
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನೂತನ ಸಚಿವ ಸಿ.ಪಿ.ಯೋಗೇಶ್ವರ್ ನನ್ನ ಬಳಿ ಯಾವುದೇ ಸಾಲ ಪಡೆದಿಲ್ಲ, ಮನೆಯನ್ನೂ ಅಡವಿಟ್ಟಿಲ್ಲ ಎಂದು ಎಂಟಿಬಿ ನಾಗರಾಜ್ ಪುನರುಚ್ಛರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನನ್ನ ಬಳಿ ಮನೆ ಅಡವಿಟ್ಟಿಲ್ಲ. ಯಾವುದೇ ಆಸ್ತಿ ಅಡವಿಟ್ಟು ಸಾಲವನ್ನೂ ಪಡೆದುಕೊಂಡಿಲ್ಲ. ರಮೇಶ್ ಜಾರಕಿಹೊಳಿ ಯಾಕೆ ಹಾಗೆ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ನಾನು ಅವರನ್ನೇ ಕೇಳುತ್ತೇನೆ ಎಂದು ಹೇಳಿದರು.
ಇನ್ನು ಸಿಡಿ ವಿಚಾರವಾಗಿ ಮಾತನಾಡಿದ ನಾಗರಾಜ್, ಸಿಡಿ ಎಂಬುದು ಕೇವಲ ಅಂತೆ ಕಂತೆಯಷ್ಟೇ. ಯಾವುದೇ ಸಿಡಿ ಇಲ್ಲ. ಒಂದು ವೇಳೆ ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ