ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 2 ಕೋಟಿ ರೂ ವೆಚ್ಚದಲ್ಲಿ 100 ಅಡಿ ವೃತ್ತ ಸುಧಾರಣೆ ಹಾಗೂ ರಸ್ತೆಯ 4 ಕಡೆ 10 ಮೀಅರ್ ರಸ್ತೆ ಅಗಲೀಕರಣ ಹೈಮಾಸ್ಕ್ ಲೈಟ್ ಗಳ ಅಳವಡಿಕೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸಾರಿಗೆ ಸಂಪರ್ಕ ಉತ್ತಮ ರೀತಿಯಲ್ಲಿ ಮಾಡಿದಾಗ ಪ್ರಯಾಣಿಕರ ಸಂಚಾರಕ್ಕೆ ಸುಗುಮಗೊಳಿಸಲಾಗುವುದು. ಹೀಗಾಗಿ ನನ್ನ ಪ್ರಜೆಗಳ ಅನುಕೂಲಕ್ಕಾಗಿ ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ಅಪಘಾತಗಳಿಂದಾಗುವ ಜೀವ ಹಾನಿ ತಪ್ಪಿಸಬಹುದು. ನಿಪ್ಪಾಣಿಯಾದ್ಯಂತ ಸುಗಮ ಸಂಚಾರ ವ್ಯವಸ್ಥೆಗೆ ಪಣ ತೊಟ್ಟಿದ್ದು, ಹಂತ ಹಂತವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲಾಗುವುದು ಎಂದರು.
ಇದೇ ವೆಳೆ ನಿಪ್ಪಾಣಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಯೋಜನೆ, ಪ್ರಮುಖ ರಸ್ತೆಗಳ ಡಾಂಬರೀಕರಣ, ಸಮುದಾಯ ಭವನ, ಅಂಗನಾಡಿ ಕಟ್ಟಡ, ಶಾಲಾ ಕಟ್ಟಡ ಕೋಣೆ ಸೇರಿದಂತೆ ಮಂದಿರಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ನೀಡಿ ಸಮಗ್ರ ಅಭಿವೃದ್ಧಿಗೆ ಸಚಿವರು ಮುಂದಾಗಿದ್ದಾರೆ ಎಂದು ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ ತಿಳಿಸಿದರು.
ಈ ವೇಳೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಿದ್ದೇಶ್ವರ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ