ವಿದ್ಯುತ್ ಕಳ್ಳತನಕ್ಕೆ 1.87 ಲಕ್ಷ ರೂ ದಂಡ, ವಿವಿಧ ಅರ್ಜಿ ಆಹ್ವಾನ ಮತ್ತಿತರ ಸುದ್ದಿಗಳು
ಸಹಾಯಧನ ಅರ್ಜಿ ಆಹ್ವಾನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ತಾಲ್ಲೂಕಿನ ತೋಟಗಾರಿಕೆ ಇಲಾಖೆ (ಜಿ.ಪಂ) ವತಿಯಿಂದ ೨೦೨೦-೨೧ ನೇ ಸಾಲಿನ ಹಣ್ಣು/ತರಕಾರಿ ಮಾರಾಟ ಮಾಡಲು ತಳ್ಳುವ ಗಾಡಿಗೆ ಸಹಾಯಧನ ನೀಡಲು ಕಾರ್ಯಕ್ರಮ ಅನುಮೊದನೆಯಾಗಿದ್ದು ಅದರಂತೆ ಒಟ್ಟು ತಳ್ಳುವ ಗಾಡಿ ನಿರ್ಮಾಣದ ವೆಚ್ಚ ರೂ. ೩೦,೦೦೦/- ಗಳಷ್ಟಿದ್ದು, ರೂ.೧೫,೦೦೦/-ಗಳ ಸಹಾಯಧನ ಪಡೆದುಕೊಳ್ಳುವುದಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳಗಾವಿ ತಾಲ್ಲೂಕಿನ ಆಸಕ್ತ ಹಣ್ಣು ಮತ್ತು ತರಕಾರಿ ಮಾರಟಗಾರರು ಈ ಕೂಡಲೇ ತಮ್ಮ ಆಧಾರ ಕಾರ್ಡ ಹಾಗೂ ಭಾವಚಿತ್ರ ದಾಖಲೆಗಳ ಜೊತೆಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ (ಮೊಬೈಲ್ ಸಂಖ್ಯೆ: ೯೯೬೪೨೯೫೯೮೭) / ತಾಲ್ಲೂಕು ತೋಟಗಾರಿಕೆ ಕಚೇರಿಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಬೆಳಗಾವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೇ.೫೦%ರ ರಿಯಾಯಿತಿಯಲ್ಲಿ ಮಾರಾಟ
ಗಣರಾಜ್ಯೋತ್ಸವದ ಅಂಗವಾಗಿ ೨೦೨೧ರ ಜನವರಿ ತಿಂಗಳು ಪೂರ್ತಿ ಕನ್ನಡ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ.೫೦%ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲ ಸಿರಿಗನ್ನಡ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತವೆ ಎಂದು ಕನ್ನಡ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಅಂತರ್ಜಾಲಗಳಲ್ಲಿಯೂ ಪುಸ್ತಕಗಳನ್ನು ಆಯ್ಕೆ ಮಾಡಿ ಆನ್ಲೈನ್ ಮೂಲಕ ಹಣ ಪಾವತಿಸಿ ಶೇ.೫೦%ರ ರಿಯಾಯಿತಿಯಲ್ಲಿ ಪುಸ್ತಕಗಳನ್ನು ಅಂಚೆ ಮೂಲಕ ಪಡೆಯಬಹುದಾಗಿದೆ.
ವಿದ್ಯುತ್ ಕಳ್ಳತನ: ಹೆಸ್ಕಾಂ ದಾಳಿ
ಬೆಳಗಾವಿಯ ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯವರು ಜನೇವರಿ ೨, ೨೦೨೧ ರಂದು ನಗರದ ನೆಹರು ನಗರದಲ್ಲಿ ಸೆವೇನ ಬಿನ್ಸ್ ಹೊಟೇಲ್ ಮೇಲೆ ದಾಳಿ ನಡೆ ವಿದ್ಯುತ್ ಕಳ್ಳತನ ಆರೋಪ ಕಂಡುಬಂದಿದ್ದು ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯಲ್ಲಿ ಸಂಜ್ಞಾ ಪ್ರಕರಣ ದಾಖಲಾಗಿದೆ.
ಆರೋಪಿತರಿಗೆ ಬಿ.ಬಿ.ಸಿ ಶುಲ್ಕ ೧,೭೩,೯೬೯ ರೂಪಾಯಿ ಮತ್ತು ರಾಜೀ ಶುಲ್ಕ ೧೪,೦೦೦ ರೂಪಾಯಿ, ಒಟ್ಟು ೧,೮೭,೯೬೯ ರಾಪಾಯಿ ಶುಲ್ಕ ವಿಧಿಸಲಾಗಿದೆ ಎಂದು ಹು.ವಿ.ಸ.ಕಂ.ನಿ ಜಾಗೃತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್.ಪಿ ರವಿಂದ್ರ ಗಡಾದಿ, ಡಿ.ಎಸ್.ಪಿ ವಿಜಯಕುಮಾರ, ವಿ.ತಳವಾರ ಹೆಸ್ಕಾಂ ಜಾಗೃತ ಘಟಕದ ಅವರ ಮಾರ್ಗದರ್ಶನದಲ್ಲಿ ದಾಳಿ ಕೈಗೊಳ್ಳಲಾಗಿದ್ದು, ದಾಳಿ ಸಮಯದಲ್ಲಿ ಎ.ಇ.ಇ ಆಯ್ ನೀರಲಕಟ್ಟಿ, ಪೊಲೀಸ್ ಇನ್ಸ್ಪೆಕ್ಟರ್
ಟಿ.ಟಿ.ನೀಲಗಾರ, ಎ.ಇ ಪಿ.ಎನ್.ಸಂಶಿ ಮತ್ತು ಹೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಅರ್ಜಿ ಆಹ್ವಾನ
ಕರ್ನಾಟಕ ಇನ್ಸ್ಟಿಟ್ಯೂಟ್ ಆಪ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ಬೆಳಗಾವಿಯವರ ಅಡಿಯಲ್ಲಿ ೬ ತಿಂಗಳ ಅವಧಿಯ ದೂರ ಶಿಕ್ಷಣ (ಡಿ.ಸಿ.ಎಂ) ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ಮೆಂಟ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿದ ಸಹಕಾರಿ ಸಂಘ-ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತರಬೇತಿಗೆ ಅರ್ಜಿ ಸಲ್ಲಿಸಬಹುದು.
ತರಬೇತಿಯು ಸಂಪರ್ಕ ರಹಿತ(ದೂರ ಶಿಕ್ಷಣ) ವಾಗಿದ್ದು, ಸಹಕಾರಿ ಸಂಘಗಳ ಸಿಬ್ಬಂದಿಗಳು ಪದೋನ್ನತಿ ಹೊಂದಲು ತರಬೇತಿ ಕಡ್ಡಾಯವಾಗಿದೆ. ಸಹಕಾರಿ ಸಂಘ-ಸಂಸ್ಥೆಯಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳು ಮಾತ್ರ ತರಬೇತಿ ಪಡೆಯಲು ಅರ್ಹರು ಎಂದು ಕೆ.ಐ.ಸಿ.ಎಂ. ಪ್ರಾಂಶುಪಾಲರಾದ ಎನ್.ಎಂ.ಶಿವಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ೨೦೨೧ ಜನವರಿ ತಿಂಗಳಿನಿಂದ ಖುದ್ದಾಗಿ ಅಥವಾ ಆನ್ಲೈನ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು ಕೆ.ಐ.ಸಿ.ಎಂ. ರಾಮತೀರ್ಥನಗರ ಬೆಳಗಾವಿ ದೂರವಾಣಿ ಸಂಖ್ಯೆ: ೦೮೩೧-೨೯೫೦೦೨೬, ಮೋ: ೭೨೫೯೭೨೯೧೦೪, ೮೮೮೪೨೫೯೫೪೫, ೬೩೬೦೪೭೫೦೨೯, ೮೦೫೦೫೩೩೨೦೭ ಸಂಪರ್ಕಿಸಿ.
ಶಸ್ತ್ರ ಚಿಕಿತ್ಸೆ ಶಿಬಿರ
ಜನೇವರಿ ೨೦೨೧ರ ಮಾಹೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಉದರದರ್ಶಕ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ಜನೇವರಿ ೮ ರಿಂದ ೨೮ರ ವರೆಗೆ ಅಥಣಿ ತಾಲೂಕಿನ ಸಾರ್ವಜನಿಕ ಆರೋಗ್ಯ ಕೇಂದ್ರ ಕಾಗವಾಡ ದಲ್ಲಿ ಜರುಗಲಿದೆ , ದಿ. ಜನೇವರಿ ೨೦ರಂದು ಚಿಕ್ಕೋಡಿ ತಾಲೂಕಿನ ಸಾರ್ವಜನಿಕ ಆರೋಗ್ಯ ಕೇಂದ್ರ ಯಕ್ಸಂಬಾ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರ ಕಬ್ಬೂರ ನಲ್ಲಿ ಜರುಗಲಿದೆ, ಜ. ೨೧ರಂದು ಗೋಕಾಕ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಲಿದೆ. ಹಾಗೂ ಜನೇವರಿ ೭ ರಂದು ಸಾರ್ವಜನಿಕ ಆರೋಗ್ಯ ಕೇಂದ್ರ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಕನೇವರಿ ೨೧ರಂದು ಸಾರ್ವಜನಿಕ ಆಸ್ಪತ್ರೆ ಹುಕ್ಕೇರಿ, ೨೨ರಂದು ಸಾರ್ವಜನಿಕ ಆರೋಗ್ಯ ಕೇಂದ್ರ ಸಂಕೇಶ್ವರ ಹಾಗೂ ಜನೇವರಿ ೨೩ರಂದು ಸಾರ್ವಜನಿಕ ಆರೋಗ್ಯ ಕೇಂದ್ರ ನಿಡಸೋಶಿಯಲ್ಲಿ ಜರುಗಲಿದೆ.
ಜನೇವರಿ ೨೩ ರಂದು ರಾಯಬಾಗ ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ಸರಕಾರಿ ಆರೋಗ್ಯ ಕೇಂದ್ರ ಮುಗಳಖೋಡ ಹಾಗೂ ೨೭ರಂದು ಸಾರ್ವಜನಿಕ ಆಸ್ಪತ್ರೆ ರಾಯಬಾಗ ಹಾಗು ಸರಕಾರಿ ಆರೋಗ್ಯ ಕೇಂದ್ರ ಕುಡಚಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜನೇವರಿ ೨೦ರಂದು ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿ ಹಾಗೂ ಸಾರ್ವಜನಿಕ ಆಸ್ಪತ್ರೆ ಬೈಲಹೊಂಗಲನಲ್ಲಿ ಜರುಗಲಿದೆ. ಜನೇವರಿ ೮ ರಂದು ಸರಕಾರಿ ಆರೋಗ್ಯ ಕೇಂದ್ರ ನಾಗನೂರ ಜ.೨೦ ರಂದು ಸರಕಾರಿ ಆರೋಗ್ಯ ಕೇಂದ್ರ ಕಿತ್ತೂರ ಹಾಗು ಪ್ರತಿ ಬುಧವಾರ ಸಾರ್ವಜನಿಕ ಆಸ್ಪತ್ರೆ ಬೈಲಹೊಂಗಲ ನಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜನೇವರಿ ತಿಂಗಳು ಪ್ರತಿ ದಇನ ಸಾರ್ವಜನಿಖ ಆಸ್ಪತ್ರೆಯಲ್ಲಿ ಹಾಗು ಪ್ರತಿ ಶನಿವಾರ ಸರಕಾರಿ ಆರೋಗ್ಯ ಕೇಂದ್ರ ನಂದಗಡ ಜ.೭ ರಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ೨೭ರಂದು ಶಾವ್ಜನಿಕ ಆಸ್ಪತ್ರೆ ರಾಮದುರ್ಗ ಹಾಗೂ ಸರಕಾರಿ ಆರೋಗ್ಯ ಕೇಂದ್ರ ಹೊಸಕೋಟೆ, ಜ.೦೭ರಿಂದ ೨೧ರ ವರೆಗೆ ಸಾರ್ವಜನಿಕ ಆಸ್ಪತ್ರೆ ಸವದತ್ತಿ, ೨೦ರಂದು ಸರಕಾರಿ ಆರೋಗ್ಯ ಕೇಂದ್ರ ಯರಗಟ್ಟಿಯಲ್ಲಿ ಶಿಬಿರವನ್ನು ಹಮ್ಮಿಕೊಳ್ಳಾಗಿದೆ.
ಪ್ರತಿ ಬುಧವಾರ ಬೆಳಗಾವಿಯಲ್ಲಿ ಅರ್ಹ ಮಹಿಳೆಯರಿಗಾಗಿ ಟ್ಯುಬೆಕ್ಟಮಿ ಮತ್ತು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಮಾಡಲಾಗುವದು.
ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಪ್ಯಾಮಿಲಿ ಅಸೋಶೀಯೇಶನ್ ಆಫ್ ಇಂಡಿಯಾ, ಹಿಂದವಾಡಿ ಬೆಳಗಾವಿಯಲ್ಲಿ ಅರ್ಹ ಮಹಿಳೆಯರಿಗೆ ಟ್ಯುಬೆಕ್ಟಮಿ ಮತ್ತು ಉದರ ದರ್ಶಕ ಚಿಕಿತ್ಸೆ ಮಾಡಲಾಗುವದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಹಾರ ವಹಿವಾಟು ಮಾಡುವವರಿಗೆ ೫ ಲಕ್ಷ ರೂ.ದಂಡ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ನೊಂದಣಿ ಇಲ್ಲದೇ ಆಹಾರ ವಹಿವಾಟು ಮಾಡುವವರಿಗೆ, ಜನರಿಗೆ ಸುರಕ್ಷಿತವಲ್ಲದ ಆಹಾರ ಪೂರೈಸಿಸುವವರಿಗೆ, ಆಹಾರ ಕಲಬೆರಕೆ ಮಾಡುವವರಿಗೆ, ಹಾಲಿನ ಕಲಬೆರಕೆ ಮಾಡುವವರಿಗೆ ೬ ತಿಂಗಳ ಜೈಲು ವಾಸ ಹಾಗೂ ೫ ಲಕ್ಷದ ವರೆಗೆ ದಂಡ ವಿದಿಸಲಾಗುವುದು. ಜಿಲ್ಲೆಯ ಎಲ್ಲ ಆಹಾರ ವಹಿವಾಟು ಮಾಡುವವರು, ಹೊಟೇಲ ಮಾಲಿಕರು ಆಹಾರ ತಯಾರಿಸುವವರು, ಹಾಲಿನ ಉತ್ಪಾದಕರು ಹಾಗೂ ಇತರೆ ಯಾವುದೇ ಆಹಾರ ವರ್ತಕರು ಕಡ್ಡಾಯವಾಗಿ ಎಫ್.ಎಸ್.ಎಸ್.ಎ ಅಡಿಯಲ್ಲಿ ನೊಂದಣಿ/ಪರವಾಣಿಗೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ ಅವರು ಹೇಳಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ ೦೪-ರಂದು ಜಿಲ್ಲಾಮಟ್ಟದ ಸಲಹಾ ಸಮಿತಿಯ ಮಾನ್ಯ ಸಭೆ ನಡೆಸಲಾಯಿತು.
ಸುರಕ್ಷಿತ ಆಹಾರ ಪೂರೈಸುವದರೊಂದಿಗೆ ಎಲ್ಲ ಅಧಿಕಾರಿಗಳು ಸಹ ಈ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.
ಸುರಕ್ಷಿತವಲ್ಲದ ಆಹಾರ, ಆಹಾರವೇ ಅಲ್ಲ. ಆಹಾರವು ಕೇವಲ ಎಲೆಯಲ್ಲ ಊಟ ಬಡಿಸುವುದಲ್ಲ, ಅದು ಮನಸ್ಸು ಹಾಗೂ ದೇಹದ ಆರೋಗ್ಯಕ್ಕೆ ಹಿತಕರವಾಗಿರಬೇಕು. ನಾವು ಸೇವಿಸುವ ಆಹಾರ ಜನರಿಗೆ ಹಾಗೂ ಪರಿಸರಕ್ಕೆ ಹಿತಕರವಾಗಿರಬೇಕು. ಸುರಕ್ಷಿತ ಮತ್ತು ಆರೋಗ್ಯಕರ ಆಹಾರ ಸಾಮಾನ್ಯ ಜನರಿಗೆ ತಲುಪಿಸಬೇಕು. ಬಳಕೆದಾರನ ಅಪೇಕ್ಷೆಗೆ ತಕ್ಕಂತೆ ಆರೋಗ್ಯಕ್ಕೆ ಹಾನಿಕಾರಕವಲ್ಲದ ಆಹಾರ ಪೂರೈಕೆ ಮಾಡಬೇಕು. ಉತ್ಪಾದನೆ, ಸಂಸ್ಕರಣೆ, ವಿತರಣೆ, ಸಾಗಾಣಿಕೆ, ಮಾರಾಟ ಎಲ್ಲಾ ಹಂತಗಳಲ್ಲೂ ಸುರಕ್ಷಿತಗಾಗಿ, ಉತ್ಪಾದನೆಯಿಂದ ಉಣ್ಣುವವರೆಗೆ ಆಹಾರದ ಸುರಕ್ಷತೆ ವಹಿಸುವ ಬಗ್ಗೆ ಕಾಳಜಿವಹಿಸಬೇಕು ಎಂದು ಎಂದು ಎಫ್.ಎಸ್.ಎಸ್.ಎ ಯ ಜಿಲ್ಲಾ ಅಂಕಿತ ಅಧಿಕಾರಿಗಳಾ ಡಾ. ರಾಜೇಂದ್ರ ಭಾಲ್ಕೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು. ಕ. ಅಧಿಕಾರಿಗಳಾದ ಡಾ. ಮುನ್ಯಾಳ, ಜಿಲ್ಲಾ ಅಂಕಿತಧಿಕಾರಿಗಳಾದ ಡಾ: ರಾಜೇಂದ್ರ ಭಾಲ್ಕೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹಾಗೂ ಆಹಾರ ವಿಶ್ಲೇಷಕರು, ತಲೂಕಿನ ಎಲ್ಲ ಆಹಾರ ಸುರಕ್ಷತಾಧಿಕಾರಿಗಳು ಮತ್ತು ಹೊಟೇಲ ಮಾಲಿಕರ ಸಂಘದ ಅಧ್ಯಕ್ಷರಾದ ವಿಜಯ ಸಾಲಿಯಾನ ಮತ್ತು ಅಜಯ ಪೈ ಪಾಲ್ಗೊಂಡಿದ್ದರು.
ಅರ್ಜಿ ಆಹ್ವಾನ
ಬೆಳಗಾವಿ, ಡಿ.೦೪ (ಕರ್ನಾಟಕ ವಾರ್ತೆ): ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೦೧೯-೨೦ ನೇ ಸಾಲಿನ ದೀನ್ ದಯಾಳ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ದ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಉಪಘಟಕದಡಿ ಉಚಿತ ತರಬೇತಿಗಳನ್ನು ಹೊಂದಲು ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ತರಬೇತಿ ನೀಡಲಾಗುವದು. ಆಸಕ್ತಿವುಳ್ಳವರು ಜ. ೧೫, ೨೦೨೧ ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ನಮ್ಮ ಶಾಖೆ, ಮಹಾನಗರ ಪಾಲಿಕೆ, ಬೆಳಗಾವಿ ಇಲ್ಲಿ ಸಮುದಾಯ ಸಂಘಟನಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಹಾ ನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಸಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭ
ಶ್ರೀ ಗಳಗನಾಥ ಮತ್ತು ಶ್ರೀ ರಾಜಪುರೋಹಿತ್ ಪ್ರತಿಷ್ಠಾನ ಹಾವೇರಿ ೨೦೧೯ರ ಗಳಗನಾಥ ಸಾಹಿತ್ಯ ಹಾಗೂ ರಾಜಪುರೋಹಿತ ಸಂಶೋಧಕ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ ೫ ಮಂಗಳವಾರ ೧೧:೦೦ ಗಂಟೆಗೆ ಬಸವರಾಜ ಕಟ್ಟಿಮನಿ ಸಭಾಭವನದಲ್ಲಿ ಜರುಗಲಿದೆ ಎಂದು ಪ್ರೊ ದುಷ್ಯಂತ ನಾಡಗೌಡ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸೋಮವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಿನಾಂಕ ೫ ರಂದು ಡಾ. ಬಾಳಾಸಾಹೇಬ್ ಲೋಕಾಪುರ್ ಅವರಿಗೆ ಗಳಗನಾಥ ಪ್ರಶಸ್ತಿ ಹಾಗೂ ಹನುಮಾಕ್ಷಿ ಗೋಗಿ ಅವರಿಗೆ ರಾಜಪುರೋಹಿತ ಪ್ರಶಸ್ತಿಯನ್ನು ವಿತರಿಸಲಾಗುವುದೆಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಸಂಪದ ಅಧ್ಯಕ್ಷರಾದ ಡಾ ಅರವಿಂದ ಕುಲಕರ್ಣಿ ಅವರು ಮಾಡಲಿದ್ದು, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ರಾಮಚಂದ್ರಗೌಡ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಾಹಿತಿಗಳಾದ ಪ್ರೊ ಮಾಲತಿ ಪಟ್ಟಣಶೆಟ್ಟಿ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ. ಹಾಗೂ ಪ್ರೊ.ದುಷ್ಯಂತ ನಾಡಗೌಡ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಕಿರುಪರಿಚಯ:
ಡಾ. ಬಾಳಾಸಾಹೇಬ ಲೋಕಾಪುರ: ಇವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಟ್ಟಿ ಗ್ರಾಮದವರು ಹುಟ್ಟಿದ್ದು ೧-೮-೧೯೫೫ . ಎಮ್ಮೆ ಭೂಗೋಳಶಾಸ್ತ್ರದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದು ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಜೈನ ಸಂವೇದನೆ ಎಂಬ ವಿಷಯದಲ್ಲಿ ಡಾ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಪಿಎಚ್ಡಿ ಪಡೆದಿದ್ದಾರೆ.
ಕನ್ನಡದ ಬಹುಮುಖ್ಯ ಕದನಕಾರರು ಡಾಕ್ಟರ್ ಬಾಳಾಸಾಹೇಬ ಲೋಕಾಪುರ ಅವರು ಜಾತಿ ಧರ್ಮ ಮತ್ತು ಮನುಷ್ಯ-ಸಂಬಂಧಗಳ ಸೈದಾಂತಿಕ ಮೂಲಕ ನೋಡದೆ ಅನುಭವಗಳ ಮೂಲಕ ನೋಡಿದ್ದು ವಿಶೇಷವಾಗಿದೆ ಧಾರ್ಮಿಕವಾಗಿ ಜೈನ ಧರ್ಮದ ರಾಗಿದ್ದರು ಆಚೆಗಿರುವ ಪ್ರಯತ್ನವನ್ನು ತಮ್ಮ ಕಥನದಲ್ಲಿ ಸೃಷ್ಟಿಸುತ್ತಲೇ ಬಂದಿದ್ದಾರೆ.
ಚಲನಶೀಲ ಸಾಹಿತ್ಯದ ಜೊತೆಗೆ ವಿಮರ್ಶೆ ಸಂಶೋಧನೆ ಹಾಗೂ ಸಂಪಾದನೆ ಕ್ಷೇತ್ರದಲ್ಲಿಯೂ ಸಾಕಷ್ಟು ದುಡಿದಿದ್ದಾರೆ. ಬಾಗಲಕೋಟೆಯ ಹಾಕ್ರಿ ಪದವಿಪೂರ್ವ ಕಾಲೇಜಿನಲ್ಲಿ ಭೂಗೋಳಶಾಸ್ತ್ರದ ಉಪನ್ಯಾಸಕರ ಕಾರ್ಯನಿರ್ವಹಿಸಿದ ಅಥಣಿಯಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇವರು ಸದ್ಯಕ್ಕೆ ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ರಸ್ತೆ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಡಾ.ಹನುಮಾಕ್ಷಿ ಗೋಗಿ: ವೃತ್ತಿಯಿಂದ ಸರಕಾರಿ ಅಧಿಕಾರಿಯಾಗಿದ್ದರೂ ಪ್ರವೃತ್ತಿಯಿಂದ ಶಾಸನ ಸಂಶೋಧಕಿಯಾಗಿ ಹನುಮಾಕ್ಷಿ ಗೋಗಿಯವರು ಬೆಳೆಯಲು ಕಾರಣ ಉಪನ್ಯಾಸಕ ವೃತ್ತಿ ದೊರೆಯದಿದ್ದರೂ ಡಾ. ಕಲಬುರ್ಗಿಯವರಿಂದ ಪ್ರೇರಿತಗೊಂಡ ಅವರ ಮನಸ್ಸು ಶಾಸನಗಳ ಸೆಳೆತಕ್ಕೆ ಒಳಗಾದುದು.
೧೯೭೬ ರಲ್ಲಿ ಮೂರು ಸುವರ್ಣ ಪದಕಗಳೊಂದಿಗೆ ಕನ್ನಡ ಎಂ.ಎ ಜೊತೆಗೆ ಶಾಸನಶಸ್ತ್ರದಲ್ಲಿಯೂ ಅವರು ಡಿಪ್ಲೋಮಾ, ೫-೬ ವರ್ಷ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿ ನಂತರ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಗೊಂಡು ಸಹಕಾರ ಇಲಾಖೆ, ಬೃಹತ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಿ. ಜಿ. ಪಠಾಣ ಶ್ರೀ ಗಳಗನಾಥ ಮತ್ತು ಶ್ರೀ ರಾಜಪುರೋಹಿತ್ ಪ್ರತಿಷ್ಠಾನಟ್ರಸ್ಟಿ ವಸಂತರಾಜ ಹಾಗೂ ಶ್ರೀ ಗಳಗನಾಥ ಮತ್ತು ಶ್ರೀ ರಾಜಪುರೋಹಿತ್ ಪ್ರತಿಷ್ಠಾನ ದ ಹಿತೈಶಿ ಯು. ಕೆ. ಕುಲ್ಕರ್ಣಿ ಹಾಗು ಪತ್ರಕರ್ತರು ಸಭೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ