ಬೆಳಗುವ ದಿಸೆಯಲ್ಲಿ ಈ ಪ್ರತಿ?ನ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಲಿಂಗರಾಜ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಸವರಾಜ ಜಗಜಂಪಿ ಮಾತನಾಡಿ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡುವುದು ಸುಲಭದ ಕೆಲಸ ಅಲ್ಲ. ಕಾವ್ಯ, ಕಾದಂಬರಿ, ಕಥೆ, ವಿಮರ್ಶೆ, ವೈಚಾರಿಕ, ನಾಟಕ, ಜೀವನಚರಿತ್ರೆ ಈ ಎಲ್ಲ ಪ್ರಕಾರಗಳಲ್ಲಿ ಅದ್ಭುತವಾದ ಕೃತಿಗಳನ್ನು ಕೊಟ್ಟ ಕೀರ್ತಿ ಸರಜೂ ಕಾಟ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಡಾ.ಸರಜೂ ಕಾಟ್ಕರ್ ಮಾತನಾಡಿ, ಬಾಲ್ಯದಲ್ಲೇ ಕಟ್ಟಿಮನಿ, ನಿರಂಜನ ಮುಂತಾದ ಹೆಸರಾಂತ ಕಾದಂಬರಿಕಾರರ ಕಾದಂಬರಿ, ಸಾಹಿತ್ಯ ಓದಿ ಪ್ರಭಾವಿತಗೊಂಡೆ. ಕಟ್ಟಿಮನಿ ಅವರು ನನಗೆ ಅದರ್ಶವಾಗಿದ್ದರು. ಅವರನ್ನು ಟೀಕಿಸಿಯೂ ಬರೆದಿದ್ದೆ ಎಂದರು.

ಪತ್ರಕರ್ತ, ಸಾಹಿತಿ ಡಾ.ಸರಜೂ ಕಾಟ್ಕರ್ ಅವರಿಗೆ ಬಸವರಾಜ ಕಟ್ಟೀಮನಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಪಿಲ್ ಹುಮನಾಬಾದೆ ಹಾಗೂ ಶಶಿ ತರೀಕೆರೆ ಅವರಿಗೆ ಯುವ ಸಾಹಿತ್ಯ ಪುರಸ್ಕಾರ ಪ್ರದಾನ ಮಾಡಲಾಯಿತು. ಕಟ್ಟೀಮನಿಯರ ಕಥಾ ಸಾಹಿತಿ ಏರ್ಪಡಿಸಿ ವಿಮರ್ಶಾ ಸ್ಪರ್ಧೆಯಲ್ಲಿ ವೀಜೇತರಾದ ಮುಸ್ತಾಪ್ ಕೆ.ಎಚ್, ಸಹನಾ ಕಾಂತಬೈಲು, ಡಾ. ಪ್ರಸನ್ನ ಡಿ.ಜೆ, ಡಾ.ಕೊಳ್ಚಪ್ಪೆ ಗೋವಿಂದ ಭಟ್ ಇವರಿಗೆ ಸಿ.ಯು.ಬೆಳ್ಳಕ್ಕಿ ಅವರು ಬಹುಮಾನ ನೀಡಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಪ್ರತಿಷ್ಠಾನದ ಕಾರ್ಯ ಚಟುವಟಿಕೆ ಕುರಿತು ವಿವರಗಳನ್ನು ನೀಡಿದರು.

ಈ ಸಂದಭರ್ದದಲ್ಲಿ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಂಜತ್ರಿ ಸ್ವಾಗತಿಸಿದರು, ಡಾ.ರಾಮಕೃಷ್ಣ ಮರಾಠೆ ಪ್ರಾಸ್ತವಿಕವಾಗಿ ಮಾತನಾಡಿದರು,  ಶಿವಕುಮಾರ ಕಟ್ಟೀಮನಿ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button