Latest

ಟಗರು ಕಾಳಗ: ಶಂಕಿತ ಆರೋಪಿತರ ವಿಚಾರಣೆ

ಪ್ರಗತಿವಾಹಿನಿ ಸುದ್ದಿ, ಶಿರಸಿ – ಕಳೆದ ಎರಡು ದಿನಗಳ ಹಿಂದೆ ಶಿರಸಿಯ ಕಸ್ತೂರ ಬಾ ನಗರದಲ್ಲಿ ಟಗರು ಕಾಳಗ ಜೂಜಾಟದಲ್ಲಿ ಭಾಗಿಯಾಗಿದ್ದಾರೆ  ಎನ್ನಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯಚರಣೆ ನಡೆಸಿದ ಮಾರ್ಕೆಟ್ ಠಾಣೆ ಪೋಲಿಸರು 8 ಜನರನ್ನು ವಶಕ್ಕೆ ಪಡೆದಿದ್ದಾರೆ.
ಉಸ್ಮಾನ ಶಬ್ಬಿರ ಮುಲ್ಲಾ ಕಸ್ತೂರ ಬಾ ನಗರ, ಫರಾನ್ ರುಸ್ತುಸಾಬ ಹುಬ್ಬಳ್ಳಿ  ನೆಹರೂನಗರ, ಮಹ್ಮದ್ ಅಕ್ಬರ್ ಇಸಳೂರ, ಮಹ್ಮದ್ ಶಫಿ ಹುಸೇನ್ ಮಿಯಾ ಬಂಕಾಪುರ ನೆಹರೂನಗರ, ಅರ್ಷದ್ ಇಕ್ಬಾಲ್ ಬಾಷ ಗೌಡಳ್ಳಿ, ಸಮೀರ್ ಮೆಹತಾಬ್ ಖಾನ್ ನೆಹರೂನಗರ, ನಾಸೀರ್ ಶೇಖ್ ಬಾಬಸಾಬ ನೆಹರೂನಗರ, ಅಲಿ ಅಹ್ಮದ್ ಸೈಯ್ಯದ್ ಅಹ್ಮದ್ ಕಸ್ತೂರ ಬಾ ನಗರ ಪೊಲೀಸ್ ವಶದಲ್ಲಿದ್ದಾರೆ.
 ಶಂಕಿತರನ್ನು  ಇಂದು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿ ಶಂಕಿತ ಆರೋಪಿತರ ಮೇಲೆ ಕರ್ನಾಟಕ ಪೊಲೀಸ್ ಅಧಿನಿಯಮದ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.

Related Articles

Back to top button